ವೈದ್ಯಕೀಯ ವೃತ್ತಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದ್ದ ಅಶ್ವಥ್‌ ನಾರಾಯಣ್ ಅವರನ್ನು ಸತತ ನಾಲ್ಕು ಭಾರಿ ಶಾಸಕರಾಗಿ ಆಯ್ಕೆ ಮಾಡಿರುವುದು ಅವರ ಸೇವೆಗೆ ಕೈಗನ್ನಡಿಯಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿಯಿಂದ ಪಟ್ಟಣದ ಹೊರ ವಲಯದ ಮಾರೇಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಾಲೂಕು ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎನ್.ಕೃಷ್ಣ ಮಾತನಾಡಿ, ವೈದ್ಯಕೀಯ ವೃತ್ತಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದ್ದ ಅಶ್ವಥ್‌ ನಾರಾಯಣ್ ಅವರನ್ನು ಸತತ ನಾಲ್ಕು ಭಾರಿ ಶಾಸಕರಾಗಿ ಆಯ್ಕೆ ಮಾಡಿರುವುದು ಅವರ ಸೇವೆಗೆ ಕೈಗನ್ನಡಿಯಾಗಿದೆ ಎಂದರು. ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ ಹಾಗೂ ಕೌಶಲ್ಯಾ ಅಭಿವೃದ್ಧಿ ಹಾಗೂ ಮಂಡ್ಯ ಜಿಲ್ಲೆಯ ಉಸ್ತುವರಿ ಸಚಿವರಾಗಿ ನಾಡಿಗೆ ಹಲವು ಕೊಡುಗೆ ನೀಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಯಮದೂರು ಸಿದ್ದರಾಜು ಮಾತನಾಡಿ, ಅಶ್ವಥ್‌ನಾರಾಯಣ್ ಮೂಲ ಮಂಡ್ಯ ಜಿಲ್ಲೆಯವರು ಆಗಿದ್ದು, ಮಂಡ್ಯ ಜಿಲ್ಲೆಗೆ ಹಲವಾರು ಕೊಡುಗೆ ನೀಡಿದ್ದಾರೆ ಎಂದರು.

ಜೆಡಿಎಸ್ ಮುಖಂಡ ನಂದಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದಿಂದ ಬೇಸತ್ತಿರುವ ಜನರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೀರಸ್ಕರಿಸಲಿದ್ದಾರೆ. ಎನ್‌ಡಿಎ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದ್ದು, ದಕ್ಷ ರಾಜಕಾರಣಿ ಅಶ್ವಥ್ ನಾರಾಯಣ್ ಅವರಿಗೆ ಅತ್ಯುನ್ನತ ಅಧಿಕಾರ ಸಿಗಲಿದೆ ಎಂದು ಭವಿಷ್ಯ ನುಡಿದರು.

ಈ ವೇಳೆ ಮುಖಂಡರಾದ ಡಾ.ಕಪನಿಗೌಡ, ಬಸವರಾಜು, ಎನ್.ಕೆ ಕುಮಾರ್, ಮಹೇಂದ್ರ, ಜಿ.ಕೆ ನಾಗೇಶ್, ಕೆ.ಸಿ ನಾಗೇಗೌಡ, ರಾಜೀವ್, ಮಾರೇಹಳ್ಳಿ ಬಸವರಾಜು, ಶಶಿಕುಮಾರ್, ಶ್ರೀನಿವಾಸ್, ಮಹಲಿಂಗು, ಬಾಲುಕುಮಾರ್, ಬಿಜೆಪಿ ಜಿಲ್ಲಾ ಯುವಮೊರ್ಚಾ ಉಪಾಧ್ಯಕ್ಷ ಮೋಹನ್ ಸೇರಿದಂತೆ ಇತರರು ಇದ್ದರು.ಕ್ರಿಕೆಟ್ ಪಂದ್ಯಾವಳಿ: ಎಂಸಿಸಿ ಸಿದ್ದು ಬಾಯ್ಸ್ ತಂಡ ಪ್ರಥಮ

ಮಳವಳ್ಳಿ: ಸಿಡಿ ಹಬ್ಬದ ಪ್ರಯುಕ್ತ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಸಿಸಿ ಸಿದ್ದು ಬಾಯ್ಸ್ ತಂಡ ಪ್ರಥಮ ಸ್ಥಾನ ಗಳಿಸಿ ಟ್ರೋಪಿಯನ್ನು ತಮ್ಮದಾಗಿಸಿಕೊಂಡಿತು.

ಕ್ರಿಕೆಟ್ ಟೌನ್ ಚಾಂಪಿಯನ್ ಷಿಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 7 ತಂಡಗಳು ಭಾಗವಹಿಸಿದ್ದವು. ಪಟ್ಟಣದ ಗಂಗಮತ ಬೀದಿಯ ಎಂ.ಸಿ.ಸಿ ಸಿದ್ದು ಬಾಯ್ಸ್ ಪ್ರಥಮ ಸ್ಥಾನ ಗಳಿಸಿದರೆ, ಸಿದ್ದಾರ್ಥನಗರದ ಎಸಿಸಿ ಅಂಬೇಡ್ಕರ್ ಕ್ರಿಕೆಟ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎನ್ ಕೃಷ್ಣ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಈ ವೇಳೆ ಆಯೋಜಕರಾದ ಜಗದೀಶ್, ಪುರಸಭೆ ಮಾಜಿ ಸದಸ್ಯ ಎಂ.ಎನ್ ಶಿವಸ್ವಾಮಿ, ಮಾಜಿ ಪುರಸಭೆ ಅಧ್ಯಕ್ಷ ಗಂಗರಾಜೇಅರಸ್, ಮುಖಂಡರಾದ ಸತ್ಯ, ವೇಣು, ನಂಜುಂಡ, ಗುರುಸ್ವಾಮಿ, ಕುಮಾರ್, ಮಹೇಶ್, ಸ್ವಾಮಿ, ಸೇರಿದಂತೆ ಇತರರು ಇದ್ದರು.