ಅಭಿಮಾನಿಗಳಿಂದ ಡಾ.ಪುನೀತ್‌ ರಾಜ್‌ಕುಮಾರ್ ಪುಣ್ಯಸ್ಮರಣೆ

| Published : Oct 31 2025, 01:45 AM IST

ಸಾರಾಂಶ

ಸಂಘವು ನಿರಂತರವಾಗಿ ಸಮಾಜಮುಖಿ ಸೇವೆ ಮಾಡುತ್ತಿದ್ದು, ಪಟ್ಟಣದ ಡಾ.ರಾಜ್‌ ಕುಮಾರ್ ಧಾಮ, ಪುನೀತ್‌ ರಾಜ್‌ಕುಮಾರ್ ಉದ್ಯಾನವನಕ್ಕೆ ಸಂಘದವರು ಸ್ಪಂದಿಸಿದ್ದು ಶಾಸಕರು, ಪುರಸಭೆಯವರು ಪ್ರಗತಿಗೆ ಕೈಜೋಡಿಸಿದ್ದಾರೆ.

ಚನ್ನರಾಯಪಟ್ಟಣ: ನಟ, ಗಾಯಕ, ನಿರೂಪಕ, ನಿರ್ಮಾಪಕರಾಗಿ ಕನ್ನಡದ ಹಿರಿಮೆ ಎತ್ತಿಹಿಡಿದು, ಬಡವಿದ್ಯಾರ್ಥಿಗಳಿಗೆ ಶಕ್ತಿಧಾಮ, ನೇತ್ರದಾನ ಸೇರಿ ಹಲವಾರು ಸಮಾಜ ಮುಖಿ ಸೇವೆ ಮಾಡಿ ಸಂದೇಶಗಳನ್ನು ನೀಡಿದ ನಗುವಿನ ರಾಜ ಡಾ.ಪುನೀತ್‌ ರಾಜ್‌ಕುಮಾರ್ ಎಂದು ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್ ತಿಳಿಸಿದರು. ಅವರು ಪಟ್ಟಣದ ಹಳೇ ಬಸ್ ನಿಲ್ದಾಣದ ಡಾ.ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಏರ್ಪಡಿಸಿದ್ದ 4ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘವು ನಿರಂತರವಾಗಿ ಸಮಾಜಮುಖಿ ಸೇವೆ ಮಾಡುತ್ತಿದ್ದು, ಪಟ್ಟಣದ ಡಾ.ರಾಜ್‌ ಕುಮಾರ್ ಧಾಮ, ಪುನೀತ್‌ ರಾಜ್‌ಕುಮಾರ್ ಉದ್ಯಾನವನಕ್ಕೆ ಸಂಘದವರು ಸ್ಪಂದಿಸಿದ್ದು ಶಾಸಕರು, ಪುರಸಭೆಯವರು ಪ್ರಗತಿಗೆ ಕೈಜೋಡಿಸಿದ್ದಾರೆ ಎಂದರು. ಅಧ್ಯಕ್ಷರಾದ ಗಂಗಣ್ಣ ಬರಗೂರು, ರುದ್ರೇಶ್, ತೀರ್ಥಾಚಾರ್, ಹೇಮಂತ್‌ಕುಮಾರ್, ಕೃಷ್ಣಮೂರ್ತಿ, ಅಶೋಕ್, ದೇವರಾಜ್, ಮುಬಾರಕ್, ಸಂತೋಷ್, ಬಾಲಕೃಷ್ಣ, ಜಯರಾಂ, ಎಂ. ಎಸ್. ಮಂಜು, ರಾಜ್‌ಕುಮಾರ್ ಸಂಘದ ಗೌರವಾಧ್ಯಕ್ಷ ರೇವಣ್ಣ ಮತ್ತಿತರಿದ್ದರು.