ಕಾಂಗ್ರೆಸ್ ಬೆಲ್ಲದ ಮಾತಿಗೆ ಮರುಳಾಗುವುದು ಬೇಡಿ: ರಾಜಣ್ಣ

| Published : Apr 23 2024, 12:51 AM IST

ಕಾಂಗ್ರೆಸ್ ಬೆಲ್ಲದ ಮಾತಿಗೆ ಮರುಳಾಗುವುದು ಬೇಡಿ: ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡುಗೊಲ್ಲರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡುತ್ತಿರುವ ಮಾತುಗಳಿಗೆ ಮರುಳಾಗುವುದು ಬೇಡಿ.

ಚಿತ್ರದುರ್ಗ: ಕಾಡುಗೊಲ್ಲರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡುತ್ತಿರುವ ಮಾತುಗಳಿಗೆ ಮರುಳಾಗುವುದು ಬೇಡ. ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಬಿಜೆಪಿ ಗೋವಿಂದ ಕಾರಜೋಳ ಅವರನ್ನು ಬೆಂಬಲಿಸುವುದರ ಮೂಲಕ ಕೇಂದ್ರ ಸರ್ಕಾರದಲ್ಲಿ ಬೇಡಿಕೆಗಳ ಈಡೇರಿಸಿಕೊಳ್ಳೋಣವೆಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲ ಜನಾಂಗವನ್ನು ಎಸ್‌ಟಿ ಮೀಸಲಾತಿಗೆ ಸೇರಿಸುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದ ನಾಯಕರು ಭರವಸೆ ನೀಡಿದ್ದಾರೆ. ಹಾಗಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮವಹಿಸಲಾಗುವುದು ಎಂದರು.

ಕಾಡುಗೊಲ್ಲ ಜನಾಂಗವನ್ನು ಎಸ್‌ಟಿಗೆ ಸೇರಿಸಬೇಕೆಂದು ಕಳೆದ 70 ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಇದಕ್ಕೆ ಯಾರೂ ಸರಿಯಾದ ರೀತಿಯಲ್ಲಿ ಸ್ಫಂದಿಸಿಲ್ಲ. ನಮ್ಮ ಜನಾಂಗದ ಕುಲಶಾಸ್ತ್ರ ಅಧ್ಯಯನ ಮಾಡಿಸಿದ್ದು, ಜನಾಂಗವನ್ನು ಎಸ್‌ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಕಡತ ಕಳಿಸಲಾಗಿದೆ. ಅಲ್ಲಿ ನಮ್ಮ ಪರವಾಗಿ ಯಾರು ಮಾತನಾಡುವವರು ಇರದಿದ್ದ ಪರಿಣಾಮ ಹಾಗೂ ಕೆಲ ತಾಂತ್ರಿಕ ತೊಂದರೆಯಿಂದಾಗಿ ಕಡತ ವಾಪಸ್‌ ಬಂದಿತ್ತು. ಮತ್ತೆ ಸರಿಪಡಿಸಿ ಕಳಿಸಿದಾಗ ಸಚಿವ ನಾರಾಯಣಸ್ವಾಮಿ ನಮ್ಮ ಪರವಾಗಿ ಕೆಲಸ ಮಾಡಿ ಪರಿಶ್ರಮ ಹಾಕಿದ್ದಾರೆ. ಹಾಗಾಗಿ ಈ ಕೆಲಸ ಮುಂದುವರಿಸಿಕೊಂಡು ಹೋಗಲು ಕಾರಜೋಳ ಅವರನ್ನು ಗೆಲ್ಲಿಸಿಕೊಳ್ಳುವುದು ಅನಿವಾರ್ಯವೆಂದರು. ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಗೌರವಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ಉಮೇಶ್, ಜಿಪಂ ಮಾಜಿ ಸದಸ್ಯ ಅಜ್ಜಪ್ಪ, ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಚಿತ್ರದುರ್ಗ ತಾಲೂಕು ಪಂಚಾಯಿತಿ ಮಾಜಿ ಆಧ್ಯಕ್ಷ ಆನಂದ್, ಕೃಷ್ಣಪ್ಪ, ಗೋವಿಂದಪ್ಪ, ಕೃಷ್ಣಮೂರ್ತಿ ಇದ್ದರು.