ಮಾಹೆ ಪ್ರಸನ್ನ ಸ್ಕೂಲ್‌ನ ನಿರ್ದೇಶಕರಾಗಿ ಡಾ.ವರ್ಗೀಸ್ ನೇಮಕ

| Published : Jul 07 2024, 01:19 AM IST

ಮಾಹೆ ಪ್ರಸನ್ನ ಸ್ಕೂಲ್‌ನ ನಿರ್ದೇಶಕರಾಗಿ ಡಾ.ವರ್ಗೀಸ್ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ವರ್ಗೀಸ್‌ ಅವರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸಿದ್ದು, ಅಲ್ಲಿ ಅಸಾಂಕ್ರಾಮಿಕ ರೋಗಗಳು ಮತ್ತು ನಿರ್ಧಾರಕಗಳ ವಿಭಾಗದ ಸಂಚಾಲಕರಾಗಿ, ನವದೆಹಲಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿಯಲ್ಲಿ ಆರೋಗ್ಯವಂತ ಜನಸಮುದಾಯ ಮತ್ತು ಅಸಾಂಕ್ರಾಮಿಕ ರೋಗಗಳು ವಿಭಾಗದ ಪ್ರಭಾರಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಮಾಹೆಯ ಪ್ರಸನ್ನ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ನಿರ್ದೇಶಕರಾಗಿ ಡಾ. ಚೆರಿಯನ್‌ ವರ್ಗೀಸ್‌ ನೇಮಕಗೊಂಡಿದ್ದಾರೆ.

ಡಾ. ವರ್ಗೀಸ್‌ ಅವರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸಿದ್ದು, ಅಲ್ಲಿ ಅಸಾಂಕ್ರಾಮಿಕ ರೋಗಗಳು ಮತ್ತು ನಿರ್ಧಾರಕಗಳ ವಿಭಾಗದ ಸಂಚಾಲಕರಾಗಿ, ನವದೆಹಲಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿಯಲ್ಲಿ ಆರೋಗ್ಯವಂತ ಜನಸಮುದಾಯ ಮತ್ತು ಅಸಾಂಕ್ರಾಮಿಕ ರೋಗಗಳು ವಿಭಾಗದ ಪ್ರಭಾರಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಹೃದಯ ರಕ್ತನಾಳದ ರೋಗಗಳ ನಿಯಂತ್ರಣ ಕಾರ್ಯಕ್ರಮವಾದ ಸೀಹಾರ್ಟ್ಸ್‌ ಮತ್ತು ಕ್ಯಾನ್ಸರ್‌ ರೋಗ ನಿಯಂತ್ರಣಕ್ಕಾಗಿ ಸೀಕ್ಯಾನ್‌ಗ್ರಿಡ್ ಎಂಬ ಯೋಜನೆಗಳನ್ನು ಜಾರಿಗೆ ತಂದಿದ್ದರು.

ಕೇರಳ ವಿವಿಯಲ್ಲಿ ವೈದ್ಯಕೀಯ ಪದವಿ, ವಿಕಿರಣ ಚಿಕಿತ್ಸೆಯಲ್ಲಿ ಡಿಪ್ಲೊಮಾ, ವೆಲ್ಲೂರಿನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿನಲ್ಲಿ ವಿಕಿರಣಾತ್ಮಕ ಗ್ರಂಥಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಕೇಂಬ್ರಿಡ್ಜ್‌ ವಿವಿಯಲ್ಲಿ ಎಂಫಿಲ್‌ ಪತ್ತು ಫಿನ್‌ಲೆಂಡ್‌ನ ಟ್ಯಾಂಪೀರ್‌ ವಿವಿಯಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಡಾ. ವರ್ಗೀಸ್‌ 2001 ರಲ್ಲಿ ನೇಶನಲ್‌ ಅಕಾಡೆಮಿ ಆಫ್‌ ಮೆಡಿಕಲ್‌ ಸಾಯನ್ಸಸ್‌ ಇನ್‌ ಕ್ಲಿನಿಕಲ್‌ ಎಪಿಡಿಮಿಯೋಲಜಿಯ ಸದಸ್ಯತನದ ಗೌರವ ಪಡೆದಿದ್ದಾರೆ. ಶೈಕ್ಷಣಿಕ ನಿಯತಕಾಲಿಕೆಗಳಲ್ಲಿ ಸುಮಾರು 90 ಕ್ಕಿಂತಲೂ ಅಧಿಕ ಪ್ರಕಟಣೆಗಳನ್ನು ಹೊಂದಿರುವ ಡಾ. ವರ್ಗೀಸ್‌ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮತ್ತು ಫೆಲೋಶಿಪ್‌ಗಳಿಗೆ ಭಾಜನರಾಗಿದ್ದಾರೆ.