ಡಾ. ಮಂಜುನಾಥ್ ಬೇರೆ ಪಕ್ಷದಿಂದ ಸ್ಪರ್ಧೆ!

| Published : Mar 15 2024, 01:18 AM IST

ಸಾರಾಂಶ

ಚನ್ನಪಟ್ಟಣ: ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಪಕ್ಷ ಸರಿ ಇಲ್ಲ ಎಂದು ಅವರ ಅಳಿಯ ಡಾ.ಮಂಜುನಾಥ್ ನಿರ್ಧಾರ ಮಾಡಿದ್ದು, ಅದಕ್ಕೆ ಬೇರೆ ಪಕ್ಷ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಚಿಂತನೆ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಟಾಂಗ್ ನೀಡಿದರು.

ಚನ್ನಪಟ್ಟಣ: ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಪಕ್ಷ ಸರಿ ಇಲ್ಲ ಎಂದು ಅವರ ಅಳಿಯ ಡಾ.ಮಂಜುನಾಥ್ ನಿರ್ಧಾರ ಮಾಡಿದ್ದು, ಅದಕ್ಕೆ ಬೇರೆ ಪಕ್ಷ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಚಿಂತನೆ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಟಾಂಗ್ ನೀಡಿದರು.

ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಮಹಿಳಾ ಮುಖಂಡರ ಸಭೆಯಲ್ಲಿ ಭಾಗವಹಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ನನಗಾಗಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗಾಗಲಿ ಹೊಸದಲ್ಲ. ದೇವೇಗೌಡರ ಅಳಿಯ ಗೊತ್ತು, ನನಗೆ ಮಂಜುನಾಥ್ ಯಾರೋ ಗೊತ್ತಿಲ್ಲ. ಈಗ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಸ್ಪರ್ಧಿಸುತ್ತಿದ್ದು, ಅದನ್ನು ಸ್ವಾಗತಿಸುತ್ತೇನೆ ಎಂದರು.

ನಾನು ಹೇಳುತ್ತಿಲ್ಲ:

ದೇವೇಗೌಡರ ಅಳಿಯ ಚುನಾವಣಾ ಕಣದಲ್ಲಿದ್ದಾರೆ. ಜೆಡಿಎಸ್ ಸರಿ ಇಲ್ಲ ಎಂದು ನಾನು ಹೇಳುತ್ತಿಲ್ಲ, ಅದನ್ನು ಅವರ ಅಳಿಯ ಹೇಳುತ್ತಿದ್ದಾರೆ. ದೇವೇಗೌಡರು ಏನು ಸಲಹೆ ನೀಡಿದ್ದಾರೋ ನನಗೆ ಗೊತ್ತಿಲ್ಲ. ಅವರ ಕುಟುಂಬದ ಎಲ್ಲ ನಿರ್ಧಾರಗಳಲ್ಲಿ ಭಾಗಿಯಾದ ಸದಸ್ಯರು, ದೇವೇಗೌಡರು ಕಟ್ಟಿದ ಪಕ್ಷ, ಅವರ ಜನಪ್ರಿಯತೆ ಈ ರಾಜ್ಯದಲ್ಲಿ ಇಲ್ಲ ಎಂದು ನಿರ್ಧರಿಸಿದ್ದಾರೆ. ಅದಕ್ಕೆ ಸ್ಪರ್ಧೆಗೆ ಬೇರೆ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಕನಕಪುರದವರನ್ನು ಸೋಲಿಸಲು ಒಂದಾಗಬೇಕು ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಗೆ ಅರ್ಜಿ ಹಾಕಿದ ನಂತರ ಉತ್ತರ ನೀಡುತ್ತೇನೆ. ಅವರ ಪಕ್ಷ ಅಸ್ತಿತ್ವದಲ್ಲಿ ಇಲ್ಲ. ಅವರ ನಾಯಕತ್ವ ಅಸ್ತಿತ್ವದಲ್ಲಿ ಇಲ್ಲ ಎಂದು ಅವರ ಕುಟುಂಬ ಸದಸ್ಯರು, ಅವರ ಕುಟುಂಬ ಯೋಗಕ್ಷೇಮ ನೋಡಿಕೊಳ್ಳುವವರೇ ನಿರ್ಧರಿಸಿದ್ದಾರೆ. ಚುನಾವಣೆಗೆ ಅರ್ಜಿ ಸಲ್ಲಿಸಿದ ನಂತರ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದರು.

ನಾನು ಈ ಜಿಲ್ಲೆಯ ಮಗ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಗ. ಈ ಜಿಲ್ಲೆಯ ಅಭಿವೃದ್ಧಿ, ರೈತರ, ಯುವಜನರ ಅಭಿವೃದ್ಧಿಯ ಹಿತದೃಷ್ಟಿಯಿಂದ ನನ್ನ ಜತೆ ಕೈಜೋಡಿಸಿ. ಆ ಪಕ್ಷ ಬಿಟ್ಟು ನಮ್ಮ ಪಕ್ಷಕ್ಕೆ ಬನ್ನಿ. ಪಕ್ಷ ಬೇಧ ಮರೆತು ಬನ್ನಿ ಎಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ನೀಡಿದರು.

ತಳಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಆ ವಿಚಾರ ಗೊತ್ತಿಲ್ಲ. ನಾನು ಮಾಡಿದ ಕೆಲಸಕ್ಕೆ ನನ್ನ ಕ್ಷೇತ್ರದ ಜನರಲ್ಲಿ ಕೂಲಿ ಕೇಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಮುಖಂಡ ದುಂತೂರು ವಿಶ್ವನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ನಗರಸಭೆ ಸದಸ್ಯ ವಾಸೀಲ್ ಅಲಿಖಾನ್ ಇತರರು ಉಪಸ್ಥಿತರಿದ್ದರು.

ಬಾಕ್ಸ್................

ಎಲ್ಲವನ್ನೂ ಕಾದು ನೋಡೋಣ

ಬಿಜೆಪಿಯಲ್ಲಿ ಪ್ರತಾಪ್ ಸಿಂಹಗೆ ಕೈಕೊಟ್ಟಿದ್ದಾರೆ. ಪಕ್ಷ ಕಟ್ಟಿದ ನಳೀನ್ ಕುಮಾರ್ ಕಟೀಲ್‌ರನ್ನ ಏನು ಮಾಡಿದ್ದಾರೋ ಗೊತ್ತಿಲ್ಲ! ನನನ್ನು ಗುಂಡಿಕ್ಕಿ ಕೊಲ್ತೀವಿ ಅಂದೋರು ಬಂಡಾಯ ಎನ್ನುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ಹೋದವರ ಕಥೆ ಏನಾಗುತ್ತೋ ಗೊತ್ತಿಲ್ಲ ಎಂದು ಟಿಕೆಟ್ ಸಿಗದ ಬಿಜೆಪಿ ನಾಯಕರ ಬಗ್ಗೆ ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು.

ಇನ್ನು ಯಾರ್‍ಯಾರ ಕತೆ ಏನಾಗುತ್ತದೋ ಗೊತ್ತಿಲ್ಲ. ಎಲ್ಲವನ್ನು ಕಾದು ನೋಡೋಣ. ಪಕ್ಷ ಈಗ ತಾನೆ ನನಗೆ ಟಿಕೆಟ್ ಘೋಷಣೆ ಮಾಡಿದೆ. ಸ್ಪರ್ಧೆಗೆ ಅರ್ಜಿ ಸಲ್ಲಿಸದ ನಂತರ ಮಾತನಾಡುತ್ತೇನೆ ಎಂದು ಹೇಳಿದರು.

(ಈ ಫೋಟೋನ ಲೀಡ್ ಬಾಕ್ಸ್‌ಗೆ ಬಳಸಿ)

ಪೊಟೋ೧೪ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಮುಖಂಡರ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದರು.