ಸಾರಾಂಶ
ರಾಣಿಬೆನ್ನೂರು: ಏ. 13ರಂದು ನಡೆಯುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲಾ ಪ್ರತಿನಿಧಿ ಸ್ಪರ್ಧೆ ಮಾಡಿದ್ದು, ನನ್ನನ್ನು ಬೆಂಬಲಿಸಬೇಕು ಎಂದು ಅಭ್ಯರ್ಥಿ ಡಾ. ಸಂಜಯ ನಾಯ್ಕ ಮನವಿ ಮಾಡಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2008- 10ರ ವರೆಗೆ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುವ ಜತೆಗೆ ಸಮಾಜದ ವಿವಿಧ ಸಂಘ- ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜದ ಸೇವೆ ಮಾಡಲಾಗುತ್ತಿದೆ. ಈಗಾಗಲೇ ಚುನಾವಣೆಯ ಹಿನ್ನೆಲೆ ಜಿಲ್ಲಾ ಪ್ರವಾಸ ಮಾಡಲಾಗಿದ್ದು, ಜನರ ಸಮಸ್ಯೆಗಳು ಅರಿವಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಸಂಘಟನೆಯ ಸದಸ್ಯತ್ವ ಹೆಚ್ಚಳ, ತಾಲೂಕು ಸಂಘಕ್ಕೆ ಸ್ವಂತ ಕಚೇರಿ ಸೇರಿದಂತೆ ಇತರ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ನೀಡಬೇಕು ಎಂದರು.ದೇವರಗುಡ್ಡ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಪೂಜಾರ, ಸಂಜೀವ ಶಿರಹಟ್ಟಿ, ಗುರುರಾಜ ಶಿರಹಟ್ಟಿ, ಸುಧೀರ ನಾಯ್ಕ, ಪಂಪಾ ನಾಯ್ಕ, ಸತೀಶ ಹೊಳೆಬಾಗಿಲ, ಅನಂತ ಚಿಂದಿ ಸೇರಿದಂತೆ ಇತರರಿದ್ದರು.ಚುನಾವಣೆಯಲ್ಲಿ ಭಾನುಪ್ರಕಾಶರನ್ನು ಬೆಂಬಲಿಸಲು ಮನವಿ
ಹಾವೇರಿ: ಬ್ರಾಹ್ಮಣ ಸಮಾಜದ ಸಂಘಟನೆ ಹಾಗೂ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಶ್ರೇಯೋಭಿವೃದ್ಧಿಗಾಗಿ ಏ. 13ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡಾ. ಭಾನುಪ್ರಕಾಶ ಅವರನ್ನು ಬೆಂಬಲಿಸುವಂತೆ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಜಿಲ್ಲಾ ಪರಿಷತ್ ಅಧ್ಯಕ್ಷ ಶ್ರೀನಿವಾಸ ಶಿವಪೂಜಿ ಮನವಿ ಮಾಡಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಾಹ್ಮಣ ಸಮಾಜ ಸಂಘಟನೆಯ ಜತೆಗೆ ಸನಾತನ ಧರ್ಮ ಸಂರಕ್ಷಣೆಯನ್ನು ನಿಸ್ವಾರ್ಥವಾಗಿ ಡಾ. ಭಾನುಪ್ರಕಾಶ ಶರ್ಮಾ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೇ ಸಮಾಜದ ವಿವಿಧ ಕಾರ್ಯಗಳಿಗೆ ಬೆನ್ನೆಲುಬಿನಂತೆ ನಿರ್ವಹಣೆ ಮಾಡುತ್ತಿದ್ದು, ಅವರನ್ನು ಬೆಂಬಲಿಸಿದಲ್ಲಿ ಮುಂದಿನ ದಿನಗಳಲ್ಲಿ ಸಮಾಜ ಮತ್ತಷ್ಟು ಸಬಲವಾಗಿ ಸಂಘಟಿತವಾಗಲು ಸಾಧ್ಯವಿದೆ ಎಂದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಮಿತಿ ಸದಸ್ಯ ಪವನಕುಮಾರ ಬಹಾದ್ದೂರದೇಸಾಯಿ ಮಾತನಾಡಿ, ಬ್ರಾಹ್ಮಣ ಮಹಾಸಭಾಕ್ಕೆ ಅಶೋಕ ಹಾರನಹಳ್ಳಿ ಅವರು ಅಧ್ಯಕ್ಷ ನಂತರ ಒಂದು ರೀತಿಯ ಶಕ್ತಿ ಬಂದಂತಾಗಿದೆ. ಈ ಹಿಂದಿನವರಿಗಿಂತ ಸಬಲವಾಗಿ ಮತ್ತು ದೂರದೃಷ್ಟಿಯಿಂದ ಸಮಾಜ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅದ್ಧೂರಿಯಿಂದ ಇದೀಗ ಅವರ ಮೇಲೆ ಸಮಾಜದವರಿಗೆ ಮತ್ತಷ್ಟು ವಿಶ್ವಾಸ ಮೂಡಿದೆ ಎಂದರು.ವಸಂತಮಾಧವ ರಾಜಪುರೋಹಿತ, ಸುಬ್ರಹ್ಮಣ್ಯ ದಿಕ್ಷೀತ್, ಮಾಲತೇಶ ನಾಡಿಗೇರ, ವಿನಾಯಕ ಬಂಕನಾಳ, ವಿಕ್ರಮ ಜೋಶಿ, ಶ್ರೀಪಾದ ದೀಕ್ಷಿತ್ ಇತರರು ಇದ್ದರು.