ನುಡಿದಂತೆ ನಡೆಯುವ ಡಾ.ಶಿವಾನಂದ ಭಾರತಿ ಶ್ರೀಗಳು

| Published : Jan 02 2025, 12:33 AM IST

ಸಾರಾಂಶ

12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ವಚನಗಳಲ್ಲಿ ನುಡಿದಂತೆ ಇಂದು ಡಾ.ಶಿವಾನಂದ ಭಾರತಿ ಶ್ರೀಗಳು ನಡೆದು ನಾಡನ್ನು ಉದ್ದರಿಸುತ್ತಿದ್ದಾರೆ ಎಂದು ಕೋಲ್ಹಾಪೂರ ಕನ್ಹೇರಿ ಸಿದ್ದನಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ವಚನಗಳಲ್ಲಿ ನುಡಿದಂತೆ ಇಂದು ಡಾ.ಶಿವಾನಂದ ಭಾರತಿ ಶ್ರೀಗಳು ನಡೆದು ನಾಡನ್ನು ಉದ್ದರಿಸುತ್ತಿದ್ದಾರೆ ಎಂದು ಕೋಲ್ಹಾಪೂರ ಕನ್ಹೇರಿ ಸಿದ್ದನಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು.

ಸಮೀಪದ ಇಂಚಲ ಗ್ರಾಮದಲ್ಲಿ ಬುಧವಾರ ಜರುಗಿದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳವರ 85ನೇ ವರ್ಷದ ವರ್ಧಂತಿ ಮಹೋತ್ಸವ, 55ನೇ ವರ್ಷದ ಪೀಠಾರೋಹಣ, 55ನೇ ವರ್ಷದ ಅಖಿಲ ಭಾರತ ವೇದಾಂತ ಪರಿಷತ್, ಅಂಗವಾಗಿ ಶ್ರೀ ಅಂಬಾ ಪರಮೇಶ್ವರಿ ಅಮೃತ ಶಿಲಾಮಂದಿರದ ಮಹಾದ್ವಾರ, ಕೃಷಿಮೇಳ ಉದ್ಘಾಟಿಸಿ, ವೇದಾಂತ ಪರಿಷತ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿಶ್ವಶಾಂತಿ ಗಾಗಿ ಹಗಲಿರುಳು ಶ್ರಮಿಸುತ್ತಾ ಒಂದಾಗಿ ಬಾಳಿರಿ ವಿಶ್ವ ಶಾಂತಿ ಪಡೆಯಿರಿ ಎಂಬ ಘೋಷಣೆಯೊಂದಿಗೆ ವಿಶ್ವಖ್ಯಾತಿಯನ್ನು ಹೊಂದಿರುವದು ಹೊಂದಿರುವುದು ಶ್ಲಾಘನೀಯವಾಗಿದ್ದು, ಅವರನ್ನು ಪಡೆದ ನಾವೇ ಧನ್ಯರು ಎಂದರು.ಡಾ.ಶಿವಾನಂದ ಭಾರತಿ ಶ್ರೀಗಳು ಬಸವಣ್ಣನವರಂತೆ ಸಮಾನತೆಯ ಸಂತರಾಗಿದ್ದಾರೆ. ಭಕ್ತರನ್ನು ಎಂದಿಗೂ ಮೇಲುಕಿಳೆಂಬ ಭಾವನೆಯಿಂದ ಕಂಡವರಲ್ಲ.

ಶ್ರೀಮಠದ ಭಕ್ತರನ್ನು ಮಕ್ಕಳಂತೆ ಕಾಣುವ ಕರುಣಾಮಯಿ ಡಾ.ಶಿವಾನಂದ ಭಾರತಿ ಶ್ರೀಗಳ ಮುಗ್ಧ ಮನಸ್ಸಿನ ಕಾರಣದಿಂದಾಗಿ ಕುಗ್ರಾಮವಾಗಿದ್ದ ಇಂಚಲವನ್ನು ದೇಶದ ಭೂಪಟದ ನಕ್ಷೆಯಲ್ಲಿ ಅಜರಾಮರವಾಗಿರುವಂತೆ ಮಾಡಿದ್ದಾರೆ. ಅವರಿಗೆ ಅಪಾರ ಶಕ್ತಿಯನ್ನು ಭಗವಂತ ಅವರಿಗೆ ದಯಪಾಲಿಸಿದ್ದಾನೆ.

ವೈದ್ಯಕೀಯ ಮಹಾವಿದ್ಯಾಲಯದಂತಹ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಕಾಲಕ್ಕೆ ತಕ್ಕಂತೆ ಶಿಕ್ಷಣ ಕ್ರಾಂತಿಯನ್ನು ಮಾಡಿ ರಾಜ್ಯದ ಮೂಲೆ ಮೂಲೆಗಳಿಂದ ಮಕ್ಕಳು ಶಿಕ್ಷಣ ಪಡೆಯಲು ಹಗಲಿರುಳು ಶ್ರಮಿಸಿದ್ದಾರೆ. ತನುವಿನಲ್ಲಿ ನಿರ್ಮೋಹ, ಚಿತ್ತದಲ್ಲಿ ನಿರಪೇಕ್ಷೆ, ಭಾವದಲ್ಲಿ ದಿಗಂಭರತೆ ಹೊಂದಿದ ಅದ್ವಿತೀಯ ಕೆಲವೇ ಮಹಾತ್ಮರಲ್ಲಿ ಡಾ.ಶಿವಾನಂದ ಭಾರತಿ ಶ್ರೀಗಳು ಇದ್ದಾರೆ ಎಂದರು.ಇಂದಿನ ಜಾಗತಿಕ ಮಟ್ಟದ ಯುಗದಲ್ಲಿ ನೂತನ ಹೊಸ ತಂತ್ರಜ್ಞಾನದ ಯಂತ್ರೋಪಕರಣಗಳು ಆವಿಸ್ಕಾರಗೊಂಡಿದ್ದು, ಅವುಗಳ ಕುರಿತು ರೈತರಿಗೆ ಸಮರ್ಪಕ ತಿಳಿವಳಿಕೆ ಅವಶ್ಯವಾಗಿದೆ. ವೈಜ್ಞಾನಿಕ ಕೃಷಿ ತಂತ್ರಜ್ಞಾನದ ಮಾಹಿತಿ ಕೊರತೆಯಿಂದಾಗಿ ಪ್ರತಿ ಬಾರಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೊಸ ಹೊಸ ತಂತ್ರಜ್ಞಾನಗಳ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಬೃಹತ್ತ ಕೃಷಿಮೇಳ ಆಯೋಜಿಸಲಾಗಿದ್ದು, ರೈರ ಪರ ಕಾಳಜಿಯನ್ನು ತೋರಿಸುತ್ತಿದೆ. ಪೂಜ್ಯರು ಶ್ರೀಮಠದ ಮೂಲಕ ಸಾವಯವ ಕೃಷಿ ಅಳವಡಿಸಿಕೊಂಡಿದ್ದು ಎಲ್ಲ ರೈತರು ಜನತೆಯ ಉತ್ತಮ ಆರೋಗ್ಯಕ್ಕೆ ಸಾವಯವ ಅನುಕರಣೆ ಮಾಡಿ, ಆರೋಗ್ಯವಂತ ಸಮಾಜಕ್ಕೆ ಕೈಜೋಡಿಸಬೇಕು ಎಂದರು.ಹಂದಿಗುಂದ ವಿರಕ್ತಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಹೊಸ ವರ್ಷದ ಹೆಸರಿನಲ್ಲಿ ಯುವ ಪೀಳಿಗೆ ದಾರಿ ತಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಹೈದರಾಬಾದ ಆಚಾರ್ಯ ಪರಿಶುದ್ಧಾನಂದ ಗಿರಿ ಸ್ವಾಮೀಜಿ, ಆಂಧ್ರಪ್ರದೇಶದ ಉರವನಕೊಂಡ ಕರಿಬಸವಾನಂದ ಸ್ವಾಮೀಜಿ ಮಾತನಾಡಿ, ಡಾ.ಭಾರತಿ ಅಪ್ಪನವರು ಭಕ್ತರನ್ನು ಉದ್ದರಿಸಲು ಬಂದ ಮಹಾನ್ ಸಂತರಾಗಿದ್ದಾರೆ. ಅವರ ಪರಿಶ್ರಮದ ಫಲವಾಗಿ ಇಲ್ಲಿ ಶಿಕ್ಷಣ, ಆರೋಗ್ಯ, ಧಾರ್ಮಿಕ ಕ್ರಾಂತಿಯಾಗುತ್ತಿದೆ. ಪ್ರತಿಯೊಬ್ಬರು ಸಮಾಜಕ್ಕೆ ಕೊಡುಗೆ ನೀಡುವಲ್ಲಿ ತಲ್ಲೀಣರಾದರೆ ಜನ್ಮ ಸಾರ್ಥಕವಾಗಲಿದೆ ಎಂದರು.ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಇಂದು ಸುಕ್ಷೇತ್ರ ಇಂಚಲ ಗ್ರಾಮಕ್ಕೆ ಪ್ರತಿನಿತ್ಯ ಕರ್ನಾಟಕ ಮಾತ್ರವಲ್ಲದೇ ಪಕ್ಕದ ಆಂಧ್ರ, ತೆಲಂಗಾಣ, ಮಹಾರಾಷ್ಟ, ಗೋವಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುತ್ತಿರುವುದನ್ನು ಗಮನಿಸಿದರೆ ಪೂಜ್ಯರ ತಪಶಕ್ತಿಯ ಅರಿವಾಗುತ್ತದೆ. ಪೂಜ್ಯರ 85ನೇ ವರ್ಷದ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಸೌಭಾಗ್ಯ ಎಂದು ತಿಳಿಸಿದರು.

ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ವೇದಿಕೆಯ ಮೇಲೆ ಹಂದಿಗುಂದ ಅಡಿಶಿವಾನಂದ ಸ್ವಾಮೀಜಿ, ಮಂಟೂರ ಸದಾನಂದ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಬೊಮ್ಮಕಪಲ್ಲಿ ಮಾತೋಶ್ರೀ ಪರಾವಿವಿದ್ಯಾನಂದ ಗಿರಿ ಮಾತಾಜಿ, ಕಿಲ್ಲಾತೊರಗಲ್ಲ ಚನ್ನಮಲ್ಲ ಸ್ವಾಮೀಜಿ, ಆಂಧ್ರಪ್ರದೇಶದ ಮಾತೋಶ್ರೀ ಚರನಾಮಂದಗಿರಿ ಅಮ್ಮನವರು, ಶಾಸಕ ಮಹಾಂತೇಶ ಕೌಜಲಗಿ, ವಿ.ಪ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಸರ್ವೋತ್ತಮ ಜಾರಕಿಹೊಳಿ ಹಾಗೂ ಪೂಜ್ಯರು ಗಣ್ಯರು ಇದ್ದರು.ಭಗವಂತನ ನಾಮಸ್ಮರಣೆ ಮಾತ್ರದಿಂದ ಜೀವನದಲ್ಲಿ ಅಧ್ಯಾತ್ಮದ ಅಲೌಕಿಕ ಬೆಳಕು ಮೂಡಿ ಜೀವನ ಸುಂದರವಾಗಿ ಕಾಣಿಸಲು ಪ್ರಾರಂಭವಾಗುತ್ತದೆ. ಜೀವನದಲ್ಲಿ ಪಾಪಕರ್ಮಗಳನ್ನು ಮಾಡಿ ವಯಸ್ಸಾದ ಮೇಲೆ ರಾಮ ರಾಮ ಎನ್ನುವುದಕ್ಕಿಂತ ಶಕ್ತರಾಗಿದ್ದಾಗಲೇ ಭಗವಂತನ ಕಡೆಗೆ ಒಲವು ಮೂಡಿದಾಗ ಮಾತ್ರ ಭಗವಂತನ ನಿಜವಾದ ಸಾಕ್ಷಾತ್ಕಾರವಾಗಲು ಸಾಧ್ಯ.

-ಋಷಿಕೇಶಿಯ ಅಭಿಷೇಕ ಚೈತನ್ಯ ಗಿರಿಜಿ ಮಹಾರಾಜ.