ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ: ಡಾ.ಶಾಮಪ್ರಸಾದ ಮುಖರ್ಜಿ ಅವರು ಶ್ರೇಷ್ಠ ನಾಯಕತ್ವ ಮತ್ತು ರಾಜಕೀಯ ಮೈಲಿಗಲ್ಲಿಗೆ ಉದಾಹರಣೆಯಾಗಿದ್ದಾರೆ. ಭಾರತೀಯ ಜನಸಂಘದ ಸಂಸ್ಥಾಪಕರಾಗಿ ದೇಶ, ಧರ್ಮ ಸೇವೆಯಲ್ಲಿ ತಮ್ಮನ್ನೆ ತಾವು ತೊಡಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ:
ಡಾ.ಶಾಮಪ್ರಸಾದ ಮುಖರ್ಜಿ ಅವರು ಶ್ರೇಷ್ಠ ನಾಯಕತ್ವ ಮತ್ತು ರಾಜಕೀಯ ಮೈಲಿಗಲ್ಲಿಗೆ ಉದಾಹರಣೆಯಾಗಿದ್ದಾರೆ. ಭಾರತೀಯ ಜನಸಂಘದ ಸಂಸ್ಥಾಪಕರಾಗಿ ದೇಶ, ಧರ್ಮ ಸೇವೆಯಲ್ಲಿ ತಮ್ಮನ್ನೆ ತಾವು ತೊಡಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.ಪಟ್ಟಣದ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಡಾ.ಶಾಮಪ್ರಸಾದ ಮುಖರ್ಜಿ ಅವರ ಜನ್ಮದಿನದ ನಿಮಿತ್ತ ನಡೆದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಾನ್ ರಾಷ್ಟ್ರೀಯವಾದಿ ಚಿಂತಕರು ಹಾಗೂ ಶಿಕ್ಷಣ ತಜ್ಞರಾಗಿರುವ ಡಾ.ಶಾಮಪ್ರಸಾದ ಮುಖರ್ಜಿ ಅವರು, ಸದೃಢ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಆದರ್ಶ ತತ್ವಗಳು ದೇಶದ ಯುವ ಸಮುದಾಯಕ್ಕೆ ಸ್ಪೂರ್ತಿ ನೀಡುತ್ತವೆ ಎಂದರು.
ರಾಷ್ಟ್ರೀಯ ಹಿತಾಸಕ್ತಿಯ ಮುಂದೆ ಬೇರೆ ಯಾವುದು ಮುಖ್ಯವಲ್ಲ. ರಾಷ್ಟ್ರಹಿತಕ್ಕಾಗಿ ಬದುಕಿದವರು ಎಂದ ಅವರು, ಮುಖರ್ಜಿ ಅವರು ಕಾಂಗ್ರೆಸ್‌ಗೆ ಪರ್ಯಾಯವಾಗಿ ತ್ಯಾಗ ಹಾಗೂ ಸಮರ್ಪಣೆಯಿಂದ ಜನಸಂಘ ಹುಟ್ಟುಹಾಕಿದರು. ಅದುವೇ ಇಂದು ಭಾರತೀಯ ಜನತಾ ಪಾರ್ಟಿಯಾಗಿದೆ. ಕಾರ್ಯಕರ್ತರು ಸಮರ್ಪಣಾ ಭಾವದಿಂದ ಪಕ್ಷದ ಕೆಲಸ ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಶೀಲವಂತ ಉಮರಾಣಿ ಮಾತನಾಡಿದರು. ದೇವೇಂದರ ಕುಂಬಾರ, ಅಶೋಕ ಅಕಲಾದಿ, ಸಂಜೀವ ದಶವಂತ, ಮಂಜು ದೇವರ, ಪುಟ್ಟುಗೌಡ ಪಾಟೀಲ, ದತ್ತಾ ಬಂಡೇನವರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.