ದುಶ್ಚಟಗಳಿಗೆ ಬಲಿಯಾಗದಿರಲಿ

| Published : Aug 05 2025, 01:30 AM IST

ಸಾರಾಂಶ

ಸದೃಢವಾದ ದೇಹದಲ್ಲಿ ಸದೃಢ ಮನಸ್ಸು ಇದ್ದಾಗ ಸಕಾರಾತ್ಮಕ ವಿಚಾರಗಳು ಬರುತ್ತವೆ. ಚಿತ್ತ ಚಂಚಲವಾಗದಂತೆ ಮನ ನಿಗ್ರಹಿಸಿಕೊಂಡು ಸಂಸ್ಕಾರಯುತ ಜೀವನ ಸಾಗಿಸಬೇಕು.

ಯಲಬುರ್ಗಾ:ಸಮಾಜ ಸುಧಾರಣೆಗಾಗಿ ಅನೇಕ ಮಹಾತ್ಮರು ಶ್ರಮಿಸಿದ್ದಾರೆ. ಆದರೆ, ಯುವಜನಾಂಗ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳುತ್ತಿದೆ ಎಂದು ಪ್ರಾಚಾರ್ಯ ಅಮೀದ್‌ ಅತ್ತಾರ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸ್ವಾಸ್ಥ್ಯಸಂಕಲ್ಪ ಸಮಾರಂಭದಲ್ಲಿ ಮಾತನಾಡಿದರು.

ಸದೃಢವಾದ ದೇಹದಲ್ಲಿ ಸದೃಢ ಮನಸ್ಸು ಇದ್ದಾಗ ಸಕಾರಾತ್ಮಕ ವಿಚಾರಗಳು ಬರುತ್ತವೆ. ಚಿತ್ತ ಚಂಚಲವಾಗದಂತೆ ಮನ ನಿಗ್ರಹಿಸಿಕೊಂಡು ಸಂಸ್ಕಾರಯುತ ಜೀವನ ಸಾಗಿಸಬೇಕೆಂದರು.ವೈದ್ಯಾಧಿಕಾರಿ ಡಾ. ಶೇಖರ ಭಜಂತ್ರಿ ಮಾತನಾಡಿ, ಸಾರ್ವಜನಿಕರು ಸ್ವಾವಲಂಬಿ ಜೀವನ ನಡೆಸಲು ಧರ್ಮಸ್ಥಳ ಸಂಸ್ಥೆ ನೆರವಿಗೆ ಬರುವ ಜತೆಗೆ ಪ್ರತಿಯೊಬ್ಬರ ಆರೋಗ್ಯದ ಕಾಳಜಿ ವಹಿಸುವ ನಿಟ್ಟಿನಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಶ್ರಮವಹಿಸುತ್ತಿದೆ ಎಂದರು.ಜಿಲ್ಲಾ ಜನಜಾಗೃತಿ ಸಮಿತಿ ಉಪಾಧ್ಯಕ್ಷ ಸಂಗಣ್ಣ ತೆಂಗಿನಕಾಯಿ, ಸದಸ್ಯ ಎಸ್.ಕೆ. ದಾನಕೈ, ನವಜೀವನ ಸಮಿತಿ ಅಧ್ಯಕ್ಷ ಸಿದ್ಧಾರೂಡ ಭಾವಿಕಟ್ಟಿಮಾತನಾಡಿದರು.

ಈ ವೇಳೆ ಸಂಸ್ಥೆಯ ಮೇಲ್ವಿಚಾರಕಿ ಕಾವ್ಯ ಸಿರಿಗೆರಿ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ವೀರಣ್ಣ ನಿಂಗೋಜಿ, ವಿ.ಎಸ್. ಶಿವಪ್ಪಯ್ಯನಮಠ, ವಿಜಯಲಕ್ಷ್ಮೀ ವಕ್ಕಳದ, ಬಸವರಾಜ ಹನಸಿ, ಮಹೇಶ ಕೊಳ್ಳಿ, ಮುತ್ತವ್ವ ಕುರಿ, ಮಂಜುನಾಥ ರಾಠೋಡ, ರೇಖಾರೆಡ್ದಿ, ವಿಜಯಲಕ್ಷ್ಮಿಅಂಗಡಿ, ಲಕ್ಷ್ಮೀದೇವಿಕುಂಬಾರ, ಶಾಹೀನಾ ಮಕಾನದಾರ, ಸಂಗನಗೌಡ ಪಾಟೀಲ್, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಇದ್ದರು.