ರಾಜ್ಯ ಮಟ್ಟದ ವೈದ್ಯ ಸೇವಾರತ್ನ ಪ್ರಶಸ್ತಿಗೆ ಡಾ.ಎನ್.ಸಿ.ಮಧುಸೂದನ್‌ ಆಯ್ಕೆ

| Published : Sep 10 2025, 01:04 AM IST

ಸಾರಾಂಶ

ಸೋಮವಾರಪೇಟೆ ಪಟ್ಟಣ ಸಮೀಪದ ಹಾನಗಲ್ಲು ನಿವಾಸಿ ಡಾ. ಎನ್‌ ಸಿ. ಮ಼ಧುಸೂದನ್‌ ಅವರು ಆಯ್ಕೆಯಾಗಿದ್ದು ಇಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕರ್ನಾಟಕ ಪ್ರೆಸ್‌ಕ್ಲಬ್ ವತಿಯಿಂದ ನೀಡಲಾಗುವ ವೈದ್ಯ ಸೇವಾ ರತ್ನ ಪ್ರಶಸ್ತಿಗೆ ಮೂಲತಃ ಸೋಮವಾರಪೇಟೆ ಪಟ್ಟಣ ಸಮೀಪದ ಹಾನಗಲ್ಲು ನಿವಾಸಿ ಡಾ. ಎನ್.ಸಿ. ಮಧುಸೂದನ್ ಅವರು ಆಯ್ಕೆಯಾಗಿದ್ದು, ಸೆ. 10ರಂದು (ಇಂದು) ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.ಕರ್ನಾಟಕ ಪ್ರೆಸ್‌ಕ್ಲಬ್ ವತಿಯಿಂದ ಪ್ರತಿ ವರ್ಷ ಆಯೋಜಿಸುವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ವೈದ್ಯ ಸೇವಾ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಹಾನಗಲ್ಲು ಗ್ರಾಮದ ಡಾ. ಮಧುಸೂದನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.10ರಂದು (ಇಂದು) ಬೆಂಗಳೂರಿನ ಜ್ಞಾನ ಭಾರತಿ ಕಲಾಗ್ರಾಮದಲ್ಲಿ ಅಪರಾಹ್ನ 3.30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಡಾ. ಮಧುಸೂದನ್ ಅವರು ಹಾನಗಲ್ಲು ನಿವಾಸಿ, ಜಿಲ್ಲೆಯ ವಿವಿಧೆಡೆ ಪೋಸ್ಟ್ ಮಾಸ್ಟರ್ ಆಗಿದ್ದ ಎನ್.ಸಿ. ಚಂದ್ರ ಅವರ ಪುತ್ರರಾಗಿದ್ದು, ಸೋಮವಾರಪೇಟೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ಬೆಂಗಳೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಪೂರೈಸಿ, ಪ್ರಸ್ತುತ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಯಲ್ಲಿದ್ದಾರೆ.

------------------------------

ಹಿಂದುಗಳು ಭಯದಲ್ಲಿ ಹಬ್ಬದ ಆಚರಣೆ: ಬೋಪಯ್ಯ ಆತಂಕ

ಕನ್ನಡಪ್ರಭ ವಾರ್ತೆ ಮಡಿಕೇರಿಕರ್ನಾಟಕ ಯಾವ ದೇಶದಲ್ಲಿದೆ ಎಂಬುದೇ ಸಂಶಯವಾಗುತ್ತಿದೆ ಎಂದು ಶಿವಮೊಗ್ಗದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ಬೋಪಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಯಾವ ದೇಶದಲ್ಲಿದೆ ಎಂಬುದೇ ಸಂಶಯವಾಗುತ್ತಿದೆ. ಹಿಂದೂಗಳು ಭಯದಲ್ಲಿ‌ ಹಬ್ಬ ಆಚರಿಸುವಂತಾಗಿದೆ. ಜೊತೆಗೆ ಎಫ್ಐಆರ್ ಹೇರಿಕೊಳ್ಳುವಂತಾಗಿದೆ. ಸರ್ಕಾರವೇ ಗೂಂಡಾಗಳ ವಿರುದ್ಧ ಪ್ರಕರಣ‌ ವಾಪಾಸು ಪಡೆಯುತ್ತಿದೆ. ಹಮಾರ ಸರ್ಕಾರ್ ಹೈ, ಖುಚ್ ಬಿ ನಹೀ ಹೋಗಾ ಎಂಬಂತಾಗಿದೆ ಎಂದರು.ಹದ್ದಿನ ಕಣ್ಣಿನ‌ ಪೊಲೀಸರು ಕಾಗೆಗಳಾಗಿದ್ದಾರಾ ಅಂತ ಕೇಳಬೇಕಾಗುತ್ತೆ. ಹೆಣ್ಣು ಮಕ್ಕಳ ಮೇಲೆ‌ ಲಾಠಿ ಚಾರ್ಜ್ ಆಗುತ್ತೆ. ಹಿಂದೂಗಳಿಗೆ ಏನೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ತಕ್ಷಣ ಸಿದ್ದರಾಮಯ್ಯ ಸರ್ಕಾರ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.