ಜನ್ಮದಿನ ನಿಮಿತ್ತ ದೇವರ ದರ್ಶನ ಪಡೆದ ಡಾ.ಪ್ರಭಾಕರ ಕೋರೆ

| Published : Aug 02 2024, 12:46 AM IST

ಸಾರಾಂಶ

ತಮ್ಮ 77ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಔಂದಾ ಶ್ರೀ ನಾಗನಾಥ ಜ್ಯೋತಿರ್ಲಿಂಗ ಹಾಗೂ ಭೀಡ ಜಿಲ್ಲೆಯ ಪರಳಿ ಶ್ರೀ ವೈಜನಾಥ ಜ್ಯೋತಿರ್ಲಿಂಗ ಕುಟುಂಬ ಸಮೇತ ದರ್ಶನ ಪಡೆದು ರುದ್ರಾಭಿಷೇಕ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ತಮ್ಮ 77ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಔಂದಾ ಶ್ರೀ ನಾಗನಾಥ ಜ್ಯೋತಿರ್ಲಿಂಗ ಹಾಗೂ ಭೀಡ ಜಿಲ್ಲೆಯ ಪರಳಿ ಶ್ರೀ ವೈಜನಾಥ ಜ್ಯೋತಿರ್ಲಿಂಗ ಕುಟುಂಬ ಸಮೇತ ದರ್ಶನ ಪಡೆದು ರುದ್ರಾಭಿಷೇಕ ನೆರವೇರಿಸಿದರು. ಈ ಸಂದರ್ಭದಲ್ಲಿ ಆಶಾ ಕೋರೆ, ಡಾ.ಪ್ರೀತಿ ಕೋರೆ ದೊಡವಾಡ ಇದ್ದರು. ಇದೇ ಸಂದರ್ಭದಲ್ಲಿ ಎರಡು ದೇವಾಲಯಗಳ ಟ್ರಸ್ಟ್ ಕಮೀಟಿಯ ಸದಸ್ಯರು ಡಾ.ಪ್ರಭಾಕರ ಕೋರೆಯವರನ್ನು ಸತ್ಕರಿಸಿ ಶುಭಕೋರಿದರು.

ವನ ಮಹೋತ್ಸವ: ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ಡಾ.ಪ್ರಭಾಕರ ಕೋರೆಯವರ 77ನೇ ಹುಟ್ಟಹಬ್ಬದ ನಿಮಿತ್ತ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ಬೆಳಗಾವಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕರ ಕೇಂದ್ರಕ್ಕೆ ಭೇಟಿ ನೀಡಿ ಹಣ್ಣು ಹಂಪಲ ಹಾಗೂ ಸಿಹಿ ತಿಂಡಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಡಾ.ಕೋರೆಯವರದು ಅನನ್ಯ ಸಾಧಕ. ಸಾಮಾಜಿಕವಾಗಿ ಅವರು ನೀಡಿರುವ ಕೊಡುಗೆ ಬೆಲೆಕಟ್ಟಲಾರದ್ದು. ಅವರು ಶತಾಯುಷಿಗಳಾಗಿ ಇನ್ನಷ್ಟು ಸೇವೆ ನೀಡಲೆಂದು ಆಶಿಸಿದರು. ಪದವಿಪೂರ್ವ ಪ್ರಾ.ಗಿರಿಜಾ ಹಿರೇಮಠ, ಡಾ.ಜಿ.ಎನ್.ಶೀಲಿ, ಡಾ.ಎಚ್.ಎಸ್. ಚೆನ್ನಪ್ಪಗೋಳ, ಡಾ.ಸಿ. ರಾಮರಾವ್, ಡಾ.ನಂದಿನಿ, ಡಾ.ಮಲ್ಲಣ್ಣ, ಡಾ.ರಾಘವೇಂದ್ರ ಹಜಗೋಳ್ಕರ್ ಇತರರು ಉಪಸ್ಥಿತರಿದ್ದರು.

ರಕ್ತದಾನ ಶಿಬಿರ: ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ರಕ್ತದಾನ ಶಿಬಿರ ಆಯೋಜಿಸಿತ್ತು. ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ರಕ್ತಭಂಡಾರಕ್ಕೆ ರಕ್ತದಾನವನ್ನು ಮಾಡುವುದರ ಮೂಲಕ ವಿಶಿಷ್ಠವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಜ್ಯೋತಿ ಹಿರೇಮಠ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಆಲಪ್ಪನವರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.