ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಸವೇಶ್ವರ ನಗರದಿಂದ ಧರ್ಮಸ್ಥಳಕ್ಕೆ ಬಿಬಿಎಂಪಿ ಮಾಜಿ ಸದಸ್ಯ ಎಸ್.ಎಚ್.ಪದ್ಮರಾಜ್ ನೇತೃತ್ವದ ಪಾದಯಾತ್ರೆ ತಂಡ ಹಾಸನ ಜಿಲ್ಲೆಯ ಬೇಲೂರು ಮೂಲಕ ಮೂಡಿಗೆರೆ ದಾಟಿದೆ.
ಪದ್ಮರಾಜ್ ನೇತೃತ್ವದಲ್ಲಿ ಸತತ 42ನೇ ವರ್ಷದ ಈ ಪಾದಯಾತ್ರೆ ತಂಡವು ಬೇಲೂರಿನ ಇತಿಹಾಸ ಪ್ರಸಿದ್ಧ ಚನ್ನಕೇಶವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಧರ್ಮಸ್ಥಳದತ್ತ ಹೆಜ್ಜೆ ಹಾಕಿತು.
ದೇವರಿಗೆ ಪೂಜೆ ಸಲ್ಲಿಸಿದ ನಂತರ ಬಿಬಿಎಂಪಿ ಮಾಜಿ ಸದಸ್ಯ ಎಸ್.ಎಚ್.ಪದ್ಮರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರೆ ಮಾಡುತ್ತಿದ್ದೇನೆ. ಕ್ಷೇತ್ರದ ಎಲ್ಲ ಜನರಿಗೂ ಒಳಿತಾಗಲೆಂದು ಈ ಪಾದಯಾತ್ರೆ ನಡೆಸಲಾಗುತ್ತಿದೆ.
ಎಲ್ಲರಿಗೂ ಆರೋಗ್ಯ, ನೆಮ್ಮದಿ ಸಿಗಬೇಕು. ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಕೈಗೊಳ್ಳಬೇಕಾದ ಕೆಲಸಗಳನ್ನು ಮುಂದುವರೆಸುತ್ತೇನೆ.
ಇದಕ್ಕೆ ಶಕ್ತಿ ಬಯಸಿ ಶ್ರೀ ಮಂಜುನಾಥನನ್ನು ಪ್ರಾರ್ಥಿಸುತ್ತೇನೆ. ಸಂಕಷ್ಟಗಳ ಸಂದರ್ಭದಲ್ಲಿ ಜನರ ಜೊತೆಗೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
70 ಜನರ ತಂಡ ಈ ಪಾದಯಾತ್ರೆಯಲ್ಲಿದ್ದು ಸುಬ್ರಹ್ಮಣ್ಯನಗರ ಬಿಬಿಎಂಪಿ ಮಾಜಿ ಸದಸ್ಯ ಮಂಜುನಾಥ್ ಅವರೂ ಈ ಯಾತ್ರೆಗೆ ಸಾಥ್ ನೀಡಿದ್ದಾರೆ.