ಸಾರಾಂಶ
ಕನಕಪುರ: ಗ್ರಾಮದಲ್ಲಿ ಅರಾಜಕತೆ ಸೃಷ್ಟಿಯಾಗಿ ರಕ್ಷಣೆ ಇಲ್ಲದೆ ಭಯದಿಂದ ಮನೆ, ಆಸ್ತಿ ಬಿಟ್ಟು ಗ್ರಾಮ ತೊರೆದಿದ್ದೇವೆ, ಮತ್ತೆ ಗ್ರಾಮಕ್ಕೆ ಹೋಗಲು ನಮಗೆ ರಕ್ಷಣೆ ನೀಡಿ ಎಂದು ಹೊಂಗಾಡಿದೊಡ್ಡಿ ನಂಜೇಶ್ ಕೊಲೆ ಆರೋಪದಡಿ ಜೈಲು ಸೇರಿರುವ ಆರೋಪಿಗಳ ಕುಟುಂಬದ ಸದಸ್ಯರು ತಮಗೆ ರಕ್ಷಣೆ ನೀಡುವಂತೆ ಜನಪರ ಸಂಘಟನೆ ಸೇರಿ ತಹಸೀಲ್ದಾರ್ ಸಂಜಯ್‌ಗೆ ಮನವಿ ಪತ್ರ ಸಲ್ಲಿಸಿದರು.
ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಸುಮಾರು 150 ವರ್ಷಗಳಿಗೂ ಹಿಂದಿನಿಂದ 140 ಎಕರೆ ಜಮೀನಿನಲ್ಲಿ ಗೇಣಿ ಮಾಡಿಕೊಂಡು ಬಂದಿದ್ದೇವೆ, ಉಳುವವನೇ ಭೂಒಡೆಯ ಕಾಯ್ದೆಯಡಿ ನಾವು ಅರ್ಜಿ ಹಾಕಿಕೊಂಡಿದ್ದು ಸಾಗುವಳಿ ನಿಯಮದಂತೆ ಅದು ಸಾಗುವಳಿ ರೈತರಿಗೆ ಸಿಗಬೇಕಿದೆ. ರೈತರು ಸ್ವಾಧೀನ ಅನುಭವದಲ್ಲಿ ಇದ್ದು ಕೃಷಿ ಮಾಡುತ್ತಿರುವ ಜಮೀನನ್ನು ಶಾಸಕ ಇಕ್ಬಾಲ್ ಹುಸೇನ್ ರಾಜಕೀಯ ಪ್ರಭಾವದಿಂದ ಅಧಿಕಾರ ದುರ್ಬಳಸಿಕೊಂಡು, ಅಧಿಕಾರಿಗಳ ಸಹಕಾರದಿಂದ 66 ಎಕರೆ ಜಮೀನನ್ನ ತಮ್ಮ ಹೆಸರಿಗೆ ಕ್ರಯ ಮಾಡಿಕೊಂಡಿದ್ದಾರೆ. 140 ಎಕರೆ ಭೂಮಿಯಲ್ಲಿ ರೈತರು ಕೃಷಿ ಮಾಡಿಕೊಂಡು ಸ್ವಾಧೀನದಲ್ಲಿದ್ದು ಇತ್ತೀಚೆಗೆ ಜಮೀನು ಮತ್ತು ನಿವೇಶನ ವಿವಾದದ ಹಿನ್ನೆಲೆಯಲ್ಲಿ ಗ್ರಾಮದ ನಂಜೇಶ್ ಕೊಲೆ ಸಂದರ್ಭ ಬಳಸಿಕೊಂಡು ಶಾಸಕರು, ಜಮೀನಿಗಾಗಿ ಹೋರಾಡುತ್ತಿರುವ ನಮ್ಮ ವಿರುದ್ಧ ಕೊಲೆ ಆರೋಪ ಹೊರೆಸಿ ಜೈಲಿಗೆ ಹಾಕಿಸಿದ್ದಾರೆ. ಅಲ್ಲದೆ ನಮ್ಮ ಕುಟುಂಬಗಳ ಮೇಲೆ ಕೊಲೆಯಾದ ನಂಜೇಶ್ ಕಡೆಯವರು ದಾಳಿ ನಡೆಸಿ ನಮ್ಮ ಮನೆ ಮತ್ತು ಜಮೀನುಗಳನ್ನು ನಾಶಗೊಳಿಸಿದ್ದಾರೆ ಎಂದು ಅಳಲು ತೋಡಿಕೊಂಡರು.ಗ್ರಾಮದಲ್ಲಿ ಆದಂತಹ ದೌರ್ಜನ್ಯ ಮತ್ತು ಕೊಲೆ ಬೆದರಿಕೆಯಿಂದ ಹತ್ತಕ್ಕೂ ಹೆಚ್ಚು ಕುಟುಂಬಗಳು ಗ್ರಾಮ ತೊರೆದಿದ್ದೇವೆ ಗ್ರಾಮದಲ್ಲಿ ನಮಗೆ ರಕ್ಷಣೆ ಇಲ್ಲ. ಮತ್ತೆ ಗ್ರಾಮಕ್ಕೆ ಹೋಗಲು ಸೂಕ್ತ ರಕ್ಷಣೆ ಕೊಡಬೇಕು. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಒದಗಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದೇವೆ. ಇಕ್ಬಾಲ್ ಹುಸೇನ್ ಕಾನೂನುಬಾಹಿರವಾಗಿ ರೈತರ ಸಾಗುವಳಿ ಭೂಮಿಯನ್ನು ಅಕ್ರಮವಾಗಿ ಕ್ರಯ ಮಾಡ ಕೊಂಡಿದ್ದಾರೆ. ಇದಕ್ಕೆ ಕೆಲ ರಿಯಲ್ ಎಸ್ಟೇಟ್ ದಲ್ಲಾಳಿಗಳು ಸಹಕಾರ ನೀಡಿ ದೌರ್ಜನ್ಯದಿಂದ ಜಮೀನು ಸ್ವಾಧೀನಪಡಿಸಿಕೊಳ್ಳಲು ಸುರೇಶ್, ಕನಕರಾಜು, ಮಧು, ನಂಜೇಗೌಡ, ಪ್ರಕಾಶ್, ಜವರಾಯಿಗೌಡ, ರಾಜು ಸಹಕರಿಸುತ್ತಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮ ತೊರೆದಿರುವವರನ್ನು ಮತ್ತೆ ಗ್ರಾಮಕ್ಕೆ ಸೇರಿಸಿ ಸಹಬಾಳ್ವೆಯಿಂದ ಜೀವನ ನಡೆಸಲು ತಾಲೂಕು ಆಡಳಿತ ನಮಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ ಜಯಕರ್ನಾಟಕ ಸಂಘಟನೆಯ ಕುಮಾರಸ್ವಾಮಿ, ರೈತ ಸಂಘದ ಚೀಲೂರು ಮುನಿರಾಜು ಹಾಗೂ ನೊಂದ ಸಂತ್ರಸ್ತ ಕುಟುಂಬದವರು ಉಪಸ್ಥಿತರಿದ್ದರು. (ಫೋಟೋ ಕ್ಯಾಪ್ಷನ್) ಕನಕಪುರ ತಾಲೂಕಿನ ಹೊಂಗಾಡಿದೊಡ್ಡಿ ಗ್ರಾಮದಲ್ಲಿ ಕೊಲೆ ಆರೋಪದಡಿ ಗ್ರಾಮ ತೊರೆದಿರುವ ಜೈಲಲ್ಲಿರುವ ಕುಟುಂಬಸ್ಥರು ಗ್ರಾಮದಲ್ಲಿ ವಾಸಿಸಲು ತಮಗೆ ರಕ್ಷಣೆ ನೀಡುವಂತೆ ಕೋರಿ ತಹಸೀಲ್ದಾರ್ ಸಂಜಯ್‌ಗೆ ಮನವಿ ಸಲ್ಲಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))