ಸಾರಾಂಶ
ಯುವಕರಲ್ಲಿ ಭಯಭಕ್ತಿ ಮೂಡಿದಾಗ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ.
ಹಗರಿಬೊಮ್ಮನಹಳ್ಳಿ: ರಥ ನಿರ್ಮಾಣಕ್ಕಾಗಿ ಕಟ್ಟಿಗೆಗೆ ಅನುದಾನ ನೀಡಿದ ರಾಜ್ಯದ ಏಕೈಕ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯನವರು ಮಾತ್ರ ಎಂದು ಕೆಎಂಎಫ್ ರಾಜ್ಯಧ್ಯಕ್ಷ ಎಸ್. ಭೀಮಾನಾಯ್ಕ ತಿಳಿಸಿದರು.
ಕೊಟ್ಟೂರೇಶ್ವರ ರಥೋತ್ಸವದ ನಿಮಿತ್ತ ಕೊಟ್ಟೂರಿಗೆ ಭೇಟಿ ನೀಡಿ ಕೊಟ್ಟೂರೇಶ್ವರನ ಆಶಿರ್ವಾದ ಪಡೆದು, ನಂತರ ಹಗರಿಬೊಮ್ಮನಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಟ್ಟೂರು ರಥ ಬಿದ್ದಾಗ ಕ್ಷೇತ್ರದ ಜನತೆಯಲ್ಲಿ ಆತಂಕ ಉಂಟಾಗಿತ್ತು. ಬೃಹತ್ ರಥವನ್ನು ನಿರ್ಮಾಣ ಮಾಡುವುದು ಹೇಗೆ ಎಂಬುವ ಪ್ರಶ್ನೆ ಕಾಡುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ರಥ ನಿರ್ಮಾಣಕ್ಕೆ ₹೨ ಕೋಟಿರೂ ಅನುದಾನ ನೀಡಿ ಜನಮೆಚ್ಚುಗೆಗೆ ಪಾತ್ರರಾದರು. ನಾವು ಶಾಸಕರಾಗಿದ್ದ ಸಂದರ್ಭದಲ್ಲಿ ಕೊಟ್ಟೂರು ಸುತ್ತಮುತ್ತಲಿನ ರಸ್ತೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿದ್ದರಿಂದ ಪಾದಯಾತ್ರಿಗಳಿಗೆ ತುಂಬ ಅನುಕೂಲವಾಗಿದೆ. ಅತಿಹೆಚ್ಚು ಸಂಖ್ಯೆಯಲ್ಲಿ ಯುವಕರು ಪಾದಯಾತ್ರೆ ಮಾಡಿರುವುದು ಖುಷಿ ತಂದಿದೆ. ಯುವಕರಲ್ಲಿ ಭಯಭಕ್ತಿ ಮೂಡಿದಾಗ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ. ಕೊಟ್ಟೂರಿನ ರಥೋತ್ಸವ ರಾಜ್ಯದಲ್ಲಿಯೇ ಪ್ರಸಿದ್ಧಿಯಾಗಿರುವುದು ಕ್ಷೇತ್ರದ ಹೆಮ್ಮೆಯಾಗಿದೆ ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಾಮಣ್ಣ, ಶಫಿ, ಜಗದೀಶ್, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಮುಖಂಡರಾದ ರಾಜೀವ, ದಾಸರ ಪ್ರಕಾಶ್ ಮೇಘರಾಜ, ಅಡಕಿ ಮಂಜುನಾಥ, ಶಿವಕುಮಾರ, ಅಶೋಕ, ಗೂಳಿ ಮಲ್ಲಿಕಾರ್ಜುನ, ಹ್ಯಾಳ್ಯಾದ ಕೊಟ್ರೇಶ, ಪವಾಡಿ ಹನುಮಂತಪ್ಪ, ಚಿಂತ್ರಪಳ್ಳಿ ದೇವೇಂದ್ರ, ಡಿಶ್ ಮಂಜುನಾಥ, ಉಮಾಪತಿ, ಚಿಂತ್ರಪಳ್ಳಿ ಮಂಜುನಾಥ ಇತರರಿದ್ದರು.