ಕನ್ನಡ ಚಿತ್ರರಂಗಕ್ಕೆ ಡಾ.ವಿಷ್ಣುವರ್ಧನ್‌ ಕೊಡುಗೆ ಅಪಾರ

| Published : Sep 20 2024, 01:52 AM IST

ಸಾರಾಂಶ

ಚಾಮರಾಜನಗರ: ಸಾಹಸಸಿಂಹ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿ, ಮಾನವೀಯ ಮೌಲ್ಯಗಳ ಹರಿಕಾರರಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಹೇಳಿದರು.

ಚಾಮರಾಜನಗರ: ಸಾಹಸಸಿಂಹ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿ, ಮಾನವೀಯ ಮೌಲ್ಯಗಳ ಹರಿಕಾರರಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಹೇಳಿದರು.ನಗರದ ವಿಶ್ವ ಹಿಂದೂ ಪರಿಷತ್ ಶಾಲೆಯ ಸಮೀಪ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸ್ನೇಹ ಬಳಗ ಹಮ್ಮಿಕೊಂಡಿದ್ದ ವಿಷ್ಣುವರ್ಧನ್‌ ೭೪ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ವಿಷ್ಣುವರ್ಧನ್ ಭಾರತದ ಶ್ರೇಷ್ಠ ಚಲನಚಿತ್ರ ನಟರಾಗಿದ್ದರು.. ಸುಸಂಸ್ಕೃತರು ಹಾಗೂ ಜೀವನ ಮೌಲ್ಯಗಳನ್ನು ಕೋಟ್ಯಾಂತರ ಅಭಿಮಾನಿಗಳಿಗೆ ನೀಡಿದವರು. ವಿಷ್ಣುವರ್ಧನ್ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಸರ್ಕಾರ ಪ್ರತಿ ವರ್ಷ ವಿಷ್ಣುವರ್ಧನ್ ಜಯಂತಿ ಆಚರಿಸಬೇಕು. ಜಿಲ್ಲಾ ಕೇಂದ್ರದಲ್ಲಿ ನಗರಸಭೆ ಒಂದು ವೃತ ಹಾಗೂ ರಸ್ತೆಗೆ ವಿರ್ಷುವರ್ಧನ್ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಭಾರತೀಯ ಚಲನಚಿತ್ರ ರಂಗದ ಅಪರೂಪದ ವ್ಯಕ್ತಿತ್ವ ಹೊಂದಿದ್ದ ನಟ ವಿಷ್ಣುವರ್ಧನ್ ಸಂತನಂತೆ ಬದುಕಿದ್ದಾರೆ. ಕನ್ನಡ ಚಲನಚಿತ್ರ ರಂಗದ ಮೂಲಕ ವಿಶ್ವಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿಷ್ಣುವರ್ಧನ್ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ನಾಡು ,ನುಡಿ ,ಜಲ, ಭಾಷೆಯ ಜೊತೆಗೆ ಸಾಂಸಾರಿಕ ಜೀವನ ,ರಾಷ್ಟ್ರ ಪ್ರೇಮ, ಸಂಸ್ಕೃತಿಯ ರಕ್ಷಣೆ, ಜೀವನದ ಹೊಂದಾಣಿಕೆ ಹಾಗೂ ಸಾಮಾಜಿಕ ಮೌಲ್ಯಗಳ ಚಿಂತನೆಯ ಆದರ್ಶ ಚಿತ್ರಗಳನ್ನು ರಚಿಸಿದ್ದಾರೆ. ಕೋಟಿ ಅಭಿಮಾನಿಗಳಲ್ಲಿ ಹಾಗೂ ಜನರಲ್ಲಿ ಶ್ರೇಷ್ಠವಾದ ಮೌಲ್ಯಗಳನ್ನು ನೀಡಿ, ಮನೋಜ್ಞ ಅಭಿನಯದ ಮೂಲಕ ಮಾನವನ ಪರಿವರ್ತನೆಗೆ ಚಿತ್ರರಂಗದ ಮೂಲಕ ಪ್ರಭಾವ ಬೀರಿದ್ದಾರೆ ಎಂದರು.ಮೈಸೂರಿನಲ್ಲಿ ವಿಷ್ಣುವರ್ಧನ್‌ ವಿಶೇಷವಾದ ಹಾರ್ಟ್ ಗ್ಯಾಲರಿ ಹಾಗೂ ನೆನಪಿನ ಸ್ಥಳವನ್ನು ನಿರ್ಮಿಸಲಾಗಿದೆ. ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿಯವರೆಗಿನ ೧೪.೫ ಉದ್ದದ ರಸ್ತೆಗೆ ವಿಷ್ಣುವರ್ಧನ್ ಹೆಸರನ್ನು ಇಟ್ಟು ಏಷ್ಯಾದಲ್ಲಿಯೇ ಚಿತ್ರರಂಗದ ನಟರ ಹೆಸರನ್ನು ಉದ್ದದ ರಸ್ತೆಗೆ ನೀಡಿ ಗೌರವಿಸಿದೆ ಎಂದರು.

ಸಾಹಸಸಿಂಹ ವಿಷ್ಣುವರ್ಧನ್ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಷ್ಣುವರ್ಧನ್ ಅಭಿಮಾನಿ ಸ್ನೇಹ ಬಳಗದ ಜ.ಸುರೇಶ್ ನಾಗ್ ಹರದನಹಳ್ಳಿ, ಡಾ. ಸುಗಂಧರಾಜ್, ಕರಿನಂಜನಪುರ ಕೂಸಣ್ಣ, ವಕೀಲ ಮಲ್ಲು, ಸಿ. ಡಿ. ಪ್ರಕಾಶ್, ಶಿವಣ್ಣ, ಪುಟ್ಟುವರ್ಧನ್,ನಾಗೇಂದ್ರ, ದೊರೆಸ್ವಾಮಿ, ನಾಗರಾಜು, ಇಲಿಯಾಜ್ ಬಾಬು ಇದ್ದರು.