ಡೋಣೂರಮಠ ಕಾರ್ಯ ಯುವ ಜನತೆಗೆ ಮಾದರಿ

| Published : Jul 16 2024, 12:33 AM IST

ಸಾರಾಂಶ

ಪ್ರತಿ ಬಾರಿ ತಮ್ಮ ಹುಟ್ಟುಹಬ್ಬದ ದಿನದಂದು ಸಾರ್ವಜನಿಕವಾಗಿ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಒಳ್ಳೆಯ ಕಾರ್ಯವನ್ನು ಮಾಡುತ್ತ ಬಂದಿರುವ ಯುವ ಮುಖಂಡ ಪ್ರಕಾಶ ಡೋಣೂರಮಠ ಕಾರ್ಯ ಇತರರಿಗೆ ಮಾದರಿ ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪ್ರತಿ ಬಾರಿ ತಮ್ಮ ಹುಟ್ಟುಹಬ್ಬದ ದಿನದಂದು ಸಾರ್ವಜನಿಕವಾಗಿ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಒಳ್ಳೆಯ ಕಾರ್ಯವನ್ನು ಮಾಡುತ್ತ ಬಂದಿರುವ ಯುವ ಮುಖಂಡ ಪ್ರಕಾಶ ಡೋಣೂರಮಠ ಕಾರ್ಯ ಇತರರಿಗೆ ಮಾದರಿ ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ ಹೇಳಿದರು.

ತಾಲೂಕಿನ ಸಾತಿಹಾಳ ಗ್ರಾಮದ ಯುವ ಮುಖಂಡ ಪ್ರಕಾಶ ಡೋಣೂರಮಠ ಹುಟ್ಟು ಹಬ್ಬದ ಪ್ರಯುಕ್ತ ಬಸ್ ನಿಲ್ದಾಣದ ಹತ್ತಿರ ಹಾಗೂ ಸಮೀಪದ ಭೈರವಾಡಗಿ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಶೌಚಾಲಯ ನಿರ್ಮಾಣ ಮಾಡುವ ಮೂಲಕ ಇತರರಿಗೆ ಮಾದರಿ ಕಾರ್ಯವಾಗಿದೆ. ಪ್ರತಿ ವರ್ಷ ಜು.15ರಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಧಾರ್ಮಿಕವಾಗಿ ಸಹಾಯ ಸಹಕಾರ ನೀಡುವ ಮೂಲಕ ಜನ್ಮದಿನದಂದು ದುಂದು ವೆಚ್ಚ ಮಾಡದೇ ತಾವು ದುಡಿದ ಹಣದಲ್ಲಿ ಕೈಲಾದಷ್ಟು ತಮ್ಮ ತಮ್ಮ ಗ್ರಾಮಗಳಲ್ಲಿ ಸಾಮಾಜಿಕ ಕಾರ್ಯಗಳು ಮಾಡುವ ಮೂಲಕ ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಮುಖಂಡರಾದ ಸೋಮು ಹಿರೇಮಠ, ಚನ್ನು ದಾನಗೊಂಡ, ಬೀರು ದೇವೂರ, ಆದರ್ಶ ಡೋಣೂರಮಠ, ಚೇತನ್ ಸಾಸಟ್ಟಿ, ಸಿದ್ದು ಮಾಗಿ, ಬಾಬು ಅವಟಿ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.ಮಹಿಳೆಯರು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಶೌಚಾಲಯ ನಿರ್ಮಾಣ ಮಾಡುವ ಮೂಲಕ ಇತರರಿಗೆ ಮಾದರಿ ಕಾರ್ಯವಾಗಿದೆ. ಪ್ರತಿ ವರ್ಷ ಜು.15ರಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಧಾರ್ಮಿಕವಾಗಿ ಸಹಾಯ ಸಹಕಾರ ನೀಡುವ ಮೂಲಕ ಜನ್ಮದಿನದಂದು ದುಂದು ವೆಚ್ಚ ಮಾಡದೇ ತಾವು ದುಡಿದ ಹಣದಲ್ಲಿ ಕೈಲಾದಷ್ಟು ತಮ್ಮ ತಮ್ಮ ಗ್ರಾಮಗಳಲ್ಲಿ ಸಾಮಾಜಿಕ ಕಾರ್ಯಗಳು ಮಾಡುವ ಮೂಲಕ ಯುವ ಜನತೆಗೆ ಮಾದರಿಯಾಗಿದ್ದಾರೆ.

-ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ, ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು.