ಸಾರಾಂಶ
ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ವಿಚಾರಧಾರೆಗಳು ಇಂದಿನ ಯುವಕರಿಗೆ ಮಾರ್ಗದರ್ಶನ ನೀಡುವಂತಿದೆ
ಲಕ್ಷ್ಮೇಶ್ವರ: ಭಾರತೀಯ ಪ್ರಜಾಪ್ರಭುತ್ವದಲ್ಲಿ ಸಂವಿಧಾನವು ನಮ್ಮ ತಾಯಿಯಾಗಿದೆ. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಮಾರ್ಗದರ್ಶನ ಇಂದಿನ ಯುವಕರಿಗೆ ಅವಶ್ಯವಾಗಿದೆ ಎಂದು ಲಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಹೇಳಿದರು.
ಭಾನುವಾರ ಪಟ್ಟಣದ ವಕೀಲರ ಸಂಘದ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ವಿಚಾರಧಾರೆಗಳು ಇಂದಿನ ಯುವಕರಿಗೆ ಮಾರ್ಗದರ್ಶನ ನೀಡುವಂತಿದೆ. ಶಿಕ್ಷಣ ಮತ್ತು ಸ್ವಾತಂತ್ರ್ಯಗಳ ಮಹತ್ವವನ್ನು ಡಾ.ಅಂಬೇಡ್ಕರ್ ಅವರ ಮಹತ್ವ ಸಾರುವ ಕಾರ್ಯವನ್ನು ಮಾಡುವ ಮೂಲಕ ಯುವಕರು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ. ದಲಿತರ ಹಾಗೂ ಹಿಂದುಳಿದ ಸಮಾಜಗಳ ಧ್ವನಿಯಾಗಿ ನ್ಯಾಯಕ್ಕಾಗಿ ಹೋರಾಡಿ ಅವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಕಾರ್ಯ ಮಾಡಿದರು. ಅವರು ತಮ್ಮ ಬಾಲ್ಯದಲ್ಲಿ ಅನೇಕ ಕಷ್ಟಕರ ಸ್ಥಿತಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಭಾರತದ ಸಂವಿಧಾನ ರಚನೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಈ ವೇಳೆ ಲಕ್ಷ್ಮೇಶ್ವರ ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ವಿಠ್ಠಲ ನಾಯಕ, ಬಿ.ಎಸ್. ಪಾಟೀಲ್, ಎನ್.ಎಂ.ಗದಗ, ಬಿ.ಎಸ್. ಘೋoಗಡಿ, ವಿ.ಎಸ್.ಪಶುಪತಿಹಾಳ, ಎಸ್.ಎಸ್.ಶೆಟ್ಟರ, ಐ.ಜಿ. ಹುಲಬಜಾರ, ಎಸ್.ಆರ್. ಅತ್ತಿಗೇರಿ, ಆರ್.ಎಸ್. ಮುದಗಲ್, ವಿ.ಎಂ. ಹುಡೇದಮನಿ, ಬಿ.ಎನ್.ಸಂಶಿ, ಎನ್.ಐ.ಸೊರಟೂರ ಹಾಗೂ ವಕೀಲರ ಸಂಘದ ಸದಸ್ಯರು ಇದ್ದರು.