ಬಣ್ಣದ ಮಾತಿಗೆ ಮರಳಾಗಿ ದೇಶ ಬಲಿ ಕೊಡಬೇಡಿ: ನಾಯಕ

| Published : Apr 07 2024, 01:48 AM IST

ಸಾರಾಂಶ

ವಿಶ್ವ ಮೆಚ್ಚಿದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಶಾಶ್ವತ ಗ್ಯಾರಂಟಿ ಯೋಜನೆ ನೋಡಿ ಬಿಜೆಪಿಗೆ ಮತ ಹಾಕಬೇಕು ಎಂದು ರಾಯಚೂರು ಲೋಕಸಭೆಯ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆ ಮತ್ತು ಭ್ರಷ್ಟಾಚಾರದ ಗ್ಯಾರಂಟಿಯ ಬಣ್ಣದ ಮಾತಿಗೆ ಮರುಳಾಗಬೇಡಿ. ವಿಶ್ವ ಮೆಚ್ಚಿದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಶಾಶ್ವತ ಗ್ಯಾರಂಟಿ ಯೋಜನೆ ನೋಡಿ ಬಿಜೆಪಿಗೆ ಮತ ಹಾಕಬೇಕು ಎಂದು ರಾಯಚೂರು ಲೋಕಸಭೆಯ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರ ನಿರ್ಮೂಲನೆಗೆ ಯಾವುದೇ ಆಸಕ್ತಿಯನ್ನು ತೆಗೆದುಕೊಂಡಿಲ್ಲ. ಏಕೆಂದರೆ ಅದು ಭ್ರಷ್ಟಾಚಾರದ ಅತಿದೊಡ್ಡ ಮೂಲವಾಗಿದೆ ಎಂದರು.

ನಾನು ಕಳೆದ ಐದು ವರ್ಷದಲ್ಲಿ ನಾನು ಸಂಸದನಾಗಿ ಅನೇಕ ಅಭಿವೃದ್ಧಿ ಮಾಡಿದ್ದೇನೆ ರೈಲ್ವೆ ಯೋಜನೆಗಳ ಕಾರ್ಯಗತ, ರೈಲು ಸಂಪರ್ಕ ವಿಸ್ತರಣೆ, ಹೆದ್ದಾರಿಗಳ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿರುವೆ ಅಲ್ಲದೇ ಯಾದಗಿರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ನಿಲುಗಡೆ ಮಾಡಲಿದೆ. ಇದಲ್ಲದೇ ಯಾದಗಿರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದು ಮುಂದಿನ ದಿನಗಳಲ್ಲಿ ಶಹಾಪುರ, ಸುರುಪುರಕ್ಕೂ ಮುಂದಿನ ದಿನಗಳಲ್ಲಿ ರೈಲ್ವೆ ಬರಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಮಾತನಾಡಿ, ಕಾಂಗ್ರೆಸ್‌ ಅಂದರೆ ಭ್ರಷ್ಟಾಚಾರ ಹಾಗೂ ಸುಳ್ಳಿನ ಗ್ಯಾರಂಟಿ. ಅವರ ವ್ಯಾರಂಟಿಯೇ ಮುಗಿದಿರುವಾಗ ಯಾವ ಗ್ಯಾರಂಟಿಯನ್ನು ಕಾಂಗ್ರೆಸ್‌ ನೀಡಲು ಸಾಧ್ಯ ಎಂದರು.

ಶಹಾಪುರ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ರಾಜಗೌಡ ಪಾಟೀಲ್, ನಗರ ಮಂಡಲ ಅಧ್ಯಕ್ಷರಾದ ದೇವೇಂದ್ರ ಕೊನೇರ್, ಮುಖಂಡರಾದ ಡಾ. ಚಂದ್ರಶೇಖರ್‌ ಸುಬೇದಾರ್, ಬಸವರಾಜ್ ವಿಭೂತಿಹಳ್ಳಿ, ಲೋಕಸಭಾ ಸಂಚಾಲಕರಾದ ಗುರುಕಾಮ, ಅಡಿವೆಪ್ಪ ಜಾಕಾ, ಭಾರತೀಯ ಜಮಖಂಡಿ, ರಾಜಶೇಖರ್‌ಗೂಗಲ್‌, ಶಿವರಾಜ್‌ದೇಶಮುಖ್, ಮಲ್ಲನಗೌಡ ಪಾಟೀಲ್‌‌, ಮಲ್ಲಿಕಾರ್ಜುನ ಕಂದುಕುರ್ ವಿಶ್ವನಾಥ್ ಹನುಮಂತ ಇಟಗಿ ರಾಘವೇಂದ್ರ ಯಕ್ಷoತಿ ಸೇರಿದಂತೆ ಇತರರಿದ್ದರು.ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರಳು ಶ್ರಮಿಸಿದ ನೂರಾರು ನಿಷ್ಠಾವಂತ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿ, ಕಾಂಗ್ರೆಸ್ ನವರು ಬೆಂಗಳೂರಿನಿಂದ ಅಭ್ಯರ್ಥಿಯನ್ನು ಕರೆತಂದು ಈ ಲೋಕಸಭಾ ಕ್ಷೇತ್ರಕ್ಕೆ ನಿಲ್ಲಿಸಿದ್ದು ಅವರಿಂದ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ.

- ರಾಜಾ ಅಮರೇಶ್ವರ ನಾಯಕ, ರಾಯಚೂರು ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ.