ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ರನ್ನ ಸಾಂಸ್ಕೃತಿಕ ಭವನದಲ್ಲಿ ಮೂರು ದಿನಗಳವರೆಗೆ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ತಂಡದವರಿಂದ ಶಿವಸಂಚಾರ-2024 ರ ಎಂಬ ಹೆಸರಿನಲ್ಲಿ ಜತೆಗಿರುವನು ಚಂದಿರ, ತಾಳಿಯ ತಕರಾರು ಮತ್ತು ಕಲ್ಯಾಣದ ಬಾಗಿಲು ಎಂಬ ನಾಟಕಗಳನ್ನು ಪ್ರದರ್ಶಿಸಿ ಕಲಾಸಕ್ತರಿಗೆ ರಸದೌತನ ಉಣಬಡಿಸಿದರು.ಈ ವೇಳೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಶಿವಾನಂದ ಕುಬಸದ, ಇಂತಹ ನಾಟಕಗಳನ್ನು ನೋಡುವುದು ನಮ್ಮೇಲ್ಲರ ಭಾಗ್ಯ ಎಂದು ಹೇಳಿ, ನಾವೇಲ್ಲರು ಕಲಾವಿದರನ್ನು ಪ್ರೊತ್ಸಾಹಿಸಿ, ಕಲೆಯನ್ನು ಉಳಸಿ ಬೆಳಸಬೇಕೆಂದರು.
ಶ್ರೀ ಶಿವಕುಮಾರ ಕಲಾಸಂಘದ ಕಲಾವಿದರು ಇನ್ನೂ ಇಂತಹ ನಾಟಕಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಪ್ರದರ್ಶನ ನೀಡಿ ಸಮಾಜದ ಅಂಕು-ಡೊಂಕುಗಳನ್ನು ನೇರವಾಗಿ ಹೇಳುವ ಮಹಾನ್ ಕಾರ್ಯ ಈ ತಂಡದಿಂದ ನಡೆಯುತ್ತಿದೆ. ದೂರದರ್ಶನ, ಕಂಪ್ಯೂಟರ್, ಇಂಟರ್ನೆಟ್ ಮುಂತಾದ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ಪ್ರಭಾವಗಳಿಂದ ಜನರು ನಾಟಕವನ್ನು ನೋಡಲು ಬರುವುದೇ ಇಲ್ಲ ಎನ್ನುವ ಮಾತು ಇಂದು ಅಪವಾದವಾಗಿದೆ. ಪ್ರತಿ ಪ್ರದರ್ಶನಕ್ಕೂ ಕನಿಷ್ಠ ಸಾವಿರಾರು ಸಂಖ್ಯೆ ಯಲ್ಲಿ ಜನರು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಶಿವಸಂಚಾರ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸಷ್ಠಿಸಿಕೊಂಡಿರುವುದು ಇದು ರಂಗಭೂಮಿಗೆ ನೀಡುತ್ತಿರುವ ಅಪಾರ ಕೊಡುಗೆ ಎಂದರು.ನಾಟಕಗಳ ಪ್ರದರ್ಶನದ ಪ್ರತಿ ಸನ್ನಿವೇಶಗಳು ಕ್ಷಣಕ್ಷಣಕ್ಕೂ ಕುತೂಹಲವನ್ನು ಮೂಡಿಸುವಂತಿದ್ದವು. ನಾಟಕ ವೀಕ್ಷಿಸುವ ಪ್ರೇಕ್ಷಕ ವಲಯ ಪ್ರದರ್ಶನ ಮುಕ್ತಾಯವಾದಾಗ ತಾವು ಒಂದು ಪಾತ್ರ ಎಂದು ಜೀವನವನ್ನು ರೂಪಿಸುಕೊಳ್ಳುವ ಅದ್ಭುತ್ ನಟನೆ ಈ ಕಲಾವಿದರಿಗೆ ಲಭಿಸಿದೆ. ಪ್ರಜ್ಞೆಯ ಚೌಕಟ್ಟಗಳನ್ನು ಕಾಲ್ಪನಿಕವೆಂದು ಬಗೆಯದೇ ಬದುಕಿನ ಸತ್ಯದೊಳಗೆ ನೆಲೆನಿಂತಿರುವ ಅಸ್ತಿತ್ವ, ಗುರುತು ಹಾಗೂ ಸಾಮಾಜಿಕ ಪ್ರಜ್ಞೆಯ ರಚನೆಗಳನ್ನು ಮರುರೂಪಿಸುವ ಸೂಚಕವಾಗಿ ಈ ನಾಟಕ ಗಳನ್ನು ನಿರ್ದೇಶನ ಮಾಡಿರುವುದು ಶ್ಲಾಘನೀಯ ಎಂದರು.
ಪ್ರಕಾಶ ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿ, ನಾಟಕಗಳು ಮನರಂಜನೆಯ ಜತೆಗೆ ಸಮಾಜಕ್ಕೆ ಒಂದು ಉತ್ತಮ ಒಳ್ಳೆಯ ಸಂದೇಶವನ್ನು ನೀಡುವಂತೆ ಇದ್ದರೆ ಕಲಾಭಿಮಾನಿಗಳು ಹೃದಯ ಪೂರ್ವಕವಾಗಿ ಸ್ವೀಕರಿಸುತ್ತಾರೆ. ಇದರಿಂದ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಗಳಿಂದ ಜನತೆ ಜಾಗತಗೊಳ್ಳುವಲ್ಲಿ ನಾಟಕಗಳ ಪಾತ್ರ ಹಿರಿದಾಗುವುದರೊಂದಿಗೆ ಕಲೆ ಮತ್ತು ಕಲಾವಿದರು ಉಳಿಯಲು ಸಾಧ್ಯವಿದೆ ಎಂದರು.ಡಾ.ಎಸ್.ಎಂ.ಕುಬಸದ, ಪಿ.ಎಂ.ವಸ್ತ್ರದ, ಕಲ್ಲಪ್ಪಣ್ಣ ಸಬರದ, ಡಾ.ಸಿದ್ದಣ್ಣ ಬಾಡಗಿ, ರಮೇಶ ನಿಡೋಣಿ, ರಮೇಶ ಅಣ್ಣಿಗೇರಿ, ಆನಂದ ಪೂಜಾರಿ, ಚಂದ್ರಶೇಖರ ದೇಸಾಯಿ, ಉದಯ ವಾಳ್ವೇಕರ, ಮಲ್ಲು ಸವದಿ, ಮಹಾದೇವಪ್ಪ ಮಡಿವಾಳರ, ರಮೇಶ ಅರಕೇರಿ ಸೇರಿದಂತೆ ಇತರರು ಇದ್ದರು.