ಸಾರಾಂಶ
ಆಲಮಟ್ಟಿ ಪುನರ್ವಸತಿ ಕೇಂದ್ರದ ಮುಖ್ಯ ರಸ್ತೆಯಲ್ಲಿ ಚರಂಡಿಯ ನೀರು ಹರಿದು ರಸ್ತೆ ತುಂಬಾ ಗಲೀಜು ಉಂಟಾಗಿತ್ತು.
ಆಲಮಟ್ಟಿ: ಆಲಮಟ್ಟಿ ಆರ್.ಎಸ್ ಪುನರ್ವಸತಿ ಕೇಂದ್ರದಲ್ಲಿ ಮಳೆಯಿಂದ ನಾನಾ ಕಡೆ ಚರಂಡಿ ನೀರು ರಸ್ತೆಗೆ ಹರಿದಿದೆ. ಚರಂಡಿಗೆ ಸಮರ್ಪವಾದ ಟೇಲ್ ಎಂಡ್ ಇಲ್ಲದ್ದರಿಂದ ಚರಂಡಿಯ ಕೊಳಚೆ ಎಲ್ಲವೂ ಆಲಮಟ್ಟಿ ಪೆಟ್ರೋಲ್ ಪಂಪ್ ಆಲಮಟ್ಟಿ ಆರ್.ಎಸ್ ಮುಖ್ಯರಸ್ತೆ ಮೇಲೆ ಹರಿದಿದೆ.
ಈ ಮಾರ್ಗದಲ್ಲಿ ಸಂಚರಿಸುವ ಸಹಸ್ರಾರು ಜನ ಮೂಗು ಮುಚ್ಚಿಕೊಂಡೇ ಚರಂಡಿ ನೀರಿನಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಯಿತು. ಈಗಿರುವ ಚರಂಡಿಗೆ ಟೇಲ್ ಎಂಡ್‌ವರೆಗೆ ನಿರ್ಮಿಸಿ ಹಳ್ಳಕ್ಕೆ ಜೋಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ರಸ್ತೆ ಮೇಲೆ ನಿಂತ ನೀರು:
ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿಗೆ ತೆರಳುವ ಪ್ರವೇಶವ ದ್ವಾರ ಬಳಿ ಹರಿದು ಬರುವ ನೀರು ಹೋಗಲು ಯಾವುದೇ ವ್ಯವಸ್ಥೆ ಮಾಡದ್ದರಿಂದ ನೀರು ರಸ್ತೆಯಲ್ಲಿಯೇ ನಿಂತಿತ್ತು. ಇದರಿಂದ ವಾಹನಗಳು ನೀರಿನಲ್ಲಿಯೇ ಸಂಚರಿಸಿದವು. ರಸ್ತೆ ನಿರ್ಮಿಸುವಾಗಲೇ ಮಳೆ ನೀರು ಸರಾಗವಾಗಿ ಹರಿದು ಹೋಗುವ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ರಸ್ತೆ ನಿರ್ಮಾಣಕ್ಕಾಗಿ ಕೋಟ್ಯಂತರ ರು. ಖರ್ಚು ಮಾಡುವ ಕೆಬಿಜೆಎನ್‌ಎಲ್ ರಸ್ತೆ ಪಕ್ಕ ಚರಂಡಿಯಾಗಲಿ, ಡ್ರೈನೇಜ್ ಆಗಲಿ ನಿರ್ಮಿಸದಿರುವುದೆ ನೀರು ನಿಲ್ಲಲು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು.