ಚೌಡ್ಲು ಗ್ರಾಮದ ಗಾಂಧಿನಗರದ ಶ್ರೀ ದೊಡ್ಡಮಾರಿಯಮ್ಮ ದೇವಾಲಯದ ಸಮೀಪ ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪ ಯೋಜನೆಯಡಿ ೪.೫೪ ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಈಚೆಗೆ ಭೂಮಿ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಮೀಪದ ಚೌಡ್ಲು ಗ್ರಾಮದ ಗಾಂಧಿನಗರದ ಶ್ರೀ ದೊಡ್ಡಮಾರಿಯಮ್ಮ ದೇವಾಲಯದ ಸಮೀಪ ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪ ಯೋಜನೆಯಡಿ ೪.೫೪ ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಈಚೆಗೆ ಭೂಮಿ ಪೂಜೆ ನೆರವೇರಿಸಿದರು.ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆ ಕಾಮಗಾರಿ ಮಾಡಿಸಬೇಕು. ದೇವಾಲಯದ ಆಡಳಿತ ಮಂಡಳಿ ಕಾಮಗಾರಿ ಬಗ್ಗೆ ಮುತುವರ್ಜಿ ವಹಿಸಬೇಕು ಎಂದರು. ಭೂಮಿ ಪೂಜೆ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಹಾಗೂ ಕ್ಷೇಮಾಭಿವೃದ್ಧಿ ಟ್ರಸ್ಸ್ ಅಧ್ಯಕ್ಷ ಎಚ್. ಮಂಜುನಾಥ್, ಗೌರವಾಧ್ಯಕ್ಷ ಎಚ್.ಜಿ. ರಘು, ಉಪಾಧ್ಯಕ್ಷ ಕಾಂತರಾಜ್, ಪ್ರಧಾನ ಕಾರ್ಯದರ್ಶಿ ಎಚ್.ಎನ್. ಗಣೇಶ್, ಖಜಾಂಚಿ ಈಶ್ವರ್, ಬಾಲು ಕಾರೆಕೊಪ್ಪ, ಮಾಜಿ ಅಧ್ಯಕ್ಷ ಎಚ್.ಟಿ. ಮಲ್ಲಯ್ಯ, ಎಚ್.ಎಂ. ದುರ್ಗೇಶ್, ಎಚ್.ಎನ್. ಕೇಶವ, ಎಚ್.ಎ. ಗಂಗಾಧರ, ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಈ. ಜಯೇಂದ್ರ, ಬ್ಲಾಕ್ ಕಾಂಗ್ರೆಸ್ ಖಜಾಂಚಿ ಸಿ.ಇ. ಚೇತನ್, ಪ್ರಮುಖರಾದ ಎಸ್.ಕೆ. ವಿನಿ, ಡಿ.ಯು. ಕಿರಣ್ ಉಪಸ್ಥಿತರಿದ್ದರು.