ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಹುಟ್ಟಿನಿಂದಲೂ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯವನ್ನು ಮೈಗೂಡಿಸಿಕೊಂಡು, ಬದುಕಿನ್ನುದ್ದಕ್ಕೂ ಉಳಿಸಿ, ಬೆಳೆಸಿ ಮುನ್ನಡೆಸುತ್ತಿರುವ ಐತಿಹಾಸಿಕ ಹಿನ್ನೆಲೆಯುಳ್ಳ 21 ಮೂಲ ನಿವಾಸಿ ಜನಾಂಗದವರ ಕೊಡವ ಭಾಷಿಕ ಸಮುದಾಯಗಳ ಕೂಟದ 2024- 27ನೇ ಸಾಲಿನ ಅಧ್ಯಕ್ಷರಾಗಿ ಡಾ.ಮೇಚೀರ ಸುಭಾಷ್ ನಾಣಯ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೂಡಂಡ ಸಾಬ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ವಿರಾಜಪೇಟೆಯ ಗಣಪತಿ ಆರ್ಕೇಡ್ ಕಟ್ಟಡದ ಸಭಾಂಗಣದಲ್ಲಿ ನಡೆದ ಕೂಟದ ಮಹಾಸಭೆಯಲ್ಲಿ 21 ಜನಾಂಗಗಳ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಖಜಾಂಚಿಯಾಗಿ ಪಡಿಞರಂಡ ಪ್ರಭುಕುಮಾರ್, ಉಪಾಧ್ಯಕ್ಷರಾಗಿ ತೋರೆರ ಮುದ್ದಯ್ಯ, ಕುಡಿಯರ ಎಂ. ಮುತ್ತಪ್ಪ, ನೆರೆಯಂಡಮ್ಮಂಡ ಉಮಾ ಪ್ರಭು, ಪೊನ್ನೀರ ಗಗನ್, ಸಹ ಕಾರ್ಯದರ್ಶಿಗಳಾಗಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ ಹಾಗೂ ಪಟ್ಟಚಾರೀರ ದಿನೇಶ್ ಕಾರ್ಯಪ್ಪ ಆಯ್ಕೆಯಾದರು.ನಿರ್ದೇಶಕರಾಗಿ ಕಣಿಯಂಡ ಜೆ. ಪ್ರಕಾಶ್, ಮೇದಪ್ಪಂಡ ಬಿ. ಕಿರಣ್, ತೋರೆರ ಕಾಶಿ ಕಾರ್ಯಪ್ಪ, ಪಾತಂಡ ಸಂತೋಷ್, ಜೋಕಿರ ಜೀವನ್, ಕೋಲೆಯಂಡ ಯು. ಗಿರೀಶ್, ಪೊಟ್ಟಂಡ ಗಣೇಶ್, ಬೀಕಚಂಡ ಬೆಳ್ಯಪ್ಪ, ಕಾಪಾಳ ಮಿಲನ್ ಭರತ್, ಮಲೆಯಂಡ ಮುತ್ತಪ್ಪ, ಪೊನ್ನಜ್ಜೀರ ಕಿಶು ಭರತ್, ಮೇದರ ಚಂದ್ರ, ಚೋಕೀರ ಭೀಮಯ್ಯ, ಪುತ್ತಮನೆ ಅನಿಲ್ ಪ್ರಸಾದ್, ಮಾರಂಗಿ ರಾಜಾ ಸುಬ್ರಮಣಿ, ಪೊಟ್ಟಂಡ ಎಂ. ಗಣೇಶ್, ಚೆಲ್ಯಂಡ ಚಂದ್ರಶೇಖರ್, ಅರಮನೆ ಪಾಲೆರ ದೇವಯ್ಯ ಆಯ್ಕೆಯಾಗಿದ್ದಾರೆ. ಡಾ. ಸುಭಾಷ್ ನಾಣಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ಲೆಕ್ಕಪತ್ರವನ್ನು ಖಜಾಂಚಿ ಪ್ರಭುಕುಮಾರ್ ಮಂಡಿಸಿದರು. ಕಾರ್ಯದರ್ಶಿ ಸಾಬ ಸುಬ್ರಮಣಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ದಿನು ಬೋಜಪ್ಪ ವಂದಿಸಿದರು.