ಡಾ.ಪ್ರಭಾಕರ ಕೋರೆ ಸಹಕಾರಿ; ಶೇ.15ರಷ್ಟು ಲಾಭಾಂಶ ವಿತರಣೆ

| Published : Sep 21 2024, 01:57 AM IST / Updated: Sep 21 2024, 01:58 AM IST

ಡಾ.ಪ್ರಭಾಕರ ಕೋರೆ ಸಹಕಾರಿ; ಶೇ.15ರಷ್ಟು ಲಾಭಾಂಶ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯು ಕಳೆದ ಆರ್ಥಿಕ ವರ್ಷದಲ್ಲಿ ₹19.32 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 15ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಹಾಗೂ ದೆಹಲಿ ರಾಷ್ಟ್ರೀಯ ಸಹಕಾರಿ ಸಕ್ಕರೆ ಮಹಾಮಂಡಳ ನಿರ್ದೇಶಕ ಅಮಿತ ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯು ಕಳೆದ ಆರ್ಥಿಕ ವರ್ಷದಲ್ಲಿ ₹19.32 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 15ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಹಾಗೂ ದೆಹಲಿ ರಾಷ್ಟ್ರೀಯ ಸಹಕಾರಿ ಸಕ್ಕರೆ ಮಹಾಮಂಡಳ ನಿರ್ದೇಶಕ ಅಮಿತ ಪ್ರಭಾಕರ ಕೋರೆ ಹೇಳಿದರು.

ಶುಕ್ರವಾರ ಚಿಕ್ಕೋಡಿ ತಾಲೂಕಿನ ಅಂಕಲಿಯ ಶಿವಾಲಯದಲ್ಲಿ ಆಯೋಜಿಸಿದ್ದ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯ 36ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಅಂತರರಾಜ್ಯ ಸಹಕಾರಿ ಸಂಸ್ಥೆಯಾಗಿ ಪರಿವರ್ತನೆಗೊಂಡಿದ್ದು, ಮಹಾರಾಷ್ಟ್ರದಲ್ಲಿ 9 ಶಾಖೆ ಪ್ರಾರಂಭಿಸಲಾಗುವುದು ಹಾಗೂ ಬರುವ ದಿನಗಳಲ್ಲಿ ಗೋವಾ ರಾಜ್ಯಕ್ಕೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಸಂಸ್ಥೆ ಪ್ರತಿ ವರ್ಷ ಶೇ.30ರಷ್ಟು ಪ್ರಗತಿ ದಾಖಲಿಸುತ್ತಿದೆ. ಸಹಕಾರಿಯನ್ನು ಸಂಪೂರ್ಣ ಡಿಜಿಟಲೈಜೇಶನ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಲು ನಿರ್ಧರಿಸಿದ್ದು, ಇದರಿಂದ ಗ್ರಾಹಕರು ಫೋನ್‌ ಪೇ, ಎಟಿಎಂ ಮೂಲಕ ವ್ಯವಹಾರ ಆರಂಭಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿ.ಬಿ. ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಡಾ.ಪ್ರಭಾಕರ ಕೋರೆ ಅವರ ಮುಂದಾಲೋಚನೆಯಿಂದ ಸಹಕಾರಿ ಬೃಹದಾಕಾರವಾಗಿ ಬೆಳೆದು ನಿಂತಿದೆ ಎಂದರು.ಸಹಕಾರಿಯ ಚೇರ್ಮನ್ ಮಹಾಂತೇಶ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್.ಕರೋಶಿ ವಾರ್ಷಿಕ ವರದಿ ಮಂಡಿಸಿದರು.ಅತ್ಯುತ್ತಮ ಶಾಖೆಗಳಿಗೆ ಪ್ರಶಸ್ತಿ : ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಾಖೆಗಳ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದ್ದು, ಈ ವರ್ಷ ನಗರ ವಿಭಾಗದಲ್ಲಿ ಬೆಳಗಾವಿ ಶಾಖೆ ಪ್ರಥಮ ಹಾಗೂ ಗ್ರಾಮೀಣ ವಿಭಾಗದಲ್ಲಿ ಕಬ್ಬೂರ ಶಾಖೆ ಪ್ರಥಮ ಸ್ಥಾನ ಪಡೆದುಕೊಂಡಿವೆ ಎಂದು ಮಾಹಿತಿ ನೀಡಿದರು.

ವಿಜಯ ಮೆಟಗುಡ್ಡ, ಲಕ್ಷಯ ರೆಡ್ಡಿ, ಭರತೇಶ ಬನವನೆ, ಉಪಾಧ್ಯಕ್ಷರಾದ ಸಿದಗೌಡ ಮಗದುಮ್ಮ, ಅಣ್ಣಾಸಾಬ ಸಂಕೇಶ್ವರಿ, ಬಸನಗೌಡ ಆಸಂಗಿ, ಡಾ.ಸುಕುಮಾರ ಚೌಗುಲೆ, ಪಿಂಟು ಹಿರೇಕುರುಬರ, ಅಮೀತ ಜಾಧವ, ಪ್ರಫುಲ್ ಶೆಟ್ಟಿ, ಬಾಳಪ್ಪ ಉಮರಾಣಿ, ಅಶೋಕ ಚೌಗಲಾ, ಅನೀಲ ಪಾಟೀಲ, ಶ್ರೀಕಾಂತ ಉಮರಾಣೆ, ಶೋಭಾ ಜಕಾತೆ, ಶೈಲಜಾ ಪಾಟೀಲ, ಪಾರ್ವತಿ ಧರನಾಯಿಕ, ಜಯಶ್ರೀ ಮೇದಾರ ಉಪಸ್ಥಿತರಿದ್ದರು. ವ್ಯವಸ್ಥಾಪಕಿ(ಆಡಳಿತ) ಸುನಂದಾ ಮಗದುಮ್ಮ ನಿರೂಪಿಸಿದರು.