ಬಲಿದಾನಗೈದ ಸೇನಾನಿಗಳ ಕನಸು ನನಸು: ಮಹಾಂತೇಶ ಕವಟಗಿಮಠ

| Published : Aug 17 2024, 12:46 AM IST

ಸಾರಾಂಶ

ಭಾರತ ದೇಶ ವಿಶ್ವಕ್ಕೆ ಮಾದರಿಯಾಗಿ, ವಿಶ್ವಗುರು ಆಗಿ ಹೊರಹೊಮ್ಮುತ್ತಿದ್ದು, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸಾವಿರಾರು ಸೇನಾನಿಗಳ ಕನಸು ಇಂದು ಸಾಕಾರಗೊಳ್ಳುತ್ತಿದೆ ಎಂದು ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಭಾರತ ದೇಶ ವಿಶ್ವಕ್ಕೆ ಮಾದರಿಯಾಗಿ, ವಿಶ್ವಗುರು ಆಗಿ ಹೊರಹೊಮ್ಮುತ್ತಿದ್ದು, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸಾವಿರಾರು ಸೇನಾನಿಗಳ ಕನಸು ಇಂದು ಸಾಕಾರಗೊಳ್ಳುತ್ತಿದೆ ಎಂದು ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಗುರುವಾರ ತಾಲೂಕಿನ ಜುಗೂಳ ಗ್ರಾಮದ ಗಾಂಧಿ ವೃತ್ತದಲ್ಲಿ 78ನೇ ಸ್ವಾತಂತ್ರ್ರೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶ ಸಾತಂತ್ರ್ಯಗೊಂಡು 78 ವರ್ಷ ಪೂರೈಸಿದೆ. ಆದರೆ, ನಮ್ಮ ಮಾತೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ. ಕೇವಲ ಸರ್ಕಾರಗಳು ಮಹಿಳೆಯರಿಗೆ ರಕ್ಷಣೆ ನೀಡಿದರೆ ಸಾಲದು, ನಾವೆಲ್ಲರೂ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರತಿಜ್ಞೆ ಮಾಡಬೇಕಿದೆ ಎಂದರು.

ಇದಕ್ಕೂ ಮೊದಲು ಕೆಎಸ್‌ಎಸ್ ಪ್ರೌಢಶಾಲೆಯಲ್ಲಿ ಮುಖಂಡರಾದ ಅನೀಲ ಕಡೋಲೆ, ಗ್ರಾಪಂ ಬಾಬಾಸಾಬ ತಾರದಾಳೆ, ಸರ್ಕಾರಿ ಗಂಡು ಶಾಲೆಯಲ್ಲಿ ಶಾಬು ಬೆಳಗಲಿ, ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ದೀಪಕ ಪಾಖರೆ ಧ್ವಜಾರೋಹಣ ನೆರವೇರಿಸಿದರು. ನಂತರ ಗ್ರಾಮದ ಎಲ್ಲ ಶಾಲಾ ಮಕ್ಕಳು ಭಾರತ ಮಾತಾ ಕಿ ಜೈ ಎಂಬ ಜೈ ಘೋಷದೊಂದಿಗೆ ಗ್ರಾಮದಲ್ಲಿ ಸಂಚರಿಸಿದರು.

ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ, ಗ್ರಾಪಂ ಅಧ್ಯಕ್ಷ ಕಾಕಾಸಾಹೇಬ ಪಾಟೀಲ, ಉಪಾಧ್ಯಕ್ಷೆ ನೀತಾ ಕಾಂಬಳೆ, ಮುಖಂಡರಾದ ಅನೀಲ ಕಡೋಲೆ, ಸುಧಾಕರ ಗಣೇಶವಾಡಿ, ತಾತ್ಯಾಸಾಹೇಬ ಪಾಟೀಲ, ಅರುಣ ಗಣೇಶವಾಡಿ, ಅನೀಲ ಸುಂಕೆ, ಬಾಬಾಸಾಬ ಪಾಟೀಲ, ಉಮೇಶಗೌಡ ಆಟೀಲ, ರವೀಂದ್ರ ವದಹಾಂಟೆ, ವಿಜಯ ಅಗಸರ, ಅವಿನಾಶ ಪಾಟೀಲ, ಬಾಬಾಸಾಬ ತಾರದಾಳೆ ಪಿಡಿಒ ಶೈಲಶ್ರೀ ಭಜಂತ್ರಿ ಸೇರಿದಂತೆ ಗ್ರಾಪಂ ಎಲ್ಲ ಸದಸ್ಯರು, ಮುಖಂಡರು, ಎಲ್ಲ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.