ಸಾರಾಂಶ
ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿಯಾಗಿ, ಭಾರತೀಯ ಸಂಸ್ಕೃತಿಯ ಉಳಿವಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಮಹಾವಿದ್ಯಾಲಯದ ಇಂಗ್ಲಿಷ್ ಸ್ನಾತಕೋತ್ತಕ ವಿಭಾಗದ ಉಪನ್ಯಾಸಕ ಶಿವಕುಮಾರ ಶಂಕಿನಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿಯಾಗಿ, ಭಾರತೀಯ ಸಂಸ್ಕೃತಿಯ ಉಳಿವಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಮಹಾವಿದ್ಯಾಲಯದ ಇಂಗ್ಲಿಷ್ ಸ್ನಾತಕೋತ್ತಕ ವಿಭಾಗದ ಉಪನ್ಯಾಸಕ ಶಿವಕುಮಾರ ಶಂಕಿನಮಠ ಹೇಳಿದರು.ಕಂಠಿ ಕಾಲೇಜಿನಲ್ಲಿ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದು ಶಿಕ್ಷಣದ ಮಹತ್ವವನ್ನು ಸರ್ವರೂ ಅರಿತಿದ್ದಾರೆ. ಸಮಾಜದ ಉನ್ನತ ಸ್ಥಾನಗಳಲ್ಲಿ ಕಂಡು ಬರುವ ವ್ಯಕ್ತಿಗಳು ಬಹುತೇಕ ಬಡತನ ಹಿನ್ನೆಲೆಯಿಂದ ಬಂದವರಾಗಿದ್ದು, ವಿದ್ಯೆಯಿಂದ ಉನ್ನತ ಹಂತ ತಲುಪುತ್ತಾರೆ ಎಂದ ಅವರು ತಂದೆ- ತಾಯಿಗಳಿಗೆ ತಮ್ಮ ಆಸ್ತಿ, ಒಡವೆಗಳಿಗಿಂತ ಮಕ್ಕಳ ಶಿಕ್ಷಣವೇ ಮುಖ್ಯವಾಗಬೇಕು. ಚೀನಾ ದೇಶದಲ್ಲಿ ಇಂಗ್ಲಿಷ್ ಬೋಧನೆ ಮಾಡುವಂತಹ ಸಾವಿರಾರು ಭಾರತೀಯ ಶಿಕ್ಷಕರು ಕಂಡು ಬರುತ್ತಾರೆ. ಹಾಗೆ ಪ್ರತಿಷ್ಠಿತ ನಾಸಾ ಸಂಸ್ಥೆಯಲ್ಲಿ ಶೇ.20 ರಷ್ಟು ವಿಜ್ಞಾನಿಗಳು ಭಾರತೀಯ ಮೂಲದವರಾಗಿದ್ದಾರೆ. ಪ್ರಪಂಚದ ಯಾವುದೇ ಸಂಸ್ಥೆಗಳಿಗೆ ಭೇಟಿ ನೀಡಿದರೂ ಅಲ್ಲಿ ಭಾರತೀಯ ತಜ್ಞರು, ವೈದ್ಯರು, ಶಿಕ್ಷಕರು ಕಂಡು ಬರುತ್ತಿದ್ದು, ಎಲ್ಲಾ ದೇಶಗಳಿಗೂ ಭಾರತೀಯರ ಜ್ಞಾನದ ಅವಶ್ಯಕತೆ ಇರುವುದನ್ನು ಇದು ಸಾಬೀತು ಪಡಿಸುತ್ತದೆ ಎಂದರು.
ಲೋಕಾಪೂರ ಪ್ರಥಮ ಧರ್ಜೆ ಕಾಲೇಜಿನ ಉಪನ್ಯಾಸಕ ಡಾ. ಮಲ್ಲಯ್ಯ ಸೊನ್ನದ ಅತಿಥಿ ಸ್ಥಾನವಹಿಸಿದ್ದರು. ಡಾ.ಎಂ.ಆರ್.ಜರಕುಂಟಿ, ಪ್ರಾಚಾರ್ಯ ಪ್ರೊ.ಎಂ.ವ್ಹಿ.ಜಿಗಬಡ್ಡಿ ಅಧ್ಯಕ್ಷತೆವಹಿಸಿದ್ದರು. ಐಕ್ಯೂಎಸಿ ಸಂಯೋಜಕಿ ಪ್ರೊ. ಎಸ್.ಎಸ್.ಬಿರಾದಾರ, ಎಸ್.ಬಿ.ಮೇಟಿ, ಡಾ.ಎಲ್.ಎಂ. ರಾಠೋಡ ವೇದಿಕೆ ಮೇಲಿದ್ದರು. ರೋವರ್ ಸ್ಕೌಟ್ಸ್ ಲೀಡರ್ ಡಾ.ಮೃತ್ಯುಂಜಯ ಗವಿಮಠ ಸ್ವಾಗತಿಸಿದರು. ರೋವರ್ ಗಜಾನಂದ ಮಾಲಿ ನಿರೂಪಿಸಿದರು. ಪ್ರೊ. ಪಿ.ಡಿ.ಕುಂಬಾರ ವಂದಿಸಿದರು.