ದೇಶದ ಏಕತೆಗಾಗಿ ಶ್ರಮಿಸಿದ ಡಾ.ಶ್ಯಾಮ ಪ್ರಸಾದ ಮುಖರ್ಜಿ: ಡಾ.ವೀರಣ್ಣ ಚರಂತಿಮಠ

| Published : Jun 24 2024, 01:40 AM IST

ದೇಶದ ಏಕತೆಗಾಗಿ ಶ್ರಮಿಸಿದ ಡಾ.ಶ್ಯಾಮ ಪ್ರಸಾದ ಮುಖರ್ಜಿ: ಡಾ.ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಬಿಜೆಪಿ ನಗರ ಮಂಡಲ ವತಿಯಿಂದ ಬಿಜೆಪಿ ಕಾರ್ಯಾಲಯದಲ್ಲಿ ಡಾ.ಶ್ಯಾಮಪ್ರಸಾದ ಮುಖರ್ಜಿಯವರ ಪುಣ್ಯಸ್ಮರಣೆ ಹಾಗೂ ಜಗನ್ನಾಥರಾವ್ ಜೋಷಿಯವರ ಜನ್ಮದಿನದ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಲ್ಯದಲ್ಲಿಯೇ ದೇಶಪ್ರೇಮಿಯಾಗಿ ದೇಶದ ಏಕತೆಗಾಗಿ ಶ್ರಮಿಸಿದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ಯುವಪೀಳಿಗೆಗೆ ದಾರಿದೀಪವಾಗಿದ್ದಾರೆ. ರಾಷ್ಟ್ರಭಕ್ತರನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಂಡು ಮುಂದೆ ಸಾಗಬೇಕೆಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.

ಬಿಜೆಪಿ ನಗರ ಮಂಡಲ ವತಿಯಿಂದ ನಗರದ ಶಿವಾನಂದ ಜೀನ್‌ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ರಾಷ್ಟ್ರೀಯತೆಯ ಹರಿಕಾರ ಡಾ.ಶ್ಯಾಮಪ್ರಸಾದ ಮುಖರ್ಜಿಯವರ ಪುಣ್ಯಸ್ಮರಣೆ ಹಾಗೂ ಜಗನ್ನಾಥರಾವ್ ಜೋಷಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಮುಖರ್ಜಿ ಅವರು, ಒಂದೇ ದೇಶದಲ್ಲಿ ಎರಡು ಕಾನೂನು, ಎರಡು ಧ್ವಜ ಇರುವುದು ಸಾಧ್ಯವಿಲ್ಲ ಎಂದು ಸಿಡಿದೆದ್ದು ಸಮಗ್ರ ಭಾರತದ ಕನಸು ಕಂಡವರು. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಶ್ರೇಷ್ಠ ನಾಯಕತ್ವ ಮತ್ತು ರಾಜಕೀಯ ಮೈಲಿಗಲ್ಲಿಗೆ ಉದಾಹರಣೆಯಾಗಿದ್ದಾರೆ. ದೇಶದ ಪ್ರದಾನಿ ನರೇಂದ್ರ ಮೋದಿಯವರು ಮುಖರ್ಜಿಯವರ ಕನಸುಗಳನ್ನು ನನಸು ಮಾಡುತ್ತ ಭಾರತ ಜಗದ್ಗುರುವಾಗುವ ನಿಟ್ಟಿನಲ್ಲಿ ಸಾಗಿದ್ದು, ನಮ್ಮೆಲ್ಲರಿಗೆ ಹೆಮ್ಮೆಯಾಗಿದೆ. ರಾಷ್ಟ್ರಕ್ಕಾಗಿ ಜೀವನವನ್ನೇ ಸಮರ್ಪಸಿದ, ಕರ್ನಾಟಕ ಕೇಸರಿ ಎಂದೇ ಖ್ಯಾತರಾಗಿದ್ದ ಜನಸಂಘದ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಜಗನ್ನಾಥ ರಾವ್ ಜೋಷಿ ಆವರ ಜೀವನ ಆದರ್ಶ ನಮಗೆ ಸದಾಕಾಲ ಸ್ಮರಣೀಯ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಡಾ.ಶಾಮ್ ಪ್ರಸಾದ ಮುಖರ್ಜಿ ಹಾಗೂ ಪಂಡಿತ ದಿನದಯಾಳ ಉಪಾಧ್ಯಾಯ ಹೀಗೆ ಹಲವಾರು ಹಿರಿಯ ಪ್ರಮುಖರು ಆಗಿನ ಕಾಂಗ್ರೆಸ್ ಸರ್ಕಾರ ದೇಶ ವಿಭಜನಗೆ ತೆಗೆದುಕೊಂಡಂತಹ ನಿಲುವಿನ ವಿರುದ್ಧವಾಗಿ ನಿಂತು ಹೋರಾಡಿ ತಮ್ಮ ಬಲಿದಾನವನ್ನು ರಾಷ್ಟ್ರಕ್ಕೆ ನೀಡಿದ್ದಾರೆ ಎಂದರು. ಪ್ರಸ್ತಾವಿಕವಾಗಿ ಬಿಟಿಡಿಎ ಮಾಜಿ ಸದಸ್ಯ ಶಿವಾನಂದ ಟವಳಿ ಮಾತನಾಡಿದರು.

ವಿಭಾಗಿಯ ಸಹ ಪ್ರಭಾರಿಗಳಾದ ಬಸವರಾಜ ಯಂಕಂಚಿ, ಮಂಡಲದ ಅಧ್ಯಕ್ಷ ಬಸವರಾಜ ಹುನುಗುಂದ ಪ್ರಧಾನ ಕಾರ್ಯದರ್ಶಿಉಮೇಶ ಹಂಚಿನಾಳ, ಕ್ಯಾತ ವೈದ್ಯ ಡಾ. ಎಂ.ಎಸ್ ದಡ್ಡೆನ್ನವರ, ಉಪಾಧ್ಯಕ್ಷರಾದ ನೀಲಪ್ಪ ಬೇವೂರ, ಕಪ್ಪಯ್ಯ ಮುತ್ತಿನಮಠ, ರಾಘವೇಂದ್ರ ಕುಲಕರ್ಣಿ, ಆನಂದ ದರೆನ್ನವರ, ಧಶರಥ ಪತಂಗೆ, ಜ್ಯೋತಿ ಭಜಂತ್ರಿ, ಕೇಶವ ಭಜಂತ್ರಿ, ಸತ್ಯನಾರಾಯಣ ಹೇಮಾದ್ರಿ, ಲಕ್ಷ್ಮೀನಾರಾಯಣ ಕಾಸಟ, ರಾಜು ಚಿಂತ್ರೆ, ಪರಮೇಶ್ವರ ಮದೂರ, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ವಾರ್ಡ ಮತ್ತು ಬೂತ್ ಅಧ್ಯಕ್ಷರು, ಪ್ರಕೋಷ್ಟದ ಪದಾಧಿಕಾರಿಗಳು ಇತರರು ಪಾಲ್ಗೊಂಡಿದ್ದರು. ಡಾ.ಶ್ಯಾಮಾ ಪ್ರಸಾದ್ ಅವರ ಬಲಿದಾನ ದಿವಸ್ ಅಂಗವಾಗಿ ಏಕ್ ಪೇಡ್ ಮಾಕೇ ನಾಮ್ ಎಂಬ ಆಭಿಯಾನವನ್ನು ಪಕ್ಷದ ಕಾರ್ಯಾಲಯ ಶಿವಾನಂದ ಜಿನ್‌ ನಲ್ಲಿ ಸಸಿ ನೆಡುವುದರ ಮೂಲಕ ಆಚರಿಸಲಾಯಿತು.