ದಾಹ ತೀರಿಸಿಕೊಳ್ಳಲು ನಿಂಬೆ​ ಜ್ಯೂಸ್ ಮೊರೆ

| Published : Mar 25 2024, 12:48 AM IST

ಸಾರಾಂಶ

ಬೇಸಿಗೆ ಕಾಲದಲ್ಲಿ ಪ್ರಮುಖವಾಗಿ ದೇಹದಲ್ಲಿನ ನೀರಿನಾಂಶ ಕಡಿಮೆ ಆಗುತ್ತಾ ಹೋಗುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಆದಷ್ಟು ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು

ಕನ್ನಡಪ್ರಭ ವಾರ್ತೆಚಿಕ್ಕಬಳ್ಳಾಪುರ: ಬೆಸಿಗೆಯ ಬಿಸಿ ತಡೆದುಕೊಳ್ಳಲಾಗದ ಜನ, ಬಿಸಿಗಾಳಿಯಿಂದ ದೇಹವನ್ನು ತಂಪಾಗಿಡಲು ಪರದಾಡುತ್ತಿದ್ದಾರೆ. ಸುಲಭವಾಗಿ ನಿಂಬೆ ಹಣ್ಣಿನ ಪಾನಕ, ಜ್ಯೂಸ್​ ಗಳಿಂದ ದೇಹವನ್ನು ತಂಪಾಗಿ ಮಾಡಿಕೊಳ್ಳಬಹುದು, ಇದರಿಂದ ನಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬಂದಿದೆ. ಕೆ.ಜಿ ಸೇಬು ಹಣ್ಣಿನ ಬೆಲೆ 150 ರೂಪಾಯಿ ಆದರೆ, ಕೆ.ಜಿ ನಿಂಬೆ ಹಣ್ಣಿನ ಬೆಲೆ ಇನ್ನೂರು ರೂಪಾಯಿ ಆಗಿದೆ. ಈ ಹಿನ್ನಲೆ ಈಗ ಎಲ್ಲಿ ನೋಡಿದರೂ ನಿಂಬೆ ಹಣ್ಣು ಹಾಗೂ ನಿಂಬೆ ಹಣ್ಣಿನ ಜ್ಯೂಸ್​ನದ್ದೆ ಕಾರುಬಾರಾಗಿದೆ.ಬಿಸಿಗಾಳಿ ಹಾಗೂ ಉಷ್ಣದಿಂದ ಬಾಣಂತಿಯರು, ಗರ್ಭಿಣಿಯರು, ವಯೋ ವೃದ್ದರು,ವಯಸ್ಕರರು ಹಾಗೂ ಮಕ್ಕಳು ತುಂಬಾ ಎಚ್ಚರಿಕರಯಿಂದಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಜ್ಯೂಸ್ ಅಂಗಡಿಗಳಿಗೆ ಬರುವ ಗ್ರಾಹಕರು, ನಿಂಬೆ ಹಣ್ಣಿನ ಜ್ಯೂಸ್​ಗಳನ್ನೇ ಹೆಚ್ಚಾಗಿ ಕೇಳುತ್ತಿದ್ದಾರೆ. ಆದರೆ, ಒಂದು ನಿಂಬೆ ಹಣ್ಣಿನ ಬೆಲೆ 7 ರಿಂದ 8 ರೂಪಾಯಿ ಇದೆ. ಈ ಹಿನ್ನಲೆ ಜ್ಯೂಸ್ ಅಂಗಡಿಯವರು ವಿಧಿಯಿಲ್ಲದೆ ದುಬಾರಿ ಬೆಲೆ ತೆತ್ತು ನಿಂಬೆ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ನಿಂಬೆ ಹಣ್ಣಿಗಂತೂ ಭಾರಿ ಬೇಡಿಕೆ ಬಂದಿದ್ದು, ಮಾರುಕಟ್ಟೆಯಲ್ಲಿ ನಿಂಬೆ ಹಣ್ಣುಗಳು ಆ್ಯಪಲ್ ಬೆಲೆಯನ್ನೆ ಮೀರಿಸಿದೆ.ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಮೆಡಿಸನ್ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ್ ಈ ಕುರಿತು ಮಾತನಾಡಿ,ಬೇಸಿಗೆ ಬಂತೆಂದರೆ ಸಾಕು ಮನುಷ್ಯನ ಅರೋಗ್ಯದಲ್ಲಿ ಹಲವು ರೀತಿಯಲ್ಲಿ ಏರುಪೇರು ಉಂಟಾಗುತ್ತದೆ. ಪ್ರಮುಖವಾಗಿ ದೇಹದಲ್ಲಿನ ನೀರಿನಾಂಶ ಕಡಿಮೆ ಆಗುತ್ತಾ ಹೋಗುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಆದಷ್ಟು ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು ಎಂದು ತಿಳಿಸಿದರು.ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೂಡ, ಮಾರುಕಟ್ಟೆಯಲ್ಲಿ ಸಿಗುವ ಕೃತಕ ಸಕ್ಕರೆ ಅಂಶ ಇರುವ ತಂಪು ಪಾನೀಯಗಳ ಮೊರೆ ಹೋಗ ಬಾರದು. ಇದರಿಂದ ಆರೋಗ್ಯ ಸಮಸ್ಯೆಗಳು ಬರುವ ಜೊತೆಗೆ, ದೀರ್ಘಕಾಲದ ಕಾಯಿಲೆಗಳಾದ ಮಧುಮೇಹದಂತ ಕಾಯಿಲೆಗಳು ಕೂಡ ಬರುವ ಸಾಧ್ಯತೆ ಇರುತ್ತದೆ. ಇದರ ಬದಲು, ಮನೆ ಯಲ್ಲಿಯೇ ರೆಡಿ ಮಾಡಿದ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.ಇದಕ್ಕೆ ಪ್ರಮುಖ ಕಾರಣ ನಿಂಬೆಹಣ್ಣಿನಲ್ಲಿ ಕಂಡು ಬರುವ ಸಿಟ್ರಿಕ್ ಆಮ್ಲ ಹಾಗೂ ವಿಟಮಿನ್ ಸಿ ಅಂಶ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ಬೀರುತ್ತದೆ ಎಂದರು..