ಸಾರಾಂಶ
ಮೊಗವೀರ ಮಹಾಜನ ಸಂಘದ ಮಾರ್ಗದರ್ಶಕ ನಾಡೋಜ ಡಾ. ಜಿ.ಶಂಕರ್ ಅವರ 70ನೇ ವರ್ಷದ ಜನ್ಮದಿನದ ಪ್ರಯುಕ್ತ ಮೊಗವೀರ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ವತಿಯಿಂದ ಮನೆಗೊಂದು ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕೋಟ
ಮೊಗವೀರ ಮಹಾಜನ ಸಂಘದ ಮಾರ್ಗದರ್ಶಕ ನಾಡೋಜ ಡಾ. ಜಿ.ಶಂಕರ್ ಅವರ 70ನೇ ವರ್ಷದ ಜನ್ಮದಿನದ ಪ್ರಯುಕ್ತ ಮೊಗವೀರ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ವತಿಯಿಂದ ಮನೆಗೊಂದು ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.ಸಂಘಟನೆಯ ಕಾರ್ಯಕರ್ತರಾದ ಜಗದೀಶ್ ಮೇಸ್ತ್ರಿ ಅವರ ಮನೆಯಲ್ಲಿ ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಂತರ ೭೦ ಮನೆಗಳಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಂಡಿತು.ಇದೇ ವೇಳೆ ಸ್ಥಳೀಯ ಅನಾರೋಗ್ಯ ಪೀಡಿತರ ಮನೆಗೆ ತೆರಳಿ ಸಾಂತ್ವನ ಹೇಳಿ ಹೇಳಲಾಯಿತು. ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರಾಘವೇಂದ್ರ ಹರಪ್ಪನಕೆರೆ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೋಟೇಶ್ವರ ಘಟಕದ ಸ್ಥಾಪಕ ಅಧ್ಯಕ್ಷ ಸತೀಶ್ ಎಂ. ನಾಯಕ್, ಗೌರವ ಸಲಹೆಗಾರರಾದ ಜಗದೀಶ ಮೊಗವೀರ ಮಾರ್ಕೊಡು, ಗೌರವಾಧ್ಯಕ್ಷ ಆನಂದ್ ಕುಂದರ್, ಮಾಜಿ ಅಧ್ಯಕ್ಷ ಸುರೇಶ್ ಚಾತ್ರಬೆಟ್ಟು, ಮಾಜಿ ಗೌರವ ಅಧ್ಯಕ್ಷ ಸುರೇಶ್ ಮೊಗವೀರ ಶಾನಾಡಿ ಮತ್ತು ಮಹಿಳಾ ಅಧ್ಯಕ್ಷ ಗಾಯತ್ರಿ ವಿಕ್ರಂ ತೆಕ್ಕಟ್ಟೆ, ಕಾರ್ಯದರ್ಶಿ ರಾಜೇಶ್ವರಿ ಮಾರ್ಕೋಡು, ಮಾಜಿ ಅಧ್ಯಕ್ಷೆಯರಾದ ಉಷಾ ಮಾರ್ಕೊಡು ಹಾಗೂ ಶಾರದಾ ಮೂಡುಗೋಪಾಡಿ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಊರ ಗುರಿಕಾರರು ಉಪಸ್ಥಿತರಿದ್ದರು. ಕಾರ್ಯದರ್ಶಿಯಾದ ನಾಗರಾಜ್ ತೆಕ್ಕಟ್ಟೆ ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.