ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ತೆರಕಣಾಂಬಿ ಬಳಿ ಜಿಂಕೆ ಸತ್ತ ಪ್ರಕರಣದಲ್ಲಿ ಡಿಆರ್‌ಎಫ್‌ಒ ಸಸ್ಪೆಂಡ್ ಮಾಡಿದ್ದ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಕನ್ನಡಪ್ರಭ ಪತ್ರಿಕೆಯಲ್ಲಿ ಎರಡು ಬಾರಿ ವರದಿ ಬಂದ ಬಳಿಕ ಅಮಾನತ್ತು ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯದಲ್ಲಿ ಜಿಂಕೆಯೊಂದು ಸಾವನ್ನಪ್ಪಿದ್ದು, ಆರ್‌ಎಫ್‌ಒ ಮಂಜುನಾಥ್ ಸೂಚನೆ ಮೇರೆಗೆ ಡಿಆರ್‌ಎಫ್‌ಒ ರಾಮಲಿಂಗಪ್ಪ ಸುಟ್ಟು ಹಾಕಿದ್ದರು. ಜಿಂಕೆ ಪ್ರಕರಣದಲ್ಲಿ ಡಿಆರ್‌ಎಫ್‌ಒ ಸಸ್ಪೆಂಡ್ ಎಂದು ಫೆ.೨೪ ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಜಿಂಕೆ ಸತ್ತ ಸ್ಥಳಕ್ಕೆ ಹೋಗದ ಆರ್‌ಎಫ್‌ಒ ಮೇಲೆ ಕ್ರಮವಿಲ್ಲ ಎಂದು ವರದಿ ಪ್ರಕಟಿಸಿತ್ತು.ಗುಂಡ್ಲುಪೇಟೆ ಬಫರ್ ಜೋನ್ ಆರ್‌ಎಫ್‌ಒ ಮಂಜುನಾಥ್ ಗುಂಡ್ಲುಪೇಟೆ ಬಳಿಯ ಲೇ ಔಟ್ ಮುಂದಿನ ನೆಡುತೋಪು ಕಡಿದ ಪ್ರಕರಣದಲ್ಲೂ ಅರಣ್ಯ ಇಲಾಖೆಯ ಕ್ರಮ ತೆಗೆದುಕೊಂಡಿಲ್ಲ ಎಂದು ಫೆ.೨೯ ರ ಕನ್ನಡಪ್ರಭ ಪತ್ರಿಕೆಯಲ್ಲಿ ಗಮನ ಸೆಳೆದಿತ್ತು. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಪರಮಾಪ್ತ ಆರ್‌ಎಫ್‌ಒ ಮಂಜುನಾಥ್ ಜಿಂಕೆ ಪ್ರಕರಣದಲ್ಲಿ ನೇರ ಹೊಣೆ ಹೊರ ಬೇಕಿದೆ, ನೆಡು ತೋಪು ಪ್ರಕರಣದಲ್ಲಿ ಕ್ರಮ ತೆಗೆದುಕೊಂಡಿಲ್ಲ ಎಂಬ ವರದಿ ಅರಣ್ಯ ಇಲಾಖೆಯ ಚರ್ಚೆಗೆ ಕಾರಣವಾಗಿತ್ತು.ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಪುರ ಮಹದೇವಪ್ಪ ಜಿಂಕೆ ಸತ್ತ ಪ್ರಕರಣದಲ್ಲಿ ಎಸಿಎಫ್, ಆರ್‌ಎಫ್‌ಒ ಏಕೆ ಸಸ್ಪೆಂಡ್ ಏಕೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಅಮಾನತ್ತುಗೊಂಡಿದ್ದ ಡಿಆರ್‌ಎಫ್‌ಒ ರಾಮಲಿಂಗಪ್ಪ ಎಸ್ ಅವರಿಂದ ಪತ್ರ ಬರೆಸಿಕೊಂಡ ಬಳಿಕ ಮಾ.೪ ರಂದು ಅಮಾನತ್ತು ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.