ಬೇಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ತೊಳಲು ಗ್ರಾಮದ ಮಳಲಿಕೆರೆಯ ಹೂಳು ಎತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭೂಮಿ ಪೂಜೆ ಗುದ್ದಲಿ ಪೂಜೆ ಕಾರ್ಯಕ್ರಮ ಕೆರೆ ಹೂಳು ತೆಗೆಯುವ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಮಂಜುಳರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆಯವರು ಒಂದು ಸರ್ಕಾರದ ಮಾದರಿಯಲ್ಲಿ ಕೆಲಸಗಳನ್ನು ಮಾಡುತ್ತಿದ್ದು, ಇವರಿಗೆ ಸರಿಸಾಟಿಯಾದ ವ್ಯಕ್ತಿಗಳು ಮತ್ತೊಬ್ಬರಿಲ್ಲ ಎಂದು ಕಾರ್ಯಕ್ರಮದ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ದಯಾನಂದ್, ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ್ ಸುವರ್ಣ, ಕೆರೆ ಸಮಿತಿಯ ಅಧ್ಯಕ್ಷರಾದ ಧರ್ಮಯ್ಯ, ಪದಾಧಿಕಾರಿಗಳಾದ ಗಂಗರಾಜು, ಮೇಲ್ವಿಚಾರಕರಾದ ಸವಿತಾ ಸೇವಾ ಪ್ರತಿನಿಧಿ ರೂಪ ಪ್ರತಿಭಾ ಶಿವಣ್ಣ ಹಾಗೂ ಕೃಷಿ ಮೇಲ್ವಿಚಾರಕರಾದ ನಾಗರಾಜ್ ಇದ್ದರು.