ಸಾರಾಂಶ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಾಯ್ಸ್ ಆಫ್ ಆರಾಧನಾ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಡಾ. ಪಾದೂರು ಗುರುರಾಜ ಭಟ್ ಬರೆದ ಎಲ್ಲ ಗ್ರಂಥಗಳು ಇತಿಹಾಸಕಾರರಿಗೆ, ಅಧ್ಯಯನ ಮಾಡುವವರಿಗೆ ಆಕರ ಗ್ರಂಥವಾಗಿದ್ದು ಅವರನ್ನು ಸ್ಮರಿಸುವುದು ಸುತ್ತರ್ಹ್ಯ ಎಂದು ಇತಿಹಾಸ ತಜ್ಞ ಮೂಡಬಿದಿರೆಯ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಹೇಳಿದರು. ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಯುಗಪುರುಷದ ನೇತೃತ್ವದಲ್ಲಿ ನಡೆದ ಡಾ. ಪಾದೂರು ಗುರುರಾಜ ಭಟ್ ಅವರ 100ರ ನೆನಪು ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೊಡೆತ್ತೂರು ನಯನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಅಗರಿ ಎಂಟರ್ಪ್ರೈಸಸ್‌ನ ಅಗರಿ ರಾಘವೇಂದ್ ಭಟ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಹಿರಿಯ ಪತ್ರಕರ್ತ ಕೆ.ಎಲ್. ಕುಂಡಂತಾಯ, ನಿವೃತ್ತ ಪ್ರಾಧ್ಯಾಪಕ ಬಾಲಕೃಷ್ಣ ಉಡುಪ, ಕರ್ನಾಟಕ ಜಾನಪದ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್, ಪಿ. ವೆಂಕಟೇಶ್ ಭಟ್, ಗುರುಪ್ರಸಾದ್ ಹೊಸಬೆಟ್ಟು, ಸತೀಶ್ ಪುಜಾರಿ ಅಬ್ಬನಡ್ಕ, ಡಾ. ಸೋಮಶೇಖರ ಮಯ್ಯ ಮತ್ತಿತರರಿದ್ದರು.
ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಸ್ವಾಗತಿಸಿದರು. ಪು. ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಾಯ್ಸ್ ಆಫ್ ಆರಾಧನಾ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.