ದ್ವಿತಳಿ ಬೆಳೆ ರೈತರಿಗೆ ಲಾಭದಾಯಕ: ಶ್ರೀನಿವಾಸ ಗೌಡ

| Published : Aug 24 2024, 01:20 AM IST

ಸಾರಾಂಶ

ಕೃಷಿ ಅಧಿಕಾರಿಗಳು ನೀಡುವ ಸೂಚನೆ- ಸಲಹೆಗಳನ್ನು ಪಡೆದುಕೊಂಡು ನಿಮ್ಮ ತೋಟಕ್ಕೆ ಯಾವ ಸಮಯದಲ್ಲಿ ಗೊಬ್ಬರಗಳನ್ನು ಹಾಕಬೇಕು ಎಂಬ ಮಾಹಿತಿಗಳನ್ನು ಪಡೆದುಕೊಂಡು ನಿಮ್ಮ ಆರ್ಥಿಕ ಮುಗ್ಗಟ್ಟುಗಳನ್ನು ನಿವಾರಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಲಗೂರು

ರೈತರು ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಳ್ಳಲು ದ್ವಿತಳಿ ಬೆಳೆ ಬೆಳೆದು ಕೃಷಿಯನ್ನು ಲಾಭದಾಯಕವನ್ನಾಗಿ ಕಂಡುಕೊಳ್ಳುವಂತೆ ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಶ್ರೀನಿವಾಸಗೌಡ ಕರೆ ನೀಡಿದರು.

ಚನ್ನಪಟ್ಟಣ ರಸ್ತೆಯ ತಾಂತ್ರಿಕ ಸೇವಾಕೇಂದ್ರ ಹಲಗೂರು ವ್ಯಾಪ್ತಿಯ ರೈತರಿಗೆ ಕಚೇರಿ ಆವರಣದಲ್ಲಿ ರೇಷ್ಮೆ ಬೆಳೆಗಾರರಿಗೆ ನೂತನ ತಾಂತ್ರಿಕತೆಗಳು ಮತ್ತು ನರೇಗಾ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನರೇಗಾ ಯೋಜನೆಯಡಿ ಹೊಸ ಹಿಪ್ಪುನೇರಳೆ ತೋಟವನ್ನು ಪ್ರಾರಂಭಿಸಿ, ರೇಷ್ಮೆ ಇಲಾಖೆ ಸಲಹೆಗಳನ್ನು ಪಡೆದು ಮತ್ತು ಸರ್ಕಾರದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಸಿಗುವ ಸೌಲತ್ತುಗಳನ್ನು ಸದ್ಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಿರಿ ಎಂದರು.

ಕೃಷಿ ಅಧಿಕಾರಿಗಳು ನೀಡುವ ಸೂಚನೆ- ಸಲಹೆಗಳನ್ನು ಪಡೆದುಕೊಂಡು ನಿಮ್ಮ ತೋಟಕ್ಕೆ ಯಾವ ಸಮಯದಲ್ಲಿ ಗೊಬ್ಬರಗಳನ್ನು ಹಾಕಬೇಕು ಎಂಬ ಮಾಹಿತಿಗಳನ್ನು ಪಡೆದುಕೊಂಡು ನಿಮ್ಮ ಆರ್ಥಿಕ ಮುಗ್ಗಟ್ಟುಗಳನ್ನು ನಿವಾರಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.

ಮಂಡ್ಯ ಕೃಷಿ ವಿಜ್ಞಾನ ಕೇಂದ್ರದ ಡಾ.ಮಹೇಶ ಮಾತನಾಡಿ, ನುಸಿ ಕೀಟಗಳ ಬಾದೆ ರೇಷ್ಮೆ ತೋಟಗಳಿಗೆ ಹೆಚ್ಚಾಗಿದೆ. ರೋಗಗಳನ್ನು ತಡೆಗಟ್ಟಲು ಬೆಳೆದ ಫಸಲಿಗೆ ಯಾವ ರೀತಿ ಔಷಧಿಯನ್ನು ಸಿಂಪಡಿಸಬೇಕು ಎಂಬುವುದರ ಬಗ್ಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರೇಷ್ಮೆ ನಿರೀಕ್ಷಕ ಎಂ.ಸಿ. ನವೀನ್‌ ಕುಮಾರ, ನಳಿನಾಕ್ಷಮ್ಮ ಕೃಷಿ ಇಲಾಖೆ ಪ್ರಸನ್ನ, ಮತ್ತು ನಾಗವೇಣಿ ಮತ್ತು ಇತರರು ಭಾಗವಹಿಸಿದ್ದರು.