44ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಸಾವಯವ ರಸಾಯನಶಾಸ್ತ್ರ ವಿಭಾಗದಲ್ಲಿ ತಮ್ಮ ಪ್ರಬಂಧದ ಅತ್ಯುತ್ತಮ ಮೌಖಿಕ ಪ್ರಸ್ತುತಿಗಾಗಿ ಪ್ರೊ. ಡಿ. ಅಶೋಕ್ ಮತ್ತು ಡಾ. ಎಂ. ಸರಸಿಜಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್‌ಡ್ ಸೈನ್ಸಸ್‌ನಲ್ಲಿ ಡಿ. 22 ರಿಂದ 24ರವರೆಗೆ ನಡೆದ ಭಾರತೀಯ ರಸಾಯನಶಾಸ್ತ್ರಜ್ಞರ ಮಂಡಳಿಯ 44ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಸಾವಯವ ರಸಾಯನಶಾಸ್ತ್ರ ವಿಭಾಗದಲ್ಲಿ ತಮ್ಮ ಪ್ರಬಂಧದ ಅತ್ಯುತ್ತಮ ಮೌಖಿಕ ಪ್ರಸ್ತುತಿಗಾಗಿ ಪ್ರೊ. ಡಿ. ಅಶೋಕ್ ಮತ್ತು ಡಾ. ಎಂ. ಸರಸಿಜಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಹಿಂದೆಯೂ ಅವರು ಸಾವಯವ ರಸಾಯನಶಾಸ್ತ್ರ ವಿಷಯದಲ್ಲಿ ಯುವ ಮಹಿಳಾ ಸಂಶೋಧಕಿ ಪ್ರಶಸ್ತಿ ಪಡೆದುಕೊಂಡಿದ್ದರು. ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಅಬ್ಬಾಸ್ ಮತ್ತು ನಸ್ರೀನ್ ದಂಪತಿ ಪುತ್ರಿ ಡಾ. ನಗ್ಮಾಭಾನು ಎಚ್.ಎ. ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಾಲಕೃಷ್ಣ ಕಲ್ಲೂರಾಯ ಅವರ ಮಾರ್ಗದರ್ಶನದಲ್ಲಿ ‘ಸಿಂಥೆಸಿಸ್ ಆಫ್ ಸಮ್ ನೋವೆಲ್ ಹೆಟಾರಿಸೈಕ್ಲಿಕ್ ಕಾಂಪೌಂಡ್ಸ್ ವಯಾ ಡಯಪೊಲರ್ ಸೈಕ್ಲೋಡಿಷನ್ ರಿಯಾಕ್ಷನ್ಸ್’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.

ಪ್ರಸ್ತುತ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಮುಖ್ಯ ಆವರಣದಲ್ಲಿರುವ ರಸಾಯನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿದ್ದಾರೆ.