ಸಮಾನತೆಗಾಗಿ ಹಗಲಿರಳು ಶ್ರಮ ವಹಿಸಿದ ಡಾ.ಅಂಬೇಡ್ಕರ್‌

| Published : Apr 15 2025, 12:55 AM IST

ಸಾರಾಂಶ

ಸಮಾನತೆಯ ಹರಿಕಾರ ದೇಶ ಕಂಡ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಮಾನತೆಯ ಹರಿಕಾರ ದೇಶ ಕಂಡ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಸಮೀಪದ ಹೊಸೂರ ಗ್ರಾಮದ ಡಾ.ಬಿ.ಅರ್.ಅಂಬೇಡ್ಕರ್ ಕಾಲೋನಿಯಲ್ಲಿ ಜರುಗಿದ 134ನೇ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಸಮಾನತೆ, ಸಂಘಟನೆ ಮತ್ತು ಸಂಘರ್ಷಣೆಯ ಮೂಲಕ ದೇಶದಲ್ಲಿ ಸಾಮಾಜಿಕ ಸಮಾನತೆಗಾಗಿ ಹಗಲಿರಳು ಶ್ರಮ ವಹಿಸಿ ಸಂವಿಧಾನ ಬರೆದ ಡಾ.ಅಂಬೇಡ್ಕರ್ ಕಾರ್ಯ ಶ್ಲಾಘನೀಯ ಎಂದರು.ಸವದತ್ತಿ ತಾಲೂಕಿನ ಕೃಷಿಕ ಸಮಾಜ ಅಧ್ಯಕ್ಷ ಉಮೇಶ ಬೋಳೆತ್ತಿನ ಮಾತನಾಡಿ, ದೇಶದ ಭವಿಷ್ಯಕ್ಕಾಗಿ ಸರ್ವಸ್ವವನ್ನೇ ಸಮರ್ಪಿಸಿಕೊಂಡ ಅಂಬೇಡ್ಕರ್ ಕಾರ್ಯ ಅಮರ ಎಂದರು.ಗ್ರಾಮ ಸಾಹಯಕ ಮಹಾದೇವ ಇಂಗಳಗಿ ಮಾತನಾಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಡಿ.ಕನಕನ್ನವರ, ಪುಂಡಲಿಕ ಇಂಗಳಗಿ ಮಾತನಾಡಿದರು. ವೇದಿಕೆಯ ಮೇಲೆ‌ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ತಳವಾರ ಉಪಾಧ್ಯಕ್ಷೆ ನಿರ್ಮಲಾ ಲಂಗೋಟಿ, ಸದಸ್ಯರಾದ ಮಲ್ಲಿಕಾರ್ಜುನ ಕರಡಿಗುದ್ದಿ, ಅಪ್ಪು ಇಳಿಗೇರ, ಮಲ್ಲಿಕಾರ್ಜುನ ವಕ್ಕುಂದ, ಈರಣ್ಣ ಸಂಪಗಾಂವ, ಜಯಶ್ರೀ ಇಂಗಳಗಿ, ಮಲ್ಲವ್ವ ಬಾರಿಗಿಡದ, ಗಂಗವ್ವ ಅರಬಳ್ಳಿ, ರುಕ್ಸಾನ ಶೇಖ, ರೋಶನಬಿ ಶೇಖ ಇದ್ದರು.ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ವಿಭಾಗದ ಡಿಆರ್‌ಯು ಸಿ.ಸಿ.ಕೇಂದ್ರ ಸರ್ಕಾರದ ನಾಮ ನಿರ್ದೇಶಕ ಸದಸ್ಯ ಎಫ್.ಎಸ್.ಸಿದ್ದನಗೌಡರ ಹಾಗೂ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಉಮೇಶ ಬೋಳೆತ್ತಿನ ಅವರನ್ನು ಸತ್ಕರಿಸಿದರು. ಕಾರ್ಯಕ್ರಮದಲ್ಲಿ ಮಹಾಂತೇಶ ಮಲಮೇತ್ರಿ, ಶಂಕರ ಹಿರುಣವರ, ವಿಠಲ ಮಲಮೆತ್ರಿ, ಅಕ್ಷಯ ಗಡ್ಡಿ, ಮನಿಕಂಠ ಮಲಮೇತ್ರಿ, ಸೊಮಲಿಂಗ ಜುಮೆತ್ರಿ, ಮಹಾದೇವ ಹಿರುಣ್ಣವರ, ಶೋಭಾ ಮಲಮೇತ್ರಿ, ಶಂಕರೆವ್ವ ಜುಮೇತ್ರಿ, ಸುಧಾ ಹಿರುಣ್ಣವರ ಸೇರಿದಂತೆ‌ ನೂರಾರು ಜನರು ಇದ್ದರು.ಪ್ರಮೊದ ಇಂಗಳಗಿ ಸ್ವಾಗತಿಸಿದರು. ಸಂಜು ಜುಮೇತ್ರಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ನಡೆದ ಕುಂಭಮೇಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಮೆರುವಣಿಗೆ ನಡೆಯಿತು.