ಸಾರಾಂಶ
ಕೃಷಿ ಮಾರುಕಟ್ಟೆ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಅವರು ಕೃಷಿ ಆರ್ಥಶಾಸ್ತ್ರ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ, ಸಹಕಾರ ವ್ಯವಸ್ಥೆ ಮುಂತಾದ ವಿಚಾರಗಳ ಬಗ್ಗೆ ಪ್ರಕಟಿಸಿದ ಸಂಶೋಧನಾ ಲೇಖನಗಳನ್ನು ಗುರುತಿಸಿ ಅವರನ್ನು ಗೂಗಲ್ ಸ್ಕಾಲರ್ ಎಂದು ಪರಿಗಣಿಸಲಾಗಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಅಂತಾರಾಷ್ಟ್ರೀಯ ಸಂಶೋಧಕರ ಲೇಖನಗಳ ಉಲ್ಲೇಖಕ್ಕೆ ಸಂಬಂಧಿಸಿದಂತೆ ಕೃಷಿ ಮಾರುಕಟ್ಟೆ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಅವರ ಗೂಗಲ್ ಸ್ಕಾಲರ್ ಸ್ಥಾನ ಮೊದಲ ಶೇ. ೧.೮ಕ್ಕೆ ಏರಿಕೆಯಾಗುವ ಮೂಲಕ ಅವರು ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದ್ದಾರೆ. ಡಾ. ವರ್ಮುಡಿ ಅವರು ಕೃಷಿ ಆರ್ಥಶಾಸ್ತ್ರ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ, ಸಹಕಾರ ವ್ಯವಸ್ಥೆ ಮುಂತಾದ ವಿಚಾರಗಳ ಬಗ್ಗೆ ಪ್ರಕಟಿಸಿದ ಸಂಶೋಧನಾ ಲೇಖನಗಳನ್ನು ಗುರುತಿಸಿ ಅವರನ್ನು ಗೂಗಲ್ ಸ್ಕಾಲರ್ ಎಂದು ಪರಿಗಣಿಸಲಾಗಿದೆ. ಡಾ. ವರ್ಮುಡಿ ಅವರ ೧೮೦ಕ್ಕೂ ಅಧಿಕ ಲೇಖನಗಳನ್ನು ಮತ್ತು ಪರಾಮರ್ಶನ ಗ್ರಂಥಗಳನ್ನು ಅಂತರಿಕ ಮತ್ತು ಅಂತಾರಾಷ್ಟ್ರೀಯ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ೬ ತಿಂಗಳಲ್ಲಿ ಡಾ. ವರ್ಮುಡಿ ಅವರ ಲೇಖನಗಳನ್ನು ಇಥಿಯೋಪಿಯಾ, ನೈಜೀರಿಯಾ, ಈಜಿಪ್ಟ್, ಆಫ್ರಿಕಾ, ನೇಪಾಳ, ಘಾನಾ ಮತ್ತು ಬಾಂಗ್ಲಾ ದೇಶಗಳ ಸಂಶೋಧಕರು ಉಲ್ಲೇಖ ಮಾಡಿದ್ದಾರೆ. ಇಂಡಿಯನ್ ಜರ್ನಲ್ ಆಫ್ ಮಾರ್ಕೆಟಿಂಗ್, ದ ಮೈಸೂರು ಎಕಾಮಿಕ್ ರಿವ್ಯೂ, ಸದರ್ನ್ ಎಕನಾಮಿಕ್ಸ್, ಫ್ಯಾಕ್ಟ್ಸ್ ಫಾರ್ ಯು, ಕಿಸಾನ್ ವರ್ಲ್ಡ್, ಆಗ್ರೋ ಇಂಡಿಯಾ, ಇಂಡಿಯ್ ಕೋಕೋ ಅರೆಕನೆಟ್ ಆಂಡ್ ಸ್ಕೈಸಿ ಜರ್ನಲ್, ಫೈನಾನ್ಸಿಯಲ್ ಎಕ್ಸ್ಪ್ರೆಸ್, ಡೆಕ್ಕನ್ ಹೆರಾಲ್ಡ್, ಇಂಡಿಯನ್ ಕೋ ಆಪರೇಟಿವ್ ರಿವ್ಯೂ, ದ ಕೋಪರೇಟರ್ ಮುಂತಾದ ನಿಯತಕಾಲಿಕ ಮತ್ತು ದಿನ ಪತ್ರಿಕೆಗಳಲ್ಲಿ ಅವರ ಲೇಖನಗಳನ್ನು ಪ್ರಕಟಿಸುತ್ತಾರೆ. ಇದರೊಂದಿಗೆ ಕನ್ನಡದ ಯೋಜನಾ, ನಿರಂತರ, ಉದ್ಯಮದರ್ಶಿ, ಅಡಿಕೆ ಪತ್ರಿಕೆ, ಸ್ಪೈಸ್ ಇಂಡಿಯಾಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿದೆ. ಡಾ. ವರ್ಮುಡಿ ಅವರ ಪರಾಮರ್ಶನ ಗ್ರಂಥಗಳು ಅಮೇರಿಕಾದ ೬ ವಿವಿ. ಇಂಗ್ಲೇಂಡ್, ಫಿಜಿ, ಶ್ರೀಲಂಕಾದಲ್ಲಿ ತಲಾ ೧ ವಿವಿ ಹಾಗೂ ಬಾರತದ ೧೨ ವಿವಿಗಳಲ್ಲಿ ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ ಗ್ರಂಥಗಳಾಗಿವೆ. ಈ ತನಕ ಅವರ ಲೇಖನಗಳನ್ನು ಅಮೇರಿಕಾ, ಇಂಗ್ಲೇಂಡ್, ಆಫ್ರಿಕಾ, ಥಾಯ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಇರಾಕ್, ಚೀನಾ. ಮಲೇಷಿಯಾ, ವೆಸ್ಟ್ ಇಂಡೀಸ್, ನೈಜೀರಿಯಾ, ಇತಿಯೋಪಿಯಾ, ಕೀನ್ಯಾ, ನೆದರ್ಲೇಂಡ್, ಯುಗೋಸ್ಲೇವಿಯಾ ಮುಂತಾದ ರಾಷ್ಟ್ರಗಳ ಸಂಶೋಧಕರು ಉಲ್ಲೇಖಿಸಿದ್ದಾರೆ. ಈ ಮಾನದಂಡಗಳ ಆಧಾರದಲ್ಲಿ ಡಾ. ವರ್ಮುಡಿ ಅವರನ್ನು ಗೂಗಲ್ ಸ್ಕಾಲರ್ ಆಗಿ ಪರಿಗಣಿಸಲಾಗಿದೆ.