ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ ರಂಗಭೂಮಿ ಕಲೆಗಳು ನಮ್ಮನ್ನು ಚಲಿಸುವಂತೆ, ಮನರಂಜಿಸುವ, ಕಲಿಸಲು ಮತ್ತು ಬದಲಾಯಿಸುವ ಶಕ್ತಿ ಹೊಂದಿವೆ ಎಂದು ಪ್ರಾಂಶುಪಾಲ ಡಾ.ಕೆ.ನಾರಾಯಣ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ನಿಸರ್ಗ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ, ಮೂರಂಡಹಳ್ಳಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆಮ್ಮದಿಯ ಬದುಕು ತಟ್ಟಿಕೊಳ್ಳಿರಂಗನಾಟಕ, ಬೀದಿನಾಟಕ, ಜನಪದ ಹಾಡು, ನೃತ್ಯ, ಕುಣಿತ, ವಾದ್ಯ, ವೈವಿಧ್ಯಮಯ ಪ್ರಕಾರಗಳಲ್ಲಿ ಮನುಷ್ಯನ ಸಾಧಕ ಬಾಧಕಗಳನ್ನು ಮರೆತು ನೆಮ್ಮದಿ ಬದುಕನ್ನು ಕಟ್ಟಿಕೊಳ್ಳುವ ಹಾಗೆ ಆಗಲು ರಂಗಭೂಮಿ ನಾಟಕ ಪ್ರಮುಖವಾದುದಾಗಿದೆ ಎಂದು ತಿಳಿಸಿದರು. ಒಂದು ನಾಟಕಕ್ಕೆ ಮನುಷ್ಯನ ಬದುಕನ್ನು ಬದಲಿಸುವ ಶಕ್ತಿ ಇದೆ. ರಂಗಭೂಮಿ ನಾಟಕ ಪ್ರಕಾರವು ಅದಷ್ಟೋ ಕಲಾವಿದರ ಬದುಕಿನ ಗೂಡಾಗಿದೆ. ವಿಶ್ವ ರಂಗಭೂಮಿ ದಿನವು ಪ್ರತಿ ವರ್ಷ ಮಾರ್ಚ್ ೨೭ ರಂದು ಪ್ರಪಂಚದಾದ್ಯAತ ಆಚರಿಸಲಾಗುವ ಅಂತರರಾಷ್ಟ್ರೀಯ ದಿನವಾಗಿದೆ. ಇದನ್ನು ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆ (ಐಟಿಐ) ೧೯೬೧ ರಲ್ಲಿ ಗೊತ್ತುಪಡಿಸಿತು ಎಂದರು. ಪ್ರಭಾವಶಾಲಿ ಸಂಗೀತ
ಆಧುನಿಕ ರಂಗಭೂಮಿ ನಾಟಕಗಳು ಮತ್ತು ಸಂಗೀತ ರಂಗಭೂಮಿಯ ಪ್ರದರ್ಶನಗಳನ್ನು ಒಳಗೊಂಡಿದೆ. ಬ್ಯಾಲೆ ಮತ್ತು ಒಪೆರಾದ ಕಲಾ ಪ್ರಕಾರಗಳು ಸಹ ರಂಗಭೂಮಿಯಾಗಿದ್ದು, ನಟನೆ, ವೇಷ ಭೂಷಣಗಳು ಮತ್ತು ವೇದಿಕೆಯಂತಹ ಅನೇಕ ಸಂಪ್ರದಾಯಗಳನ್ನು ಬಳಸುತ್ತವೆ. ಅವು ಸಂಗೀತ ರಂಗಭೂಮಿಯ ಬೆಳವಣಿಗೆಗೆ ಪ್ರಭಾವಶಾಲಿಯಾಗಿದ್ದವು ಎಂದು ವಿವರಿಸಿದರು.ಬೀದಿ ನಾಟಕ ಪ್ರದರ್ಶನ
ನಿಸರ್ಗ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಮೂರಾಂಡಹಳ್ಳಿ ತಂಡದಿಂದ ಹನಿಹನಿ ನೀರು ಬಂಗಾರ ಎಂಬ ಬೀದಿ ನಾಟಕ ಪ್ರದರ್ಶಿಸಲಾಯಿತು. ರಂಗ ಗೀತೆಗಳನ್ನು ಎಂ.ಸಿ.ಜೋತಿ ಮಿಟ್ಟಹಳ್ಳಿ, ರವಿ ಜನಹಳ್ಳಿ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ.ಸುಮತಿ, ಸಹ ಪ್ರಾಧ್ಯಾಪಕಿ ಕೌಸರ್ ಉನ್ನಿಸ, ಸಮನ್ವಯಾಧಿಕಾರಿ ವಿ.ವೆಂಕಟೇಶ್, ಕವಿ ಲಕ್ಷö್ಮಯ್ಯ, ಚಲನಚಿತ್ರ ನಟ ಹಾಗೂ ರಂಗ ನಿರ್ದೇಶಕ ಮೂಗು ಸುರೇಶ್, ನಾಟಕಕಾರ ಜಗದೀಶ್ ನಾಯಕ್, ನಿಸರ್ಗ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ, ಮೂರಂಡಹಳ್ಳಿಯ ಚಿಕ್ಕರೆಡ್ಡೆಪ್ಪ, ಕಲಾವಿದರಾದ ಮೀನಾಕ್ಷಿ ಮೊದಲಾದವರು ಇದ್ದರು..