ಸಾರಾಂಶ
ನರೇಗಲ್ಲ: ಗದಗ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಜೂ. 16ರಂದು ಬೆಳಗ್ಗೆ 10.30ಕ್ಕೆ ಗದಗನ ಶ್ರೀ ವೀರನಾರಾಯಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲೆಯ ಪ್ರತಿಭಾವಂತ ಬ್ರಾಹ್ಮಣ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಲಿದೆ ಎಂದು ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ಸಂಜೆ ಬ್ರಾಹ್ಮಣ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಜೂ. 16ರಂದು ನಡೆಯುವ ಪ್ರತಿಭಾ ಪುರಸ್ಕಾರದಲ್ಲಿ ಕಳೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 60 ಮತ್ತು ಅದಕ್ಕಿಂತಲೂ ಹೆಚ್ಚಿನ ಅಂಕ ಪಡೆದ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅಂತಹ ವಿದ್ಯಾರ್ಥಿಗಳು ಪಾಲಕರು ತಮ್ಮ ಮಕ್ಕಳ ವಿವರ ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಕೋರಿದರು.ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ನಾಡಿನ ಖ್ಯಾತ ನಗೆ ಭಾಷಣಕಾರ ಗಂಗಾವತಿ ಪ್ರಾಣೇಶ್, ನರಸಿಂಹ ಜೋಷಿ ಅವರನ್ನು ಆಮಂತ್ರಿಸಲಾಗುವುದು. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ಬ್ರಾಹ್ಮಣ ಸಂಘವು ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾದ ಹಿನ್ನೆಲೆಯಲ್ಲಿ ಸಂಘದ ದ್ವಿತೀಯ ವಾರ್ಷಿಕೋತ್ಸವ ಆಚರಿಸಲಾಗುತ್ತದೆ ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ ತೆಂಬದಮನಿ ಮಾತನಾಡಿ, ಜೂ. 16ರಂದು ಜರುಗುವ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಶ್ರೀ ದತ್ತ ಭಕ್ತ ಮಂಡಳಿ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾದ ವಿದ್ಯಾರ್ಥಿಗಳು/ಪಾಲಕರು ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷ ವೆಂಕಟೇಶ ಕುಲಕರ್ಣಿ (ಮೊ.9448469595), ಪ್ರಧಾನ ಕಾರ್ಯದರ್ಶಿ ಅನಿಲ ತೆಂಬದಮನಿ (ಮೊ. 9945524136) ಮತ್ತು ಕೃಷ್ಣ ನಾಡಿಗೇರ (ಮೊ. 9343520581) ಮತ್ತು ನರೇಗಲ್ಲ ಹೋಬಳಿ ಮಟ್ಟದಲ್ಲಿ ನರೇಗಲ್ಲ ಸುತ್ತಲಿನ ಅಬ್ಬಿಗೇರಿ, ಮಾರನಬಸರಿ, ನಿಡಗುಂದಿ, ಕೋಟುಮಚಗಿ, ಜಕ್ಕಲಿ ಮುಂತಾದ ಗ್ರಾಮಗಳವರು ಶ್ರೀ ದತ್ತ ಭಕ್ತ ಮಂಡಳಿ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ (ಮೊ. 9743010359), ಉಪಾಧ್ಯಕ್ಷ ಆದರ್ಶ ಕುಲಕರ್ಣಿ (ಮೊ. 9663272575), ಕಾರ್ಯದರ್ಶಿ ರಘುನಾಥ ಕೊಂಡಿ (ಮೊ. 6364141716), ಎಸ್.ಎಚ್. ಕುಲಕರ್ಣಿ (ಮೊ. 9916338080) ಮತ್ತು ಆನಂದ ಕುಲಕರ್ಣಿ (ಮೊ. 9448344135) ಅವರನ್ನು ಸಂಪರ್ಕಿಸಿ, ತಮ್ಮ ಅರ್ಜಿಯೊಂದಿಗೆ ತಾವು ಪಾಸಾದ ವರ್ಗದ ಅಂಕಪಟ್ಟಿ, ಶಾಲಾ ಬಿಡುಗಡೆ ಪ್ರಮಾಣ ಪತ್ರ (ಎಲ್‌ಸಿ) ಮತ್ತು ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳನ್ನು ಅಡಕಗೊಳಿಸಿ, ಜೂ. 8ರೊಳಗೆ ಸಂಬಂಧಿಸಿದವರಿಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ, ಜಿಲ್ಲಾ ಉಪಾಧ್ಯಕ್ಷ ಪ್ರಾಣೇಶ್ ಕುಲಕರ್ಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಕುಲಕರ್ಣಿ ಉಪಸ್ಥಿತರಿದ್ದರು. ಎಸ್.ಎಚ್. ಕುಲಕರ್ಣಿ, ವಿಶ್ವನಾಥಭಟ್ಟ ಗ್ರಾಮಪುರೋಹಿತ, ಎ.ಜಿ. ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆನಂದ ಕುಲಕರ್ಣಿ, ಅನಂತ ಕುಲಕರ್ಣಿ, ನಾಗರಾಜ ಗ್ರಾಮಪುರೋಹಿತ, ಅರುಣ ಕುಲಕರ್ಣಿ, ಭಾರತಿ ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ಅರ್ಚನಾ ಕುಲಕರ್ಣಿ, ಅನಿತಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ಲಕ್ಷ್ಮಿ ಗ್ರಾಮಪುರೋಹಿತ, ವಿದ್ಯಾ ಗ್ರಾಮಪುರೋಹಿತ, ರೂಪಾ ಗ್ರಾಮಪುರೋಹಿತ, ಸನ್ಮತಿ ಸದರಜೋಷಿ, ರಾಜಶ್ರೀ ಕುಲಕರ್ಣಿ ಇನ್ನೂ ಮುಂತಾದವರಿದ್ದರು.