ಡಾ.ನಿಶಿತಾ ಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು

| Published : May 23 2024, 01:01 AM IST

ಸಾರಾಂಶ

5ಕ್ಕೂ ಅಧಿಕ ಸ್ಪರ್ಧಿಗಳು ಮಿಸೆಸ್‌ ಇಂಡಿಯ ಕರ್ನಾಟಕ ಮಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 10 ಮಂದಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು-2024 ಕಿರೀಟವನ್ನು ಡಾ.ನಿಶಿತಾ ಶೆಟ್ಟಿಯಾನ್‌ ಫನಾಂರ್ಡೀಸ್‌ ಮುಡಿಗೇರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಕದ್ರಿ ಪಾರ್ಕ್‌ನಲ್ಲಿ ಭಾನುವಾರ ನಡೆದ ಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು ಇದರ 5 ನೇ ಆವೃತ್ತಿಯ ಫೈನಲ್‌ ಸ್ಪರ್ಧೆಯಲ್ಲಿ ಡಾ.ನಿಶಿತಾ ಶೆಟ್ಟಿಯಾನ್‌ ಫನಾಂಡಿಸ್‌ ಕಿರೀಟ ತನ್ನದಾಗಿಸಿದ್ದಾರೆ ಎಂದು ಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕ ದೀಪಕ್‌ ಗಂಗೂಲಿ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25ಕ್ಕೂ ಅಧಿಕ ಸ್ಪರ್ಧಿಗಳು ಮಿಸೆಸ್‌ ಇಂಡಿಯ ಕರ್ನಾಟಕ ಮಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 10 ಮಂದಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು-2024 ಕಿರೀಟವನ್ನು ಡಾ.ನಿಶಿತಾ ಶೆಟ್ಟಿಯಾನ್‌ ಫನಾಂರ್ಡೀಸ್‌ ಮುಡಿಗೇರಿಸಿದ್ದಾರೆ. ಡಾ.ರಶ್ಮಾ ಪ್ರಥಮ ರನ್ನರ್‌ ಅಪ್‌, ಡಾ.ಶೃತಿ ಬಳ್ಳಾಲ್‌ ಹಾಗೂ ರಮ್ಯ ದ್ವಿತೀಯ ರನ್ನರ್‌ ಅಪ್‌, ವಿದ್ಯಾ ಸಂಪತ್‌ ತೃತೀಯ ರನ್ನರ್‌ ಅಪ್‌ ಪ್ರಶಸ್ತಿಗಳನ್ನು ಪಡೆದುಕೊಂಡರು. ಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು-2024ರ ಕ್ಲಾಸಿಕ್‌ ವಿಭಾಗದಲ್ಲಿ ಸಬೀತಾ ವಿಜೇತರಾಗಿದ್ದು, ಡಾ.ಅರ್ಚನಾ ಪ್ರಥಮ ರನ್ನರ್‌ ಅಪ್‌, ಸೌಮ್ಯ ರಾವ್‌ ದ್ವಿತೀಯ ರನ್ನರ್‌ ಅಪ್‌, ಸವಿತಾ ಭಂಡಾರಿ ತೃತೀಯ ರನ್ನರ್‌ ಅಪ್‌ ಪ್ರಶಸ್ತಿಗಳನ್ನು ಪಡೆದುಕೊಂಡರು. ಸೂಪರ್‌ ಕ್ಲಾಸಿಕ್‌ ವಿಭಾಗದಲ್ಲಿ ನಂದಿನಿ ಅವರು ವಿಜೇತರಾಗಿದ್ದಾರೆ ಎಂದರು. ಮರ್ಸಿ ಬ್ಯೂಟಿ ಅಕಾಡೆಮಿಯ ಮಾಲಕಿ ಹಾಗೂ ಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕಿ ಮರ್ಸಿ ವೀಣಾ ಡಿಸೋಜಾ, ಸಂಘಟಕರಾದ ಅನಿಶಾ ಗಂಗೂಲಿ, ಡಾ.ನಿಶಿತಾ ಶೆಟ್ಟಿಯಾನ್‌ ಫನಾಂಡಿಸ್‌, ಡಾ.ಶೃತಿ ಬಳ್ಳಾಲ್‌, ವಿದ್ಯಾ ಸಂಪತ್‌ ಇದ್ದರು.