ಮನೆ–ಮನೆಗೆ ಪೊಲೀಸ್‌ ಪರಿಕಲ್ಪನೆ ಅನುಷ್ಠಾನ ಅಭಿಯಾನಕ್ಕೆ ಚಾಲನೆ

| Published : Jul 15 2025, 01:06 AM IST / Updated: Jul 15 2025, 01:07 AM IST

ಮನೆ–ಮನೆಗೆ ಪೊಲೀಸ್‌ ಪರಿಕಲ್ಪನೆ ಅನುಷ್ಠಾನ ಅಭಿಯಾನಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಸೇವೆ ಪ್ರತಿ ಮನೆಗೆ ತಲುಪಲಿ ಮತ್ತು ಪೊಲೀಸರ ಕಾರ್ಯಮನೆ ಮಂದಿಗೆ ಮನವರಿಕೆಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹೊರಡಿಸಿರುವ 27 ಅಂಶಗಳ ಸುತ್ತೋಲೆಯನ್ನು ಮನವರಿಕೆ ಮಾಡಿಕೊಂಡು ಪ್ರತಿ ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೂಲ ಉದ್ದೇಶ.

ನವಲಗುಂದ: ನಾಗರಿಕರ ಸಮಸ್ಯೆ, ಸಲಹೆ, ದೂರು ಆಲಿಸಲು ‘ಮನೆ–ಮನೆಗೆ ಪೊಲೀಸ್‌’ ಪರಿಕಲ್ಪನೆ ಅನುಷ್ಠಾನ ಅಭಿಯಾನ ಎಂಬ ವಿನೂತನ ಕಾರ್ಯಕ್ರಮಕ್ಕೆ ಶನಿವಾರ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಾರ್ವಜನಿಕರಿಗೆ ಮನೆ ಮನೆಗೆ ಪೊಲೀಸ್ ಅಭಿಯಾನ ಸಂದರ್ಭದಲ್ಲಿ ಸೈಬರ್ ಅಪರಾಧ, ಮಾದಕ ವಸ್ತು ಡ್ರಗ್ಸ್, ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು.

ಪೊಲೀಸ್ ಸೇವೆ ಪ್ರತಿ ಮನೆಗೆ ತಲುಪಲಿ ಮತ್ತು ಪೊಲೀಸರ ಕಾರ್ಯಮನೆ ಮಂದಿಗೆ ಮನವರಿಕೆಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹೊರಡಿಸಿರುವ 27 ಅಂಶಗಳ ಸುತ್ತೋಲೆಯನ್ನು ಮನವರಿಕೆ ಮಾಡಿಕೊಂಡು ಪ್ರತಿ ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೂಲ ಉದ್ದೇಶ ತಿಳಿಸಿದರು.

ಕಾರ್ಯಕ್ರಮದಲ್ಲಿ ಮನೆಯಲ್ಲಿರುವವರ ಹೆಸರು, ಮೊಬೈಲ್ ಸಂಖ್ಯೆ ಪಡೆದುಕೊಳ್ಳುವದು ಹಾಗೂ ಸಾರ್ವಜನಿಕರರಿಂದ ಅವರ ದೂರುಗಳನ್ನು ಮತ್ತು ಕೋರಿಕೆಗಳನ್ನು ಸ್ವೀಕರಿಸುವುದು ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಠಾಣೆಯಿಂದ ತಂಡ ರಚಿಸಲಾಗಿದೆ. ತಂಡದ ನೇತೃತ್ವವನ್ನು ಉಪ ಪೊಲೀಸ್ ನಿರೀಕ್ಷಕರು, ಸಹಾಯಕ ಉಪ ಪೊಲೀಸ್ ನಿರೀಕ್ಷಕರು ವಹಿಸಿಕೊಂಡು ಪ್ರತಿ ಮನೆಗೆ ಭೇಟಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸಾರ್ವಜನಿಕರು ಭೇಟಿಯ ವೇಳೆ ಪೊಲೀಸರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಎಸ್.ಪಿ. ಡಾ. ಗೋಪಾಲ ಬ್ಯಾಕೋಡ ತಿಳಿಸಿದರು.

ಸಿಪಿಐ ರವಿಕುಮಾರ ಕಪ್ಪತ್ತನವರ ಮಾತನಾಡಿ, ಬಾಲ್ಯವಿವಾಹಕ್ಕೆ ಅವಕಾಶ ನೀಡಬೇಡಿ ಸಾರ್ವಜನಿಕರಿಗೆ ಏನೇ ತೊಂದರೆಗಳಿದ್ದರೂ 112ಗೆ ಕರೆ ಮಾಡಿದರೆ ಹತ್ತರಿಂದ ಹದಿನೈದು ನಿಮಿಷದಲ್ಲಿ ಪೊಲೀಸರು ತಮ್ಮನ್ನು ಭೇಟಿಯಾಗಲಿದ್ದು, ಅವರ ನೆರವು ಪಡೆಯಬಹುದಾಗಿರುತ್ತದೆ ಎಂದರು.

ಮುಖಂಡರಾದ ರಾಯನಗೌಡ ಪಾಟೀಲ್, ಶಿರಾಜಅಹಮ್ಮದ್ ಧಾರವಾಡ, ಚಂದ್ರಗೌಡ ಪಾಟೀಲ್, ಲೋಕನಾಥ್ ಹೆಬಸೂರ ಮಾತನಾಡಿದರು.

ಪಿಎಸ್ಐ ಜನಾರ್ಧನ ಭಟ್ರಳ್ಳಿ, ಕೃಷ್ಣ ಅರೇರ, ಸಿ.ಆರ್. ನಮಸ್ತೆಮಠ, ಶಿವಾನಂದ ತಡಸಿ, ಜೀವನ ಪವಾರ, ಮೋದಿನ ಶಿರೂರು, ಸಾಯಿಬಾಬಾ ಆನೆಗುಂದಿ, ಮುನ್ನಾ ಕಲ್ಕುಟ್ರಿ, ರುದ್ರಪ್ಪ ಬೆಳಗಲಿ, ಈರಣ್ಣ ಹಸಬಿ, ಶಿವಾನಂದ ಚಲವಾದಿ, ಸಂಜೀವ ನವಲಗುಂದ, ಶಿವಣ್ಣ ಗುಡಸಲಮನಿ, ನಜೀರಾಬೇಗಂ ದಿವಾನಸಾಬನವರ, ಐ.ಎಂ. ಲಂಬೂನವರ, ನಾಗರಾಜ್ ತಳವಾರ, ಚಿನ್ನಪ್ಪಗೌಡ ಹಿರೇಗೌಡ್ರ, ಹುಸೇನಸಾಬ ದಿವಾನಸಾಬನವರ, ನಾಗರಾಜ್ ತಳವಾರ, ಮಲ್ಲಿಕಾರ್ಜುನ ಹಳ್ಳಿ, ಷಣ್ಮುಖ ಕುಲಕರ್ಣಿ, ಶ್ರೀಶೈಲ ಬಸವರಡ್ಡಿ, ಈರಪ್ಪ ಜಡಿ, ಹರೀಶ್ ಅಂಗಡಿ, ಶಿದ್ದಲಿಂಗಪ್ಪ ಅಂಗಡಿ ಸೇರಿದಂತೆ ಹಲವರಿದ್ದರು.