ಸರ್ವ ಜನಾಂಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಡಾ.ಜಗಜೀವನರಾಮ್: ಪಿ.ಎಂ.ನರೇಂದ್ರಸ್ವಾಮಿ

| Published : Jul 07 2024, 01:20 AM IST

ಸರ್ವ ಜನಾಂಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಡಾ.ಜಗಜೀವನರಾಮ್: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರಷ್ಟೇ ಅಲ್ಲದೇ, ಸರ್ವ ಜನಾಂಗಗಳ ಕಲ್ಯಾಣಕ್ಕಾಗಿ ಡಾ.ಬಾಬು ಜಗಜೀವನ ರಾಮ್ ಅವರು ಶ್ರಮಿಸಿ ಸಮ ಸಮಾಜ ನಿರ್ಮಾಣಕ್ಕೆ ಬದುಕಿನುದ್ದಕ್ಕೂ ಹೋರಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಅವರ ಸಂಘಟಿತ ಹೋರಾಟದಿಂದ ಪ್ರಸ್ತುತ ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಜನರು ನೆಮ್ಮದಿಯಿಂದ ಬದುಕುತ್ತಿವೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ದಲಿತರಷ್ಟೇ ಅಲ್ಲದೇ, ಸರ್ವ ಜನಾಂಗಗಳ ಕಲ್ಯಾಣಕ್ಕಾಗಿ ಡಾ.ಬಾಬು ಜಗಜೀವನ ರಾಮ್ ಅವರು ಶ್ರಮಿಸಿ ಸಮ ಸಮಾಜ ನಿರ್ಮಾಣಕ್ಕೆ ಬದುಕಿನುದ್ದಕ್ಕೂ ಹೋರಾಡಿದರು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಪಟ್ಟಣದ ಅಶೋಕ್ ನಗರದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಮ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಹಸಿರು ಕ್ರಾಂತಿಗೆ ಕಾರಣರಾದ ಡಾ.ಬಾಬು ಜಗಜೀವನ ರಾಮ್ ಅವರು ದೇಶದಲ್ಲಿ ಆಹಾರದ ಕೊರತೆಯಾಗದಂತೆ ಅಡಿಪಾಯ ಹಾಕಿದರು ಎಂದು ಸ್ಮರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಅವರ ಸಂಘಟಿತ ಹೋರಾಟದಿಂದ ಪ್ರಸ್ತುತ ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಜನರು ನೆಮ್ಮದಿಯಿಂದ ಬದುಕುತ್ತಿವೆ. ಕಾರ್ಮಿಕ, ಸಮಾಜ ಕಲ್ಯಾಣ, ರಕ್ಷಣೆ, ರೈಲ್ವೆ ಇಲಾಖೆಯ ಸಚಿವರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಕಚೇರಿಯಲ್ಲಿ ಪುಣ್ಯಸ್ಮರಣೆ:

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳಲ್ಲಿ ಅಸ್ಪೃಶ್ಯತೆ ನಿವಾರಣೆಯ ವಿರುದ್ಧದ ಹೋರಾಟದಲ್ಲಿ ಜಗಜೀವನ್ ರಾಮ್ ಅವರ ಪಾತ್ರ ಪ್ರಮುಖವಾದುದು ಎಂದರು.

ಶೋಷಿತರ ಪರವಾಗಿ ದನಿ ಎತ್ತಿದ ಅವರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಯುವಕರು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ದೇಶಕ್ಕಾಗಿ ಡಾ.ಬಾಬು ಜಗಜೀವನ್ ರಾಮ್ ಅನೇಕ ಕೊಡುಗೆ ನೀಡಿದ್ದಾರೆ. ಅದನ್ನು ಸ್ಮರಿಸಿಕೊಳ್ಳುವುದರ ಜತೆಗೆ ಅವರ ಮಾರ್ಗದರ್ಶನಡಿ ನಡೆದುಕೊಂಡಾಗ ಅವರ ಪುಣ್ಯಸ್ಮರಣೆಗೆ ಅರ್ಥಬರಲಿದೆ ಎಂದರು.

ಪುರಸಭೆ ಸದಸ್ಯರಾದ ಪ್ರಮೀಳಾ, ಎಂ.ಎನ್.ಶಿವಸ್ವಾಮಿ, ಎಂ.ಆರ್.ರಾಜಶೇಖರ್, ಮಾಜಿ ಸದಸ್ಯ ಕಿರಣ್ ಶಂಕರ್, ಮುಖಂಡರಾದ ಸಿದ್ದರಾಜು, ಮಂಜುನಾಥ್, ಕುಮಾರ್, ಸ್ವಾಮಿ, ಮಂಜು, ಜಗದೀಶ್, ಶಿವಕುಮಾರ್ ಇದ್ದರು.

ಅಕ್ಷರ ಜಾತ್ರೆಗೆ ಕವನಗಳು, ಪ್ರಶಸ್ತಿಗೆ ಹೆಸರುಗಳ ಆಹ್ವಾನ

ಕನ್ನಡಪ್ರಭ ವಾರ್ತೆ ಮಂಡ್ಯಜೀಶಂಪ ಸಾಹಿತ್ಯ ವೇದಿಕೆಯಿಂದ ಸ್ವಾತಂತ್ರೋತ್ಸವ ಅಂಗವಾಗಿ ಆ.೧೮ ರಂದು ನಗರದ ಗಾಂಧಿ ಭವನದಲ್ಲಿ ೭ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಆಯೋಜಿಸಿದ್ದು, ಆಸಕ್ತ ಕವಿಗಳಿಂದ ಕವನಗಳನ್ನು ಹಾಗೂ ವಿವಿಧ ಪ್ರಶಸ್ತಿಗೆ ಸಾಧಕರ ಹೆಸರನ್ನು ಆಹ್ವಾನಿಸಲಾಗಿದೆ.

ಆಸಕ್ತರು ೨೫ ಸಾಲಿನ ಎರಡು ಕವನಗಳು, ಕಿರು ಪರಿಚಯ, ಫೋಟೋ, ಮೊಬೈಲ್ ಸಂಖ್ಯೆ, ವಿಳಾಸವನ್ನು ಮತ್ತು ಸಾಧಕರು ಸಾಧನೆಯ ವಿವರಗಳನ್ನು ಜೂಲೈ ೧೫ರೊಳಗೆ ಕಳುಹಿಸಬೇಕು. ವ್ಯಾಟ್ಸಪ್‌ನಲ್ಲಿ ಮೊದಲು ನೋಂದಣಿ ಮಾಡಿಕೊಂಡು, ನಂತರ ಅಂಚೆ ಮೂಲಕ ಕಳುಹಿಸಬೇಕು. ಕವನಗಳು ಯಾವುದಾದರೂ ವಿಷಯವನ್ನು ಒಳಗೊಂಡಿರಬಹುದು. ಆಯ್ಕೆಯಾದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಐವತ್ತು ಮಂದಿ ಕವಿಗಳಿಗೆ ಕವಿಗೋಷ್ಠಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ಉತ್ತಮ ಸಾಧಕರನ್ನು ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗುವುದು. ಕವಿಗೋಷ್ಠಿಯಲ್ಲಿ ಭಾಗವಹಿಸುವವರಿಗೆ ಕವನ ವಾಚನಕ್ಕೆ ಅವಕಾಶ, ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.ಹತ್ತು ಉತ್ತಮ ಕವನಗಳಿಗೆ ‘ಕಾವ್ಯಶ್ರೀ’ ಹಾಗೂ ತಲಾ ಹತ್ತು ಮಂದಿ ಸಾಧಕರಿಗೆ ‘ಕನ್ನಡರತ್ನ’, ‘ಸಮಾಜ ಸೇವಾ ರತ್ನ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಲಾಗುವುದು. ಕವಿಗಳು, ಕವನಗಳು, ಸಾಧಕರು ಪರಿಚಯ, ಫೋಟೋವನ್ನ ವ್ಯಾಟ್ಸಾಪ್‌ಮೂಲಕ ಕಳಿಸಿ, ನಂತರ ವಿಳಾಸ: ಎಸ್. ಕೃಷ್ಣಸ್ವರ್ಣಸಂದ್ರ, ಕವಿಮಿತ್ರ, ನಂ-೭೬೭, ಸ್ವರ್ಣಸಂದ್ರ, ಮಂಡ್ಯ-೨ ಕಳುಹಿಸಬೇಕು. ಸಂಪರ್ಕ ಮತ್ತು ವ್ಯಾಟ್ಸಾಪ್ ನಂ-೯೪೪೮೪೨೪೩೮೦ಗೆ ಕಳುಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.