ಸಾರಾಂಶ
ಹೊಸಕೋಟೆ: ತಾಲೂಕಿನ ಮುಗಬಾಳದ ಐತಿಹಾಸಿಕ ಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ 50ನೇ ವರ್ಷದ ಹೂವಿನ ಕರಗ ಮಹೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.
ಹೊಸಕೋಟೆ: ಹೊಸಕೋಟೆ ತಾಲೂಕಿನ ಮುಗಬಾಳದ ಐತಿಹಾಸಿಕ ಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ 50ನೇ ವರ್ಷದ ಹೂವಿನ ಕರಗ ಮಹೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.
ಹೂವಿನ ಕರಗದ ಪ್ರಯುಕ್ತ ವಿಶೇಷವಾದ ಹೂವಿನ ಅಲಂಕಾರ, ಅಭಿಷೇಕ, ಅಗ್ನಿಕುಂಡ ಪ್ರವೇಶ, ವಸಂತೋತ್ಸವ, ಪಲ್ಲಕ್ಕಿಗಳ ಉತ್ಸವ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಗುರುವಾರ ತಡರಾತ್ರಿ ದೇವಾಲಯದಿಂದ ಹೊರಟ ಕರಗ ಗೋವಿಂದ ಗೋವಿಂದ ಎಂಬ ಘೋಷಣೆಯೊಂದಿಗೆ ಮುನ್ನಡೆಯಿತು. ಮೊದಲನೇ ಭಾರಿ ಕರಗ ಹೊತ್ತ ಕರಗದ ಪೂಜಾರಿ ನಾಗರಾಜು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡಿ ಶ್ರದ್ಧಾಭಕ್ತಿಯಿಂದ ಕರ್ತವ್ಯ ನಿರ್ವಹಿಸಿದರು.ಕರಗ ಮಹೋತ್ಸವ ಕಳೆದ ಒಂದು ವಾರದಿಂದ ಅನೇಕ ಪೂಜಾ ಕಾರ‍್ಯಗಳೊಂದಿಗೆ ಹಾಗೂ ಹಸಿ ಕರಗ ಮಹೋತ್ಸವ ಆಚರಿಸಲಾಯಿತು. ಕರಗದ ಪ್ರಯುಕ್ತ ಗ್ರಾಮ ದೇವತೆ ಹಾಗೂ ಗ್ರಾಮದ ಇತರೆ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಕರಗ ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡುತ್ತಾ ಸಂಚರಿಸಿತು. ಬಳಿಕ ಅಗ್ನಿಕೊಂಡ ಪ್ರವೇಶಿಸಿ ಮಹಾಮಂಗಳಾರತಿ ನಡೆಯಿತು. ಕರಗದ ಪೂಜಾರಿಯನ್ನು ಭಕ್ತಾಧಿಗಳು ಅಭಿನಂದಿಸಿದರು. ಪ್ರಮುಖ ಬೀದಿಗಳಲ್ಲಿ ವಿವಿಧ ದೇವತೆಗಳ ಅಂದಾಜು 15 ಪಲ್ಲಕ್ಕಿಗಳು ಮೆರಗು ನೀಡಿದ್ದವು.ಫೋಟೋ: 17 ಹೆಚ್‌ಎಸ್‌ಕೆ 2
ಹೊಸಕೋಟೆ ತಾಲೂಕಿನ ಮುಗಬಾಳದಲ್ಲಿ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ವೀರಗಾರರು ಕರಗದ ಜೊತೆ ಮೆರವಣಿಗೆಯಲ್ಲಿ ತೆರಳಿದರು.