ಹಾನಗಲ್ ಕುಮಾರಸ್ವಾಮಿಗಳು 12ನೇ ಶತಮಾನದ ಯುಗ ಪರಿವರ್ತಕ ವಿಶ್ವಗುರು ಅಣ್ಣ-ಬಸವಣ್ಣನ ತತ್ವಾದರ್ಶಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಮುಂದುವರಿಸಿದ್ದಾರೆ ಎಂದು ಗದಗ ಡಂಬಳ ಜಗದ್ಗುರು ಅಭಿಪ್ರಾಯಪಟ್ಟರು.

ಸಿಂಧನೂರು: ಹಾನಗಲ್ ಕುಮಾರಸ್ವಾಮಿಗಳು 12ನೇ ಶತಮಾನದ ಯುಗ ಪರಿವರ್ತಕ ವಿಶ್ವಗುರು ಅಣ್ಣ-ಬಸವಣ್ಣನ ತತ್ವಾದರ್ಶಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಮುಂದುವರಿಸಿದ್ದಾರೆ ಎಂದು ಗದಗ ಡಂಬಳ ಜಗದ್ಗುರು ಅಭಿಪ್ರಾಯಪಟ್ಟರು.

ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಜಯಂತಿ, ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಹಾನಗಲ್ ಕುಮಾರಸ್ವಾಮಿಗಳನ್ನು ಸ್ಮರಿಸುವ ಅಪೂರ್ವ ಅವಕಾಶ ಈ ಮಹೋತ್ಸವದ ಮೂಲಕ ಸಿಕ್ಕಿದೆ. ಎರಡು ದಶಕಗಳಿಂದ ಕುಮಾರಸ್ವಾಮಿಗಳ ಜಯಂತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ ಸಿಂಧನೂರಿನಲ್ಲಿ ಜರುಗಿದ ಉತ್ಸವ ಅತ್ಯಂತ ವಿಶಿಷ್ಟಪೂರ್ಣವಾಗಿತ್ತು ಎಂದರು.

ಹುಬ್ಬಳ್ಳಿ ಮೂರುಸಾವಿರ ಮಠ ಹಾಗೂ ಶಿವಯೋಗ ಮಂದಿರದ ಅಧ್ಯಕ್ಷ ಡಾ.ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ಮಾತನಾಡಿ, ಹಾನಗಲ್ ಕುಮಾರ ಶಿವಯೋಗಿಗಳು ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ಬೋಧಿಸುವ ಜತೆಗೆ ಧಾರ್ಮಿಕ ಜಾಗೃತಿ ಮೂಡಿಸಿದ್ದಾರೆ ಎಂದರು.

ಶಾಸಕ ಹಂಪನಗೌಡ ಬಾದರ್ಲಿ ,ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್‌ ನಾಡಗೌಡ, ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಶೇಗುಣಿಸಿ ವಿರಕ್ತಮಠದ ಮಹಾಂತಸ್ವಾಮೀಜಿ, ಸಿದ್ದಾರೂಢ ಸ್ವಾಮೀಜಿ, ಹರಿದ್ವಾರದ ಸಚ್ಚಿದಾನಂದ ಸ್ವಾಮೀಜಿ, ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ಮಾತನಾಡಿದರು. ಉದ್ಯಮಿ ರಾಜೇಶ ಹಿರೇಮಠ, ಚಂದ್ರಶೇಖರ ಮಿರ್ಜಾಪುರ, ಪಂಚಮಸಿದ್ದಲಿಂಗಸ್ವಾಮೀಜಿ, ಹೊಸಪೇಟೆ ಸಿದ್ದಲಿಂಗದೇವರು ಸೇರಿದಂತೆ 60 ಕ್ಕೂ ಹೆಚ್ಚು ವಿವಿಧ ಮಠಾಧೀಶರು ಭಾಗವಹಿಸಿದ್ದರು.

-----ಫೋಟೊ----

05ಕೆಪಿಎಸ್ಎನ್ಡಿ1: ಸಿಂಧನೂರಿನ ಆರ್‌ಜಿಎಂ ಶಾಲಾ ಮೈದಾನದಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಜಯಂತ್ಯುತ್ಸವ ಹಾಗೂ 11 ದಿನಗಳ ಪ್ರವಚನದ ಸಮಾರೋಪ ನಡೆಯಿತು.