ಮನೆಬಾಗಿಲಿಗೆ ಇ-ಆಸ್ತಿ ಪತ್ರ ವಿತರಣೆ: ಟಿ.ಬಿ.ಜಯಚಂದ್ರ

| Published : Oct 07 2024, 01:33 AM IST

ಸಾರಾಂಶ

ಶಿರಾ: ಶಿರಾ ನಗರದಲ್ಲಿನ ಎಲ್ಲಾ ಆಸ್ತಿ ಮಾಲೀಕರ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಇ- ಆಸ್ತಿ ಖಾತೆ ಆಂದೋಲನ ನಡೆಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಮನೆ ಬಾಗಿಲಿಗೆ ಇ- ಆಸ್ತಿ ಖಾತಾ ವಿತರಣೆಯನ್ನು ಮಾಡುತ್ತೇವೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಶಿರಾ: ಶಿರಾ ನಗರದಲ್ಲಿನ ಎಲ್ಲಾ ಆಸ್ತಿ ಮಾಲೀಕರ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಇ- ಆಸ್ತಿ ಖಾತೆ ಆಂದೋಲನ ನಡೆಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಮನೆ ಬಾಗಿಲಿಗೆ ಇ- ಆಸ್ತಿ ಖಾತಾ ವಿತರಣೆಯನ್ನು ಮಾಡುತ್ತೇವೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ವಾರ್ಡ್ ನಂಬರ್ 6ರ ರಂಗನಾಥ ನಗರದಲ್ಲಿ ಮನೆ ಬಾಗಿಲಿಗೆ ಇ- ಆಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಇ- ಆಸ್ತಿ ಪತ್ರ ವಿತರಿಸಿ ಮಾತನಾಡಿದರು. ರಂಗನಾಥ ನಗರದ ನಿವೇಶನ ರಹಿತರಿಗೆ 2018ರಲ್ಲಿ ನಗರಸಭೆಯಿಂದ ಹಕ್ಕುಪತ್ರ ನೀಡಲಾಗಿತ್ತು. ಆದರೂ ಫಲಾನುಭವಿಗಳು ಯಾರು ನೋಂದಣಿ ಮಾಡಿಸದೆ ಹಾಗೂ ಇ- ಆಸ್ತಿ ಪಡೆಯದೆ ಸೌಲಭ್ಯದಿಂದ ವಂಚಿತರಾಗಿದ್ದರು. ಅದನ್ನು ಮನಗಂಡು ಎಲ್ಲಾ ಫಲಾನುಭವಿಗಳಿಗೆ ಸಬ್ ರಿಜಿಸ್ಟರ್ ಕಚೇರಿಯಿಂದ ನೋಂದಣಿ ಮಾಡಿಸಿ ಕಂದಾಯ ಪಾವತಿಸಿಕೊಂಡು ಡಿಜಿಟಲ್ ಇ- ಖಾತೆಯನ್ನು ಎಲ್ಲ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ವಿತರಿಸಲಾಗುತ್ತಿದೆ ಎಂದರು.

ಪೌರಾಯುಕ್ತ ರುದ್ರೇಶ್ ಮಾತನಾಡಿ, ಅ. 7 ರಿಂದ ಸಬ್ ರಿಜಿಸ್ಟರ್ ಕಚೇರಿಯ ಕಾವೇರಿ-2 ತಂತ್ರಾಂಶವನ್ನು ನಗರಸಭೆಯ ಇ-ಆಸ್ತಿ ತಂತ್ರಾಂಶದೊಂದಿಗೆ ಜೋಡಣೆಗೊಳಿಸಲಾಗಿದ್ದು, ಸಾರ್ವಜನಿಕರು ಇಂದಿನಿಂದ ಕಡ್ಡಾಯವಾಗಿ ನಗರಸಭೆಯಿಂದ ಇ-ಆಸ್ತಿಯನ್ನು ಪಡೆದು ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗಿರುತ್ತದೆ. ಸಾರ್ವಜನಿಕರು ನೋಂದಣಿ ಕಚೇರಿಯಲ್ಲಿ ತಮ್ಮ ಆಸ್ತಿಯನ್ನು ನೋಂದಣಿ ಮಾಡಿಸಿದ ನಂತರ ಮ್ಯುಟೇಶನ್ ಪ್ರಕ್ರಿಯೆಗೆ ನಗರಸಭೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಿದ 30 ದಿನಗಳ ನಂತರ ಖಾತೆ ಬದಲಾವಣೆ ಆಗಿ ಖಾತಾ ಬದಲಾವಣೆ ಶುಲ್ಕ ಇ- ಆಸ್ತಿ ಶುಲ್ಕ ಪಾವತಿಸಿದ ನಂತರ 45 ದಿವಸದೊಳಗೆ ಇ-ಆಸ್ತಿ ಪತ್ರ ಪಡೆಯಬಹುದಾಗಿರುತ್ತದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ನಗರಸಭೆ ಸದಸ್ಯರಾದ ಗಿರಿಜಾ ವಿಜಯಕುಮಾರ್, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ಜಯಲಕ್ಷ್ಮೀ, ಮಂಜುನಾಥ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್ ಸೇರಿದಂತೆ ಹಲವರು ಹಾಜರಿದ್ದರು.