ಜಿ.ಐ.ಬಾಗೇವಾಡಿ ಕಾಲೇಜಿನಲ್ಲಿ ಡಾ.ಕೋರೆ ಜನ್ಮ ದಿನಾಚರಣೆ

| Published : Aug 02 2025, 12:15 AM IST

ಜಿ.ಐ.ಬಾಗೇವಾಡಿ ಕಾಲೇಜಿನಲ್ಲಿ ಡಾ.ಕೋರೆ ಜನ್ಮ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ 78ನೇ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ಸ್ಥಳೀಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿವಿಧ ಸಾಮಾಜಿಕ, ಶೈಕ್ಷಣಿಕ, ಪರಿಸರ ಸಂರಕ್ಷಣಾ ಹಾಗೂ ಜನಪರ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ 78ನೇ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ಸ್ಥಳೀಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿವಿಧ ಸಾಮಾಜಿಕ, ಶೈಕ್ಷಣಿಕ, ಪರಿಸರ ಸಂರಕ್ಷಣಾ ಹಾಗೂ ಜನಪರ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೆ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಪ್ರವೀಣ ಬಾಗೇವಾಡಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ ಬಾಗೇವಾಡಿ, ಸದಸ್ಯರಾದ ಡಾ.ಎಸ್.ಆರ್.ಪಾಟೀಲ, ಎಂ.ಆರ್.ಪಾಟೀಲ, ರವೀಂದ್ರ ಶೆಟ್ಟಿ, ಎಂ.ಎನ್.ಗಡಕರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಶಸ್ತ್ರ ಪಡೆಗಳಲ್ಲಿ ಸೇರ ಬಯಸುವ ಆಕಾಂಕ್ಷಿಗಳಿಗೆ ಪ್ರಶಿಕ್ಷಣ ನೀಡುವ ಉದ್ದೇಶದಿಂದ ಜಿ.ಐ.ಬಿ ಡಿಫೆನ್ಸ್ ಅಕಾಡೆಮಿಗೆ ಚಾಲನೆ ನೀಡಲಾಯಿತು.ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದಡಿಯಲ್ಲಿ ಕೆಎಲ್‌ಇ ಸಂಸ್ಥೆಯ ಸ್ಥಳೀಯ ಎಲ್ಲ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು 50,000ಕ್ಕೂ ಅಧಿಕ ಪೇಪರ್ ಪಾಕೆಟ್‌ಗಳನ್ನು ತಯಾರಿಸಿ, ರ್‍ಯಾಲಿಯಲ್ಲಿ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ನಿಪ್ಪಾಣಿಯ ವಿವಿಧ ಅಂಗಡಿಗಳಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ವಿತರಿಸಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.ಬಾಗೇವಾಡಿ ಕಾಲೇಜಿನ ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್ ಮತ್ತು ರೆಂಜರ್ ಘಟಕಗಳು ನಿತಿನ್ ಕದಮ ಕಿವುಡ ಮಕ್ಕಳ ವಸತಿ ಶಾಲೆಗೆ ಸಹಾಯ ಮಾಡುವ ಉದ್ದೇಶದಿಂದ ₹15,000ಕ್ಕೂ ಹೆಚ್ಚು ಮೊತ್ತದ ಹಣವನ್ನು ಸಂಗ್ರಹಿಸಿ, ಬ್ಲ್ಯಾಂಕೆಟ್ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಿ. ಶಾಲಾ ಮಕ್ಕಳಿಗೆ ಶಿಕ್ಷಕಿಯರಾದ ಪಂಕಜ ಕದಮ, ದೀಪಾಲಿ ಮಾನೆ, ಜ್ಯೋತಿ ಮೆನದುಗುಡಲೆ, ಮಾನಿಷಾ ಚಂಡಕೆ ಸಮ್ಮುಖದಲ್ಲಿ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಡಾ.ಎಂ.ಬಿ.ಕೊಥಳೆ, ಪ್ರಾಚಾರ್ಯ ಡಾ.ಎಂ.ಎಂ.ಹುರಳಿ, ಪ.ಪೂ ಪ್ರಾಚಾರ್ಯೆ ಹೇಮಾ ಚಿಕ್ಕಮಠ, ಶಂಕರಮೂರ್ತಿ ಕೆ.ಎನ್, ಡಾ.ಎಸ್.ಎಂ.ರಾಯಮಾನೆ, ಎನ್.ಎಸ್.ಎಸ್ ಅಧಿಕಾರಿ ಸುಧೀರ ಕೋಠಿವಾಲೆ, ಡಾ.ಸುನಿತಾ ಹುನ್ನರಗಿ, ಎನ್.ಸಿ.ಸಿ ಅಧಿಕಾರಿ ಲೆ.ಸಿದ್ದು ಉದಗಟ್ಟಿ, ಸ್ಕೌಟ್ ಆ್ಯಂಡ್‌ ಗೈಡ್ಸ್ ಅಧಿಕಾರಿಗಳಾದ ಡಾ.ಬಸವರಾಜ ಜನಗೌಡ ಹಾಗೂ ಶಶಿಧರ ಕುಂಬಾರ, ನಾಗರಾಜ ಬೆಳಗಾಂವಕರ ಹಾಗೂ ಚಂದ್ರಪ್ರಕಾಶ ಸನದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.