ಹಾಕಿ ಕೂರ್ಗ್: ಡ್ರಿಬ್ಲರ್ಸ್ ಹಂಪ್, ಬ್ಲೆಜ್ ಮೂರ್ನಾಡು ಫೈನಲ್‌ಗೆ

| Published : Dec 01 2024, 01:36 AM IST

ಹಾಕಿ ಕೂರ್ಗ್: ಡ್ರಿಬ್ಲರ್ಸ್ ಹಂಪ್, ಬ್ಲೆಜ್ ಮೂರ್ನಾಡು ಫೈನಲ್‌ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಡಿಬ್ಲರ್ಸ್‌ ಹಂಪ್‌ ಮತ್ತು ಬ್ಲೆಜ್‌ ಮೂರ್ನಾಡು ಫೈನಲ್‌ ಪ್ರವೇಶಿಸಿತು. ಡಿ. 1ರಂದು ವಜ್ರಮಹೋತ್ಸವದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕುತ್ ನಾಡು ಬೆರಳಿನಾಡು ಪ್ರೌಢಶಾಲೆಯ ವಜ್ರಮಹೋತ್ಸವದ ಪ್ರಯುಕ್ತ ನಡೆಯುತ್ತಿರುವ ‘ಹಾಕಿ ಪಂದ್ಯವಾಳಿಯ ಪ್ರಥಮ ಸೆಮಿಫೈನಲ್ಸ್ ಪಂದ್ಯದಲ್ಲಿ ಅತಿಥಿಯ ಡ್ರಿಬ್ಲರ್ಸ್ ಹಂಪ್ ತಂಡವು ಮಾಹದೇವ ಸ್ಪೋರ್ಟ್ಸ್ ಕ್ಲಬ್ ನ್ನು ಟ್ರೈ ಬ್ರೇಕರ್ ನಲ್ಲಿ 3-2 ಗೋಲುಗಳ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.

ಪಂದ್ಯದ ದ್ವಿತೀಯ ಕ್ವಾರ್ಟರ್ ನಲ್ಲಿ ಮಾಹದೇವ ಸ್ಪೋರ್ಟ್ಸ್ ಕ್ಲಬ್ ನ ಆಟಗಾರ ಕಿರಣ್ ಪೆನಾಲ್ಟಿ ಕಾರ್ನರ್ ಗಳಿಸಿದ ಗೋಲಿನಿಂದ 1-0 ಮುನ್ನಡೆ ಪಡೆದುಕೊಂಡಿತು. ಹಿನ್ನಡೆಯೊಂದಿಗೆ ದ್ವಿತೀಯ ಅವಧಿ ಆರಂಬಿಸಿದ ಡ್ರಿಬ್ಲರ್ಸ್ ಹಂಪ್ ತಂಡವು ಸತತ ಆಕ್ರಮಣ ದೊಂದಿಗೆ ಮೋಕ್ಷಿತ್ 49ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಪೂರ್ಣ ಅವಧಿಗೆ 1-1 ಗೋಲಿನ ಸಮಬಲ ಸಾಧಿಸಿತು. ಅಂತಿಮವಾಗಿ ವಿಜೇತರನ್ನು ನಿರ್ಧರಿಸಲು ಶೂಟ್ ಔಟ್ ನಿಯಮ ಅಳವಡಿಸಲಾಯಿತು. ಶೂಟ್ ಔಟ್ ನಲ್ಲಿ ಡ್ರಿಬ್ಲರ್ಸ್ ಹಂಪ್ ತಂಡದ ಆಟಗಾರರಾದ ವಿರಣ್ಣ ಮೋಕ್ಷಿತ್ ಮತ್ತು ಸೋಮಣ್ಣ ಗಳಿಸಿದ ಗೋಲಿನ ನೆರವಿನಿಂದ ಗೆಲುವಿನ ನಗೆ ಬೀರಿದರು. ಮಾಹದೇವ ಬಲಂಬೆರಿ ತಂಡದ ಅತಿಥಿ ಆಟಗಾರರಾದ ನಹಿಮ್ ಮತ್ತು ಮೂಸಸ್ ಮಾತ್ರ ಗೋಲುಗಳಿಸಲು ಸಫಲರಾದರುದ್ವಿತೀಯ ಸೆಮಿಫೈನಲ್ಸ್ ನಲ್ಲಿ ಬ್ಲೆಜ್ ಮೂರ್ನಾಡು ತಂಡವು 2--0 ಗೋಲುಗಳ ಅಂತರದಿಂದ ಕೊಣನಕಟ್ಟೆ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು ಬ್ಲೆಜ್ ಮೂರ್ನಾಡು ತಂಡದ ಪರವಾಗಿ ಅತಿಥಿ ಆಟಗಾರ ಅಂಕುರ್ 25 ನೇ ನಿಮಿಷ ಮತ್ತು ಸುಕುನ್ 48 ನೇ ನಿಮಿಷದಲ್ಲಿ ಗೋಲು ಗಳಿಸಿದರು.

ನಾಳಿನ ಪಂದ್ಯ 9 AM ಮಾಹದೇವ ಸ್ಪೋರ್ಟ್ಸ್ ಕ್ಲಬ್ ಬಲಂಭೆರಿ vs ಕೊಣನಕಟ್ಟೆ ‌XI( ಮೂರನೆ ಸ್ಥಾನ)2PM. ಡ್ರಿಬ್ಲರ್ಸ್ ಹಂಪ್ ಕುತ್ತ್ ನಾಡು vs ಬ್ಲೆಜ್ ಮೂರ್ನಾಡುಪಂದ್ಯಾವಳಿಯ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್, ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ ಅನ್ನಾಡಿಯಂಡ ಪೊನ್ನಣ್ಣ ವಿನೋದ್ ಕುಮಾರ್ ಕುಪ್ಪಂಡ ದಿಲನ್ ಚೊಯಮಾಡಂಡ ಚಂಗಪ್ಪ ಮೂಕಚಂಡ ನಾಚ್ಚಪ್ಪ ಸೋಮಣ್ಣ ಕೊಂಡಿರ ಕೀರ್ತಿ ಮುತ್ತಪ್ಪ ಕಾರ್ಯ ನಿರ್ವಹಿಸಿದರು.ನಾಳಿನ ಕಾರ್ಯಕ್ರಮದ ವಿವರ: ಡಿ ಒಂದರಂದು ವಜ್ರಮಹೋತ್ಸಹದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯ ಕ್ರಮ ದಲ್ಲಿ ಶಾಲಾ ವರದಿ, ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ, ಸಂಚಿಕೆ ಬಿಡುಗಡೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣ, ಉಸ್ತುವಾರಿ ಸಚಿವ ಬೋಸ್ ರಾಜು, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಸಂಸದರಾದ ಯದುವೀರ್ ಒಡೆಯರ್, ಎಂಎಲ್ ಸಿ ಸುಜಾಕುಶಾಲಪ್ಪ, ಬೋಜೇಗೌಡ, ಡಾ.ಧನಂಜಯ್ ಸರ್ಜಿ, ಜಿಲ್ಲಾಧಿಕಾರಿ ವೆಂಕಟರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮ್ ರಾಜನ್, ಶಾಲಾ ಶಿಕ್ಷಣ ಉಪನಿರ್ದೇಶಕರಾದ ರಂಗಧಾಮಪ್ಪ, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಆರ್. ರವಿ, ಎಲ್ಡಿಸಿ ಮುಖ್ಯಸ್ಥ ಅನೂಜ್ ಅಗರ್ವಾಲ್, ಗ್ರಾಸ್ ರೂಟ್ ಮುಖ್ಯಸ್ಥ ಸ್ಯಾಮುಯೆಲ್ ವಿಲ್ಸನ್, ಉದ್ಯಮಿ ನೀಲಿಪಲ್ ಚೌಧರಿ, ಮುಖ್ಯ ಶಿಕ್ಷಕಿ ಕೆ ಎ ದೀಪಾ ಭಾಗವಹಿಸಲಿದ್ದಾರೆ.ಮದ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಂಜಿತಂಡ ಕೆ ಮಂದಣ್ಣ, ದಾನಿಗಳಾದ ಕೊಲ್ಲಿರ ಯು ಕಾವೇರಮ್ಮ, ಉದ್ಯಮಿ ಎಂ ಬಿ ವರುಣ್ ಗಣಪತಿ, ದಾನಿ ನಾಮೇರ ನವೀನ್, ಚೇರಂಡ ಮೋಹನ್ ಕುಶಾಲಪ್ಪ, ಕಂಜಿತಂಡ ಭಾಗ್ಯ ಮಂದಣ್ಣ, ಚೇಮಿರ ಸನ್ನು ಪೊನಪ್ಪ, ಸಿ ಎಮ್ ಕಾರ್ಯಪ್ಪ ಹಾಗೂ ಹಾಕಿ ಕೂರ್ಗ್ ಅಧ್ಯಕ್ಷರಾದ ಲವಕುಮಾರ್ ಭಾಗವಹಿಸಲಿದ್ದಾರೆ.