ಜಿಲ್ಲೆಯಲ್ಲಿ ದೊಡ್ಡ ಹೆಸರು ಮಾಡಿರುವ ಡಾ.ದಿಲೀಪ ಪಟವರ್ಧನ್

| Published : Apr 22 2025, 01:45 AM IST

ಸಾರಾಂಶ

ಜಿಲ್ಲೆಯಲ್ಲಿ ದೊಡ್ಡ ಹೆಸರು ಮಾಡಿರುವ ಡಾ.ದಿಲೀಪ ಪಟವರ್ಧನ್ ಅವರು ಬೈಲಹೊಂಗಲ ಪಟ್ಟಣದಲ್ಲೂ ಕಣ್ಣಿನ ನೂತನ ಆಸ್ಪತ್ರೆ ಆರಂಭಿಸಿದ್ದು ಖುಷಿ ತಂದಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಜಿಲ್ಲೆಯಲ್ಲಿ ದೊಡ್ಡ ಹೆಸರು ಮಾಡಿರುವ ಡಾ.ದಿಲೀಪ ಪಟವರ್ಧನ್ ಅವರು ಬೈಲಹೊಂಗಲ ಪಟ್ಟಣದಲ್ಲೂ ಕಣ್ಣಿನ ನೂತನ ಆಸ್ಪತ್ರೆ ಆರಂಭಿಸಿದ್ದು ಖುಷಿ ತಂದಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ಮೆಟಗುಡ್ಡ ಕಾಂಪ್ಲೆಕ್ಸ್‌ನಲ್ಲಿ ಡಾ.ಪಟವರ್ಧನ ನಂದಾದೀಪ ಕಣ್ಣಿನ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ದೊಡ್ಡ ಸಿಟಿಗಳಲ್ಲಿ ಸಿಗುವ ಸೌಲಭ್ಯವನ್ನು ತಾಲೂಕುಮಟ್ಟಕ್ಕೆ ತಂದಿರುವ ಡಾ.ದಿಲೀಪ್ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಡಾ.ಜೂಸ್ಮಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಲ ದಿನಗಳ ಕಾಲ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕ ಎಂದು ಕೋರಿದರು.ನಂದಾದೀಪ ಆಸ್ಪತ್ರೆ ಸಂಸ್ಥಾಪಕ ಡಾ.ದಿಲೀಪ ಪಟವರ್ಧನ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸ್ಪತ್ರೆ ಆರಂಭಿಸಲು ಸ್ಫೂರ್ತಿ ತುಂಬಿದ ಬೈಲಹೊಂಗಲ ನಾಡಿನ ಹಿರಿಯರನ್ನು, ವೈದ್ಯ ಬಳಗದವರನ್ನು ಡಾ.ದಿಲೀಪ್ ಸ್ಮರಿಸಿದರು. ಯೋಗ್ಯದರದಲ್ಲಿ ಚಿಕಿತ್ಸೆ ಒದಗಿಸುವ ಭರವಸೆ ನೀಡಿದರು. ಪ್ರಸಿದ್ಧ ಹೃದಯ ರೋಗ ತಜ್ಞ ಡಾ.ಬಿ.ಎಸ್.ಮಹಾಂತಶೆಟ್ಟಿ, ಡಾ.ಗೀತಾ ಕಾಂಬಳೆ, ಅರಣ್ಯಾಧಿಕಾರಿ ಸುರೇಶ ದೊಡ್ಡಬಸನ್ನವರ, ಬಸವರಾಜ ತೇಗೂರ, ಮಹೇಶ ಬೆಲ್ಲದ, ಮಹಾಂತೇಶ ಮೆಟಗುಡ್ಡ, ಮೋಹನ ಪಾಟೀಲ, ಡಾ.ಸೌರಭ ಪಟವರ್ಧನ, ಕುಶಾಲ ಪಟವರ್ಧನ್, ಡಾ.ಮಹಾದೇವಿ ಪಟವರ್ಧನ್, ಡಾ.ನಿಧಿ ಪಟವರ್ಧನ್, ಕಾಂಚನಾ ಪಟವರ್ಧನ, ಅನಿರುದ್ಧ.ಎಸ್ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಈರಯ್ಯ ಮಾಸ್ತಮರರ್ಡಿ ಸ್ವಾಗತಿಸಿದರು. ಆನಂದ ತುಪ್ಪದ ನಿರೂಪಿಸಿದರು. ಶಿವಶರಣ ಬೆಟ್ಟದ ವಂದಿಸಿದರು.

ಇಂದಿನ ಜೀವನ ಬಹಳ ಸಂಕೀರ್ಣತೆಯಿಂದ ಕೂಡಿದೆ. ಗ್ಲೂಕೋಮಾ, ಕ್ಯಾಟರಾಕ್ಟ್, ಮ್ಯಾಕ್ಯುಲರ್, ಡಿಜೆನರೇಷನ್ ಸೇರಿದಂತೆ ಇನ್ನೂ ಅನೇಕ ತರದ ಕಣ್ಣಿನ ರೋಗಗಳಿಗೆ ಅತ್ಯಾಧುನಿಕ ಚಿಕಿತ್ಸೆ ಸೌಲಭ್ಯವನ್ನು ಈ ಆಸ್ಪತ್ರೆ ಒದಗಿಸಲಿದೆ. ನಾಡಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು.

-ಡಾ.ದಿಲೀಪ ಪಟವರ್ಧನ, ನಂದಾದೀಪ ಆಸ್ಪತ್ರೆ ಸಂಸ್ಥಾಪಕರು.

ಕಣ್ಣು ಸೂಕ್ಷ್ಮ ಅಂಗಾಂಗವಾಗಿದೆ. ಚಿಕಿತ್ಸೆ ನೀಡುವಾಗ ಒಂದು ಬಾರಿ ವಿಫಲವಾದರೆ, ಜೀವನ ಪರ್ಯಂತ ಅಂಧವಾಗಿ ಬದುಕಬೇಕಾಗುತ್ತದೆ. ನುರಿತ ತಜ್ಞ ವೈದ್ಯರಿಂದ ಕಣ್ಣಿನ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ಡಾ.ದಿಲೀಪ್ ಅವರಿಗೆ ದೊಡ್ಡ ಹೆಸರು ಇದೆ.

ಡಾ.ಬಿ.ಎಸ್.ಮಹಾಂತಶೆಟ್ಟಿ,

ಪ್ರಸಿದ್ಧ ಹೃದಯ ರೊಗ ತಜ್ಞರು, ಬೈಲಹೊಂಗಲ.