ಸಾರಾಂಶ
ಡಾ.ಬಿ.ಆರ್. ಅಂಬೇಡ್ಕರ್ ದೇವರು ಸೃಷ್ಟಿಮಾಡಿದಂತಹ ಮಹಾ ಮಾನವತಾವಾದಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೈದ್ಯಶ್ರೀಕಾಂತ್ ಹೇಳಿದ್ದಾರೆ.
ತರೀಕೆರೆಯಲ್ಲಿ ವಕೀಲರ ಸಂಘದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಡಾ.ಬಿ.ಆರ್. ಅಂಬೇಡ್ಕರ್ ದೇವರು ಸೃಷ್ಟಿಮಾಡಿದಂತಹ ಮಹಾ ಮಾನವತಾವಾದಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೈದ್ಯಶ್ರೀಕಾಂತ್ ಹೇಳಿದ್ದಾರೆ.ಸೋಮವಾರ ವಕೀಲರ ಸಂಘದಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ
ಮಾತನಾಡಿದರು. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನ ರಚಿಸಲಾಗಿದೆ. ಅಮೇರಿಕಾ ದೇಶದಲ್ಲಿ ಅಲ್ಲಿನ ರೂಢಿ ಸಂಪ್ರದಾಯಗಳ ಕಾನೂನುಗಳಾಗಿರುತ್ತವೆ. ಭಾರತ ದೇಶದಲ್ಲಿ ಸಂವಿಧಾನದಡಿ ಎಲ್ಲಾ ಕಾನೂನುಗಳು ಬರುತ್ತವೆ. ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸಿದರು. ಭಾರತ ಸಂವಿಧಾನದ ಅನುಚ್ಚೇದ 14 ಮತ್ತು 21ರಲ್ಲಿ ವಿಶೇಷವಾದ ಅಧಿಕಾರ ಮತ್ತು ಹಕ್ಕುಗಳ ಬಗ್ಗೆ ವಿವರಿಸಲಾಗಿದೆ ಎಂದು ಹೇಳಿದರು.ಸಿವಿಲ್ ನ್ಯಾಯಾಧೀಶ ಶಿವಕುಮಾರ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಭಾರತ ಸಂವಿಧಾನದ ಶಿಲ್ಪಿಗಳು. ಇವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚಿಸಲಾಗಿರುತ್ತದೆ ಎಂದು ಹೇಳಿದರು.ಹೆಚ್ಚವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳ ಮಾತನಾಡಿ ಡಾ.ಬಿ.ಆರ್.ಆಂಬೇಡ್ಕರ್ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ಹಾಗೂ ಸ್ವಾತಂತ್ರ್ಯ ಹಕ್ಕನ್ನು ನೀಡದಿದ್ದರೆ ಈಗಿನ ಸಮಾಜದಲ್ಲಿ ಮಹಿಳೆಯರ ಸಬಲೀಕರಣವಾಗುತ್ತಿರಲಿಲ್ಲ, ಆದ್ದರಿಂದ ಮಹಿಳೆಯರೆಲ್ಲರೂ ಡಾ.ಬಿ.ಆರ್.ಅಂಬೇಡ್ಕರ್ ಗೆ ಚಿರಋಣಿಯಾಗಿರಬೇಕು ಎಂದು ಹೇಳಿದರು.
ಹಿರಿಯ ವಕೀಲ ಕೆ.ಲಿಂಗರಾಜು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ. ಆದ್ದರಿಂದ ನಾವುಗಳೆಲ್ಲರೂ ಡಾ.ಬಿ.ಆರ್.ಅಂಬೇಡ್ಕರ್ ರವರ ಋಣದಲ್ಲಿರುತ್ತೇವೆ ಎಂದು ಹೇಳಿದರು.ಹಿರಿಯ ವಕೀಲ ಕೆ.ಎಲ್.ಲಿಂಗರಾಜು ಮಾತನಾಡಿ ಪ್ರಪಂಚದಲ್ಲಿ ನಮ್ಮ ಸಂವಿಧಾನ ತುಂಬಾ ವಿಶೇಷವಾದಂತಹ ಸಂವಿಧಾನವಾಗಿದೆ ಎಂದು ಹೇಳಿದರು.ಹಿರಿಯ ವಕೀಲ ಜಿ.ಮಂಜುನಾಥ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜ್ಞಾನಬಂಡಾರದ ಬಗ್ಗೆ ನಾವು ತಿಳಿದುಕೊಳ್ಳುವುದು ಅವಶ್ಯಕ. ನಾವು ಅವರು ರಚಿಸಿರುವ ಸಂವಿಧಾನದ ಹಾದಿಯಲ್ಲಿ ನಡೆಯಬೇಕಾಗಿದೆ ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಬಿ.ಶೇಖರ್ ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಬಾಲ್ಯ ಜೀವನ ಹಾಗೂ ವಿದ್ಯೆಗಳಿಸಲು ಅವರ ಜೀವನದಲ್ಲಿ ಪಟ್ಟಂತಹ ಕಷ್ಟಗಳು, ಸಾಧಿಸಿದಂತಹ ಮೈಲಿಗಲ್ಲುಗಳ ಬಗ್ಗೆ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಬಿ.ವಿ.ದಿನೇಶ್ ಕುಮಾರ್, ಜಿ.ಎನ್.ಚಂದ್ರಶೇಖರ್, ಎಸ್.ಎನ್.ಮಲ್ಲೇಗೌಡರು, ಟಿ.ಎನ್.ಕಿರಣ್ ಕುಮಾರ್, ಅವಿನಾಶ್, ಸತೀಶ್ ಕುಮಾರ್, ರವಿಕುಮಾರ್, ಶಿವ ಶಂಕರನಾಯ್ಕ, ಅಸೀಮ್ ಅಹಮದ್ , ವಕೀಲರಾದ ಎಸ್.ಸುರೇಶ್ ಚಂದ್ರ , ಕೆ.ಚಂದ್ರಪ್ಪ ಉಪಸ್ಥಿತರಿದ್ದರು.15ಕೆಟಿಆರ್.ಕೆ.4
ತರೀಕೆರೆಯಲ್ಲಿ ವಕೀಲರ ಸಂಘದಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ವಕೀಲರ ಸಂಘದ ಅಧ್ಯಕ್ಷಬಿ.ಶೇಖರ್ ನಾಯ್ಕ ಮಾತನಾಡಿದರು.