ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಡಾ.ಬಿ.ಆರ್.ಅಂಬೇಡ್ಕರ್ ನಂತರ ದೇಶ ಕಂಡ ಅತ್ಯಂತ ಪ್ರಮುಖ ಶೋಷಿತ ಸಮುದಾಯಗಳ ನಾಯಕ ಡಾ.ಬಾಬು ಜಗಜೀವನರಾಂ ಎಂದು ಉಪನ್ಯಾಸಕ ಎ.ಎಂ.ಮಂಜುನಾಥ್ ಅಭಿಪ್ರಾಯಪಟ್ಟರುಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಆಶ್ರದಲ್ಲಿ ನಡೆದ ಡಾ.ಬಾಬು ಜಗಜೀವನರಾಂ ಅವರ 118ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಹಸಿರು ಕ್ರಾಂತಿಯ ಹರಿಕಾರರಾಗಿ ದೇಶದ ಆಹಾರ ಭದ್ರತೆಗೆ ಅಡಿಪಾಯ ಹಾಕಿದ ಜಗಜೀವನರಾಂ ಅವರು ಪ್ರತಿಭೆ ಜಾತಿಯ ಸ್ವತ್ತಲ್ಲ ಎನ್ನುವುದನ್ನು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟ ಜಗಜೀವನರಾಂ ಅವರ ವ್ಯಕ್ತಿತ್ವ, ಜೀವನ, ಸಾಧನೆ ಮತ್ತು ಹೋರಾಟದ ದಾರಿ ಇಂದಿನ ಎಲ್ಲಾ ಯುವಕರಿಗೂ ದಾರೀ ದೀಪ ಎಂದು ಅಭಿಪ್ರಾಯಪಟ್ಟರು.ಈ ವೇಳೆ ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಮುಖ್ಯಧಿಕಾರಿ ಹೆಚ್.ಎನ್.ನಟರಾಜ್, ತಾಪಂ ಇಒ ಕೆ.ಸುಷ್ಮಾ, ಬಿಇಒ ವೈ.ಕೆ.ತಿಮ್ಮೇಗೌಡ, ಗ್ರೇಡ್-2 ತಹಸೀಲ್ದಾರ್ ಬಿ.ಆರ್.ಲೋಕೇಶ್, ಸಹಾಯಕ ಭೂ ಮಾಪನಾ ಅಧಿಕಾರಿ ಸಿದ್ದಯ್ಯ, ಸಮಾಜ ಕಲ್ಯಾಣಧಿಕಾರಿ ಎಸ್.ದಿವಾಕರ್, ಸಿ.ಡಿ.ಪಿ.ಓ ಅರುಣಕುಮಾರ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ತಾಲೂಕು ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಪುಟ್ಟರಾಜು, ಜಿಪಂ ಮಾಜಿ ಸದಸ್ಯ ಹಿರೀಕಳಲೆ ರಾಮದಾಸ್, ತಾಪಂ ಮಾಜಿ ಸದಸ್ಯರಾದ ಗೋಪಾಲ್, ಸೋಮಯ್ಯ, ಮುಖಂಡರಾದ ಬಸ್ತಿ ರಂಗಪ್ಪ, ನಿಒವೃತ್ತ ಪ್ರಾಂಶುಪಾಲ ರಾಜಯ್ಯ, ನರಸನಾಯಕ್, ಚಿಕ್ಕಗಾಡಿಗನಹಳ್ಳಿ ಕುಮಾರ್, ಟಿ.ಆರ್.ಉಮೇಶ್, ಸುಧಾಕರ್, ಹೊಸಹೊಳಲು ಹರೀಶ್, ಕುಮಾರ್, ತಾಲೂಕು ಬಿ.ಎಸ್.ಪಿ ಉಪಾಧ್ಯಕ್ಷ ಗಂಗಾಧರ್ ಸೇರಿದಂತೆ ಹಲವರು ಇದ್ದರು.