ಜೀವನದಲ್ಲಿ ಮೌಲ್ಯಗಳನ್ನು ಪಾಲಿಸಿದ ಡಾ.ರಾಜ್‌

| Published : Apr 24 2025, 11:49 PM IST

ಸಾರಾಂಶ

ಎಲ್ಲ ಭಾಷೆಗೆ ಗೌರವ ನೀಡುತ್ತಿದ್ದ ಡಾ,ರಾಜ್‌ ಕುಮಾರ್‌ ಅವರು ಕನ್ನಡ ಭಾಷೆಗೆ ವಿಶೇಷ ಗೌರವ ನೀಡುತ್ತಿದ್ದರು. ಅವರ ಹಾದಿಯಲ್ಲಿ ಸಾಗಬೇಕಾದ ನಾವೆಲ್ಲರೂ ಜಾಗತೀಕರಣದ ಹೆಸರಿನಲ್ಲಿ ಹೆಚ್ಚಾಗಿರುವ ಕಾರ್ಖಾನೆ ,ಕಂಪನಿಗಳಿಂದ ಹಿಂದಿಭಾಷಿಕರ ಪ್ರಭಾವ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ

ಕನ್ನಡಪ್ರಭ ವಾರ್ತೆ, ಮಾಲೂರು

ಇಲ್ಲಿನ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದ ಪುರಸಭೆ ಅವರಣದಲ್ಲಿರುವ ಡಾ.ರಾಜ್‌ ಕುಮಾರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೇರು ನಟ ಡಾ.ರಾಜ್‌ ಕುಮಾರ್‌ ಅವರ 96 ನೇ ಜನ್ಮದಿನಾಚರಣೆಯನ್ನು ಆಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಅವರು ಚಿತ್ರ ಜೀವನ ಹಾಗೂ ನಿತ್ಯ ಜೀವನವನ್ನು ಒಂದೇ ಮೌಲ್ಯದಲ್ಲಿ ಬಾಳಿದವರು ಡಾ.ರಾಜ್‌ ಕುಮಾರ್‌. ಅವರ ಚಲನ ಚಿತ್ರಗಳು ಕುಟುಂಬ ಸಮೇತ ನೋಡಬಹುದಾದ ಮೌಲ್ಯವುಳ್ಳದಾಗಿದ್ದವು. ಹಾಗೇಯೇ ಅವರ ವೈಯಕ್ತಿಕ ಬದುಕು ಸಹ ಸರಳ ಸಜ್ಜಿನಿಕೆ ಮೂರ್ತಿಯಾಗಿ ಬಾಳಿದರವರು ಎಂದರು.

ನಿರ್ಗಳ, ಸ್ವಚ್ಛ ಕನ್ನಡ ಮಾತು

ಅವರ ನಿರ್ಗಳ, ಸ್ವಚ್ಛ ಕನ್ನಡ ಕೇಳಲು ಇಂಪಾಗಿತ್ತು. ಗೋಕಾಕ್‌ ಚಳವಳಿಗೆ ಅವರು ಕರೆ ನೀಡಿದಾಗ ಇಡೀ ರಾಜ್ಯದಲ್ಲಿನ ಕನ್ನಡ ಸಂಘಟನೆಗಳನ್ನು ಒಗ್ಗಟ್ಟಾಗಿ ಹೋರಾಟ ಮಾಡಿದ್ದವು. ಕರ್ನಾಟಕದಲ್ಲಿ ಕನ್ನಡ ವೇ ಸರ್ವಭೌಮ ಎಂದು ನಂಬಿದ್ದ ಡಾ.ರಾಜ್‌ ಕುಮಾರ್‌ ಅವರ ಆದರ್ಶ ಕನ್ನಡ ಪ್ರೇಮ ನಮ್ಮೆಗೆಲ್ಲ ಮಾದರಿ ಎಂದರು.

ಕನ್ನಡಕ್ಕೆ ವಿಶೇಷ ಗೌರವ

ಎಲ್ಲ ಭಾಷೆಗೆ ಗೌರವ ನೀಡುತ್ತಿದ್ದ ಡಾ,ರಾಜ್‌ ಕುಮಾರ್‌ ಅವರು ಕನ್ನಡ ಭಾಷೆಗೆ ವಿಶೇಷ ಗೌರವ ನೀಡುತ್ತಿದ್ದರು. ಅವರ ಹಾದಿಯಲ್ಲಿ ಸಾಗಬೇಕಾದ ನಾವೆಲ್ಲರೂ ಜಾಗತೀಕರಣದ ಹೆಸರಿನಲ್ಲಿ ಹೆಚ್ಚಾಗಿರುವ ಕಾರ್ಖಾನೆ ,ಕಂಪನಿಗಳಿಂದ ಹಿಂದಿಭಾಷಿಕರ ಪ್ರಭಾವ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.ಕನ್ನಡ ಸಂಘಟನೆಗಳ ಮುಖಂಡರುಗಳಾದ ಎಸ್.ಎಂ.ವೆಂಕಟೇಶ್‌ ,ಎಂ.ಎಸ್.ಸುಬ್ರಮಣ್ಯ ಸ್ವರೂಪ್‌ ,ರಾಮಕೃಷ್ಣಪ್ಪ,ಶೀನಪ್ಪ,ದಯಾನಂದ್‌ ,ಚಾಕನಹಳ್ಳಿ ನಾಗರಾಜ್‌ ,ದೇವರಾಜ ರೆಡ್ಡಿ,ಸುರೇಶ್‌ ಕುಮಾರ್‌ ,ಜ್ವಾಲಮುಖಿ ಸತೀಶ್‌ ,ರವಿ,ಭೈರೇ ಗೌಡ ಇನ್ನಿತರರು ಇದ್ದರು.