ಜಲಜೀವನ್‌ ಮಿಷನ್ ಸರ್ಕಾರಗಳ ಮಹತ್ವದ ಯೋಜನೆ: ಶಾಸಕ ಬೇಳೂರು

| Published : Mar 15 2024, 01:18 AM IST

ಸಾರಾಂಶ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಪ್ರತಿ ಹಳ್ಳಿಯ, ಪ್ರತಿ ಮನೆಗೆ ನೀರು ಪೂರೈಸುವ ಭಗೀರಥ ಪ್ರಯತ್ನ ಇದಾಗಿದೆ. ಈ ಯೋಜನೆಯ ಅನುಷ್ಠಾನ ಭಾಗಶಃ ಆಗಿದೆ. ಕೊಳವೆ, ಕೊಳಾಯಿಗಳ ಜೋಡಣೆ ಕಾರ್ಯ ಮುಗಿದಿದೆ. ಕೆಲವು ಕಡೆಗಳಲ್ಲಿ ನೀರಿನ ಟ್ಯಾಂಕ್ ಸಹ ನಿರ್ಮಾಣ ಆಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೊಸನಗರದಲ್ಲಿ ಹೇಳಿದ್ದಾರೆ.

ಹೊಸನಗರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಪ್ರತಿ ಹಳ್ಳಿಯ, ಪ್ರತಿ ಮನೆಗೆ ನೀರು ಪೂರೈಸುವ ಭಗೀರಥ ಪ್ರಯತ್ನ ಇದಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲೂಕಿನ ಎಂ.ಗುಡ್ಡೆಕೊಪ್ಪ ಹಾಗೂ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ₹11.44 ಕೋಟಿ ವೆಚ್ಚದ ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿ, ಅವರು ಮಾತನಾಡಿದರು. ಈ ಯೋಜನೆಯ ಅನುಷ್ಠಾನ ಭಾಗಶಃ ಆಗಿದೆ. ಕೊಳವೆ, ಕೊಳಾಯಿಗಳ ಜೋಡಣೆ ಕಾರ್ಯ ಮುಗಿದಿದೆ. ಕೆಲವು ಕಡೆಗಳಲ್ಲಿ ನೀರಿನ ಟ್ಯಾಂಕ್ ಸಹ ನಿರ್ಮಾಣ ಆಗಿದೆ ಎಂದರು.

ಕೆರೆ, ಕೊಳವೆಬಾವಿ, ನದಿ, ಕೊಳ್ಳಗಳಲ್ಲಿನ ನೀರನ್ನು ಶುದ್ಧೀಕರಿಸಿ ಟ್ಯಾಂಕ್‍ಗಳಿಗೆ ಸರಬರಾಜು ಮಾಡಿದ ನಂತರ ಮನೆಗಳಿಗೆ ಪೂರೈಕೆ ಮಾಡಲಾಗುವುದು. ಹೊಸನಗರ ಪಟ್ಟಣಕ್ಕೆ ಚಕ್ರಾನಗರ ಅಣೆಕಟ್ಟಿನಿಂದ ನೀರು ಸರಬರಾಜು ಮಾಡುವ ಮಹತ್ವದ ಯೋಜನೆ ಶೀಘ್ರದಲ್ಲಿ ಶಿಲಾನ್ಯಾಸ ಮಾಡಲಾಗುವುದು. ಇದರಿಂದ ಪಟ್ಟಣ ಹಾಗೂ ಆ ಮಾರ್ಗದಲ್ಲಿ ಬರುವ ಹಳ್ಳಿಗಳ ನೀರಿನ ಕೊರತೆ ನೀಗಿದಂತೆ ಆಗುತ್ತದೆ ಎಂದು ಆಶಿಸಿದರು.

ಈ ವೇಳೆಯಲ್ಲಿ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಂಕೇಶಗೌಡ, ಉಪಾಧ್ಯಕ್ಷೆ ಸುಧಾ, ಮುಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿ, ತಹಸೀಲ್ದಾರ್ ರಶ್ಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಂದ್ರ ಶಶಿಕಲಾ, ವಿಕುಮಾರ ಕರುಣಾಕರ್, ವಿಜೇಂದ್ರಕುಮಾರ್, ಶಿವಾನಂದ, ಹುಲಿಗಾರ್ ಕೃಷ್ಣಮೂರ್ತಿ ಮತ್ತಿತರರು ಇದ್ದರು.

- - -

-14ಎಚ್‍ಒಎಸ್1ಪಿ:

ಹೊಸನಗರ ತಾಲೂಕು ಎಂ.ಗುಡ್ಡೆಕೊಪ್ಪ, ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜೆಜೆಎಂ ಯೋಜನೆಯ ಕಾಮಗಾರಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.